Advertisement

16 ತಿಂಗಳ ಬಳಿಕ ಟಿ20ಗೆ ಮರಳಿದ ಮ್ಯಾಥ್ಯೂಸ್‌

10:14 AM Jan 02, 2020 | Team Udayavani |

ಕೊಲಂಬೊ: ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ 16 ಸದಸ್ಯರ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ.

Advertisement

ಹಿರಿಯ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್‌ 16 ತಿಂಗಳ ಬಳಿಕ ತಂಡಕ್ಕೆ ವಾಪಸಾಗಿದ್ದಾರೆ,

ಆದರೆ ವೇಗಿ ನುವಾನ್‌ ಪ್ರದೀಪ್‌ ಅಭ್ಯಾಸದ ವೇಳೆ ಗಾಯಾಳಾಗಿದ್ದು, ಭಾರತ ಪ್ರವಾಸವನ್ನು ತಪ್ಪಿಸಿಕೊಳ್ಳಲಿದ್ದಾರೆ. ಇವರ ಸ್ಥಾನ ಕಸುನ್‌ ರಜಿತ ಪಾಲಾಗಿದೆ.

ಲಸಿತ ಮಾಲಿಂಗ ನಾಯಕತ್ವದ ಶ್ರೀಲಂಕಾ ತಂಡ ಗುರುವಾರ ಭಾರತಕ್ಕೆ ಆಗಮಿಸಲಿದ್ದು, ರವಿವಾರ ಗುವಾಹಟಿಯಲ್ಲಿ ಮೊದಲ ಪಂದ್ಯ ಆಡಲಿದೆ. ಉಳಿದೆರಡು ಪಂದ್ಯಗಳು ಇಂದೋರ್‌ (ಜ. 7) ಮತ್ತು ಪುಣೆಯಲ್ಲಿ (ಜ. 10) ನಡೆಯಲಿವೆ.

ಲಂಕಾ ತಂಡ: ಲಸಿತ ಮಾಲಿಂಗ (ನಾಯಕ), ಧನುಷ್ಕ ಗುಣತಿಲಕ, ಆವಿಷ್ಕ ಫೆರ್ನಾಂಡೊ, ಏಂಜೆಲೊ ಮ್ಯಾಥ್ಯೂಸ್‌, ದಸುನ್‌ ಶಣಕ, ಕುಸಲ್‌ ಪೆರೆರ, ನಿರೋಷನ್‌ ಡಿಕ್ವೆಲ್ಲ, ಧನಂಜಯ ಡಿ ಸಿಲ್ವ, ಇಸುರು ಉದಾನ, ಭನುಕ ರಾಜಪಕ್ಸ, ಒಶಾದ ಫೆರ್ನಾಂಡೊ, ವನಿಂದು ಹಸರಂಗ, ಕಸುನ್‌ ರಜಿತ, ಲಹಿರು ಕುಮಾರ, ಕುಸಲ್‌ ಮೆಂಡಿಸ್‌, ಲಕ್ಷಣ ಸಂದಕನ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next