Advertisement
ಜಯಾ ಮೂರ್ತಿ: ಹರಿಯುವ ನದಿ, ರವಿ ಮುಳುಗುವ ಸಮಯದಲ್ಲಿ ನಿಮ್ಮನ್ನು ಭೇಟಿಯಾಗುತ್ತಿದ್ದೇನೆ. ಏನಿದೆ ಮನದಲ್ಲಿ ?
Related Articles
Advertisement
ಜಯ: ನಿಮ್ಮ ಸಂಶೋಧನ ಪ್ರಬಂಧದಲ್ಲಿ ಭಾರತದ ಮಹಿಳೆಯರ ಬಗ್ಗೆ ಉಲ್ಲೇಖವಿದೆ. ಈ ಬಗ್ಗೆ ತಿಳಿಸಿ
ಆಂಜೆಲಾ: ಅಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಸ್ತ್ರೀ ಪಾತ್ರ ಅಂದು- ಇಂದು , ಹಿಂದೂ ಧರ್ಮದಲ್ಲಿ ಮಹಿಳೆ ಸಹಿತ ಇನ್ನೂ ಹಲವು ವಿಚಾರಗಳಿವೆ. ನಿಮ್ಮನ್ನು ಪರಿಚಯಿಸಿದ ಕಥೇರಿನ ಅವರಿಗೆ ನಾನು ಆಭಾರಿ. ಮುಂದೆ ಅವರ ಜತೆ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದು ನಿಜಕ್ಕೂ ವಿಸ್ಮಿತ.
ಜಯ: ಭಾರತಕ್ಕೆ ನಿಮ್ಮ ಪ್ರಥಮ ಭೇಟಿ ಯಾವಾಗ? ಅದರ ಅನುಭವ ಹೇಳುತ್ತೀರಾ ?
ಆಂಜೆಲಾ: ಬಾಲ್ಯದ ಕನಸು ನನಸಾಗಿದ್ದು 1990ರಲ್ಲಿ. ಓದಿ ಸಂಗ್ರಹಿಸಿದ್ದ ಭಾರತದ ನಿಧಿಯ ಗಣಿ ಕಣ್ಣಾರೆ ನೋಡಿ ಅನುಭವಿಸುವ ಅವಕಾಶ. ಮೊದಲ ಹೆಜ್ಜೆ ಆ ಪವಿತ್ರ ಭೂಮಿಯಲ್ಲಿ ಇಟ್ಟಿದ್ದರೂ ಎಲ್ಲವೂ ಪರಿಚಯವಾಗಿದೆ ಎಂದೆನಿಸುತ್ತಿತ್ತು. ನಿಜಕ್ಕೂ ನಮ್ಮ ಹಿಂದಿ ಪ್ರೊಫೆಸರ್ ಡೊನತೆಲ್ಲ ದೊಲ್ ಚೀ ನಿ ಹೇಳುವಂತೆ ಇದು ಒಂದು ಭಾರತದ ಚಮತ್ಕಾರವೇ ಸರಿ. ಮೊದಲ ಭೇಟಿಯಲ್ಲಿ ಮುಂಬಯಿ, ಪೂನಾಕ್ಕೆ ತೆರಳಿ ಅಲ್ಲಿನ ಕಸ್ತೂರ್ಬಾ ಆಶ್ರಮದಲ್ಲಿ ಸ್ನಾತಕೋತ್ತರ ಪದವಿಯ ಸಂಶೋಧನ ಪ್ರಬಂಧಕ್ಕಾಗಿ ಕೆಲಸ ಮಾಡಿದೆ. ಇಟಲಿಗೆ ಬಂದು ಪದವಿ ಗಳಿಸಿದೆ. ಆನಂತರ ವಿದ್ಯಾರ್ಥಿ ವೇತನದ ಮೇರೆಗೆ ದೆಹಲಿಗೆ ತೆರಳಿದೆ. ಅನಂತರ ಕೆಲಸದ ಪ್ರಯುಕ್ತ ಲಕ್ನೋ, ವಾರಣಾಸಿಗೆ ಹೋಗುವ ಮತ್ತೂಂದು ಆವಕಾಶ ಸಿಕ್ಕಿತು. ಇನ್ನೊಂದು ಸುವರ್ಣಾವಕಾಶವೆಂದರೆ ಬನವಾಸಿ ಆಶ್ರಮದಲ್ಲಿ ವಿಚಿತ್ರ ನಾರಾಯಣ್ ಅವರನ್ನು ಸಂದರ್ಶಿಸಿದ್ದು. ಅವರಿಂದ ಮಹಾತ್ಮ ಗಾಂಧಿ, ಖಾದಿಯ ಪ್ರಾಮುಖ್ಯ ಅರಿಯಲು ಸಾಧ್ಯವಾಯಿತು. ಅಲ್ಲಿಂದ ಬಳಿಕ ಲಕ್ಷ್ಮೀ ಗಾಂಧಿ ಆಶ್ರಮದಲ್ಲಿ ಹಲವು ಕಾಲ ಕಳೆದು ಡಾಕ್ಟರೇಟ್ ಪದವಿಗಾಗಿ ಗಾಂಧಿಯವರ ಆಶ್ರಮಗಳು, ಸಂಸ್ಥೆಗಳ ಮೇಲೆ ವಿಷಯ ಸಂಗ್ರಹಿಸಿದೆ. ಲಕ್ಷ್ಮೀ ಆಶ್ರಮ ಬಹಳ ಮೆಚ್ಚುಗೆಯಾಯಿತು. ಕಾರಣ ಅವರ ಸರಳ ಜೀವನ, ಮಹಾತ್ಮ ಗಾಂಧಿ ಅವರ ತಣ್ತೀಗಳ ಪರಿಪಾಲನೆ, ಮಾನವೀಯತೆ ಮೌಲ್ಯಗಳತ್ತ ಗಮನ, ಶ್ರಮಜೀವನದ ಮಕ್ಕಳ ಮುಗುಳ್ನಗೆ ಆತ್ಮತೃಪ್ತಿಯನ್ನು ನೀಡಿತ್ತು.
ಜಯ: ವಾರಣಾಸಿಯ ಜೀವನಾನುಭವ ಹೇಗಿತ್ತು?
ಆಂಜೆಲಾ: ಅದು ಭೂ ಕೈಲಾಸ ಪರಮಾನಂದ ತಂದಿತ್ತು. ಶಿವನ ಸ್ಥಳ, ಪವಿತ್ರ ಗಂಗೆ, ಅಲ್ಲಿಯ ಆರು ತಿಂಗಳ ವಾಸ ಅಚ್ಚಳಿಯದ ನೆನಪು. ತುಲಸೀಘಾಟ್‌ನಲ್ಲಿ ಒಂದು ಹಳೆಯ ಅರಮನೆಯಾಗಿದ್ದ ಮನೆಯಲ್ಲಿ ವಾಸ, ಬೆಳಗಿನ ಬ್ರಾಹ್ಮಿ ಮೂಹೂರ್ತದಿಂದ ಸೂರ್ಯಾಸ್ತಮದ ತನಕ ಗಂಗೆಯ ಸೊಬಗು ಸವಿಯುತ್ತ, ಭಾರತೀಯರ ದೈವ ಭಕ್ತಿ, ಪ್ರಕೃತಿಯ ಆಸಕ್ತಿ, ಕಲೆಯ ಬಗ್ಗೆ ಅವರ ಪ್ರೀತಿ ಎಲ್ಲವನ್ನು ಅರಿಯಲು ಸಾಧ್ಯವಾಯಿತು. ನಾನು ವೇಗನ್ ಆಗಲು ಅವರೇ ಸ್ಫೂರ್ತಿ. ಹಿಂದೂಸ್ತಾನಿ ಸಂಗೀತದ ಕಡೆ ಮನಸೆಳೆದು ಬಿಸ್ಮಿಲ್ಲಾ ಖಾನ್ ಅವರ ಅಳಿಯ ಶೆಹನಾಯ್ ವಾದಕ ಅಲ್ಲಿ ಅಬ್ಟಾಸ್ ಖಾನ್ ಅವರಿಂದ ಸಂಗೀತ ಕಲಿಯಲಾರಂಭಿಸಿದೆ .
