Advertisement

ಸಚಿವರ ಗೈರು ಹಾಜರಿಗೆ ಗರಂ!

11:17 PM Feb 19, 2020 | Team Udayavani |

ವಿಧಾನಸಭೆ: ಬೆಳಗ್ಗೆ ಕಲಾಪ ಆರಂಭವಾದಾಗ ಬೆರ ಳೆಣಿಕೆ ಸಚಿವರಷ್ಟೇ ಹಾಜರಿದ್ದು ಬಹಳಷ್ಟು ಮಂದಿ ಗೈರಾಗಿದ್ದಕ್ಕೆ ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಶಾಸಕರು ಗರಂ ಆದರು! ಬುಧವಾರ ಬೆಳಗ್ಗೆ 11.12ಕ್ಕೆ ಸದನ ಆರಂಭವಾದಾಗ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಪ್ರಭು ಚೌಹಾಣ್‌, ಡಾ.ಕೆ.ಸುಧಾಕರ್‌ ಮಾತ್ರ ಇದ್ದರು.

Advertisement

ಸದನದಲ್ಲಿ ಸಚಿವರೇ ಇಲ್ಲ. ಈ ರೋಗ ಎಲ್ಲಾ ಕಾಲ ದಲ್ಲೂ ಇದೆ. ಈ ಕಾಲದಲ್ಲೂ ಮುಂದುವರಿದಿದೆ. ಹೊಸ ಸಚಿವರ ಪೈಕಿ ಡಾ.ಕೆ.ಸುಧಾಕರ್‌ ಮಾತ್ರ ಇದ್ದಾರೆ. ಹೊಸ ಸಚಿವರಾದವರು ಎರಡೇ ದಿನಕ್ಕೆ ಸದನದ ಬಗ್ಗೆ ಆಸಕ್ತಿ ಕಳೆದುಕೊಂಡರೆ ಹೇಗೆ. ಸಚಿವರು, ಅಧಿಕಾರಿಗಳು ಇಲ್ಲದಿದ್ದರೆ ನಮ್ಮ ಮಾತು ಅರಣ್ಯ ರೋದನವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.ಮುಖ್ಯಮಂತ್ರಿ ಬಿ.ಎಸ್‌.ಯಡಿಯೂ ರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಲ್ಲದಿರುವ ಬಗ್ಗೆಯೂ ಕಾಂಗ್ರೆಸ್‌ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರು, ಶಾಸಕರು ಸ್ವಯಂ ಜವಾಬ್ದಾರಿ ಅರಿತು ಸದನಕ್ಕೆ ಹಾಜರಾಗ ಬೇಕೆ ಹೊರತು ಪ್ರತಿ ಬಾರಿ ಹೇಳಿಸಿ ಕೊಳ್ಳ ಬಾರದು. ಮುಖ್ಯ ಸಚೇತ ಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು. ತಕ್ಷ ಣಕ್ಕೆ ಸದನಕ್ಕೆ ಬಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ತಡವಾಗಿದ್ದಕ್ಕೆ ಕ್ಷಮೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next