Advertisement

ಭಾರತ ಪ್ರವಾಸಕ್ಕೆ ಲಂಕಾ ಕ್ರಿಕೆಟಿಗ ಮ್ಯಾಥ್ಯೂಸ್‌ ಫಿಟ್‌

07:38 AM Nov 02, 2017 | Team Udayavani |

ಕೊಲಂಬೊ: ಗಾಯದ ಕಾರಣ ಪಾಕಿಸ್ಥಾನ ವಿರುದ್ಧ ನಡೆದ ಎರಡು ಟೆಸ್ಟ್‌ ಪಂದ್ಯಗಳಿಂದ ಹೊರಗುಳಿದಿದ್ದ ಶ್ರೀಲಂಕಾದ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್‌ ಭಾರತ ಪ್ರವಾಸಕ್ಕೆ ಫಿಟ್‌ ಆಗಿದ್ದಾರೆ. 

Advertisement

ಇದು ಸಹಜವಾಗಿ ಹೀನಾಯ ಸ್ಥಿತಿಯಲ್ಲಿದ್ದ ಲಂಕಾ ತಂಡಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮ್ಯಾಥ್ಯೂಸ್‌ ಮತ್ತು ಕುಸಲ್‌ ಪೆರೆರ ಇಬ್ಬರೂ ಆಯ್ಕೆಗೆ ಲಭ್ಯ ಇರುವುದಾಗಿ ಲಂಕಾ ಕ್ರಿಕೆಟ್‌ ಮಂಡಳಿಗೆ ಮಾಹಿತಿ ನೀಡಿದ್ದಾರೆ.  ಮಾಜಿ ನಾಯಕ ಮ್ಯಾಥ್ಯೂಸ್‌ ಪಾಕ್‌ ವಿರುದ್ಧ 2 ಟೆಸ್ಟ್‌ಗೆ ಅಲಭ್ಯವಾಗಿರುವುದು ದೊಡ್ಡ ಹೊಡೆತಬಿದ್ದಿತ್ತು. ಸರಣಿ ಸೋಲಿಗೂ ಕಾರಣವಾಗಿತ್ತು. 

ನ.16ರಿಂದ ಭಾರತ ಆತಿಥ್ಯದಲ್ಲಿ ಭಾರತ ಮತ್ತು ಲಂಕಾ ನಡುವೆ 3 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದೆ. ಅನಂತರ ಉಭಯ ರಾಷ್ಟ್ರಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಶ್ರೀಲಂಕಾ ಈ ವರ್ಷದ ಅಂತ್ಯದೊಳಗೆ ಹೊಸ ಕೋಚ್‌ ಒಬ್ಬರನ್ನು ಹೆಸರಿಸುವ ಸಾಧ್ಯತೆಯಿದೆ. ನಿಕ್‌ ಪೋಥಾಸ್‌ ಸಹಿತ ನಾಲ್ವರು ಕೋಚ್‌ಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ವರ್ಷಾಂತ್ಯದಲ್ಲಿ ನಿರ್ಧಾರಕ್ಕೆ ಬರಬಹುದು ಎಂದು ಆ್ಯಶೆ ಡಿ’ಸಿಲ್ವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next