ಜಯ: ಅಲಿಅಬ್ಟಾಸ್ ಅವರ ಶಿಷ್ಯ ಫ್ರಾನ್ಸಸ್ಕೋ ಶೆಹನೋಯ್ ಸಂಗೀತ ಇಟಲಿಯಲ್ಲಿ ನಡೆದಿದ್ದು ಈಗಲೂ ಶೆಹನೋಯ್ ಕೇಳುತ್ತಿರುವಂತೆ ಭಾಸವಾಗುತ್ತದೆ. ನಿಮ್ಮ ಅನುಭವಗಳನ್ನು ಕೇಳುತ್ತಿದ್ದರೆ ಮತ್ತಷ್ಟು ಕೇಳುವ ಕುತೂಹಲ ಮೂಡುತ್ತಿದೆ. ಭಾರತ ಒಂದು ಬಾಬೆಲು ಗೋಪುರ. ಈ ಗೋಪುರದಲ್ಲಿ ಅನೇಕ ಭಾಷೆಗಳು ಅಡಗಿವೆ. ನಿಮಗೆ ಯಾವುದಾದರೂ ಭಾಷಾಸಕ್ತಿ ಅಂಕುರಿಸಿತ್ತೇ ?
ಆಂಜೆಲಾ: ಹೌದು. ಹಿಂದಿ ಭಾಷೆ ನನಗೆ ಇಷ್ಟವಾಗಿ ಕಲಿಯಲಾರಂಭಿಸಿದೆ. ವಾರಣಾಸಿ ಜನಗಳ ಮೂಲಕ ಮಾತನಾಡುತ್ತ ಅದು ಸುಲಭವಾಯಿತು. ಹೂವು ದುಂಬಿ ಆಕರ್ಷಿಸುವಂತೆ ಬಾಲಿವುಡ್ ಚಿತ್ರ ಗಳನ್ನು ನೋಡುತ್ತಿ¨ªೆ. ರಾಜ್‌ಕಪೂರ್ ಅವರಿಗಾಗಿ ಹಾಡಿದ್ದ ಮುಕೇಶ್ ಸಾಬ್ ಅವರ ಹಾಡುಗಳನ್ನು ಹಾಡುತ್ತಿದೆ. ಕೆಲವು ಹಾಡುಗಳು ಈಗಲೂ ನೆನಪಿದೆ. ಮೇರಾ ಜೂತ ಹಾಯ್ ಜಪಾನಿ, ಸಜನರೇ ಝೂಟ್ ಮತ್ ಬೊಲೊ.. ಹೀಗೆ ಅನೇಕ ಗೀತೆಗಳು ಮೆಚ್ಚುಗೆಯಾಗಿವೆ.
