ಕೊಲಂಬೊ: ಶ್ರೀಲಂಕಾದ ಹಿರಿಯ ಬ್ಯಾಟ್ಸ್‌ಮನ್, ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಪ್ರವಾಸಿ ಭಾರತದೆದುರಿನ ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದಕ್ಕೆ “ವೈಯಕ್ತಿಕ ಕಾರಣ’ ನೀಡಿದ್ದಾರೆ.
ಶ್ರೀಲಂಕಾ ಪ್ರಕಟಿಸಿದ 30 ಸದಸ್ಯರ ತಂಡದಲ್ಲಿ ಏಂಜೆಲೊ ಮ್ಯಾಥ್ಯೂಸ್ ಹೆಸರು ಕೂಡ ಇತ್ತು. 34 ವರ್ಷದ ಮ್ಯಾಥ್ಯೂಸ್ ಕಳೆದ ಇಂಗ್ಲೆಂಡ್ ಸರಣಿಯ ವೇಳೆಯೂ ತಂಡದಲ್ಲಿರಲಿಲ್ಲ.
“ಶ್ರೀಲಂಕಾ ಕ್ರಿಕೆಟ್ ಮಂಡಳಿ 30ರ ಬದಲು 29 ಆಟಗಾರರ ಯಾದಿಯನ್ನು ಪ್ರಕಟಿಸಲಿದೆ. ಏಂಜೆಲೊ ಮ್ಯಾಥ್ಯೂಸ್ ವೈಯಕ್ತಿಕ ಕಾರಣಗಳಿಂದ ಈ ಸರಣಿಯಲ್ಲಿ ಆಡುತ್ತಿಲ್ಲ. ಆಯ್ಕೆಯಾದ ಕ್ರಿಕೆಟಿಗರೆಲ್ಲ ಮಂಡಳಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂಬುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಇದನ್ನೂ ಓದಿ :ಟೆಸ್ಟ್ ಸರಣಿಗೂ ಮುನ್ನ ಕೌಂಟಿ ಪರ ಆಡುವರೇ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್
ಇನ್ನೊಂದು ಮೂಲದ ಪ್ರಕಾರ, ಏಂಜೆಲೊ ಮ್ಯಾಥ್ಯೂಸ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಗೆ ನಿರ್ಧರಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.