ಜಯ: ನೀವು ಬರೆದಿರುವ ಪುಸ್ತಕಗಳ ಬಗ್ಗೆ ಹಾಗೂ ನಿಮ್ಮ ಕೆಲಸದ ಬಗ್ಗೆ ತಿಳಿಸಿ
ಆಂಜೆಲಾ: ಭಾರತದ ಕುರಿತು ಬರೆದಿರುವ ಅನೇಕ ಪುಸ್ತಕಗಳಿಗೆ ಲೇಖನಗಳನ್ನು ಬರೆದಿರುವೆ. ಅಲ್ಲದೇ ನಿಮ್ಮ ಜತೆ ಹಿಂದೂ ಮತ ಗಂಗಾತೀರದಿಂದ, ಶಾಖಾಹಾರಿ ಅಡುಗೆ ಪುಸ್ತಕ, ಗಾಯತ್ರಿ ಮೂರ್ತಿ ಅವರ ಕನ್ನಡ ಕಾದಂಬರಿ “ಹಂಬಲ’ ಕನ್ನಡಕ್ಕೆ ಅನುವಾದ ಈ ಕಾರ್ಯಗಳಲ್ಲಿ ಸಹಕರಿಸಿದ್ದು ಹೆಮ್ಮೆಯಾಗಿದೆ. ಪ್ರೊಫೆಸರ್ ಕಥೇರಿನೊ ಕೋನ್ ಯೊ ಅವರ ಜತೆ ಪೀಸಾ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದೆ. ಅನೇಕ ಕಾನ್ಫರೆನ್ಸ್ ಗಳಲ್ಲಿ ಮಹಾತ್ಮಾ ಗಾಂಧಿ ಅವರ ಬಗ್ಗೆ ಹಾಗೂ ಭಾರತದ ಬಗ್ಗೆ ಮಾತನಾಡಿದ್ದೇನೆ. ಈಗ ವಿಶ್ವಭಾರತಿ ಶಾಂತಿನಿಕೇತನದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಇಟಾಲಿಯನ್ ಭಾಷೆ ಅಧ್ಯಾಪಕಿಯಾಗಿ ಭಾರತಕ್ಕಾಗಿ ಕೆಲಸ ಮಾಡುತ್ತಿದ್ದೇನೆ .
ಜಯ: ನಿಮ್ಮ ಭಾರತವಾಸದ ಅನುಭವ, ಆಸಕ್ತಿ, ಆಹಾರ, ಭವ್ಯ ಚರಿತ್ರೆಯಲ್ಲಿ ಬರುವ ವ್ಯಕ್ತಿಗಳು, ಭಾರತೀಯರ ಬಗ್ಗೆ ಇಟಲಿ ದೇಶದ ಜನತೆಗೆ ಏನು ಸಂದೇಶ ಕೊಡುತ್ತೀರಿ?
ಆಂಜೆಲಾ : ಅನುಭವ ಹೇಳುವುದಾದರೆ ಅಹಿಂಸೆಯೇ ಪರಮ ಧರ್ಮ, ಸತ್ಯಮೇವ ಜಯತೇ.. ಭಾರತೀಯರ ಈ ಧ್ಯೇಯಗಳ ಅನುಭವ ನನಗಾಯಿತು. ಆಸಕ್ತಿ- ನಿತ್ಯಾ ಜೀವನದಲ್ಲಿ ಪುರುಷಾರ್ಥ ಕಾಣುವುದು ಮೆಚ್ಚುಗೆಯಾಯಿತು. ಆಹಾರದ ವಿಚಾರದಲ್ಲಿ ಅನ್ನಮ್ ಬ್ರಹ್ಮಮ್ ಎಂದು ಭಾವಿಸಿ ಸಾತ್ವಿಕ ಆಹಾರ ಸೇವಿಸುವುದನ್ನು ನಾನು ಇಷ್ಟಪಟ್ಟೆ. ಚರಿತ್ರೆಯಲ್ಲಿ ಚಕ್ರವರ್ತಿ ಅಶೋಕ, ಮಹಾತ್ಮ ಗಾಂಧಿ, ಅನೇಕ ವೀರ ರಮಣೀಯರ ವಿಷಯಗಳನ್ನು ಶಾಲೆಯ ಮಕ್ಕಳಿಗೆ ಬೋಧಿಸಬೇಕು. ಇದರ ಜತೆಗೆ ಮಾನವೀಯತೆಯ ಐದು ಮೌಲ್ಯಗಳಾದ ಸತ್ಯ, ಧರ್ಮ, ಶಾಂತಿ, ಪ್ರೇಮ, ಅಹಿಂಸೆಗಳನ್ನು ಬೋಧಿಸಬೇಕು. ಭಾರತೀಯರ ಬಗ್ಗೆ ಹೇಳಲು ಪದಗಳು ಸಾಲದು. ಕಥೇರಿನೊ ಹೇಳುತ್ತಾರೆ ಭಾರತೀಯರಲ್ಲಿ ಸಹೃದಯತೆ ಇದೆ. ಇದು ನನ್ನ ಅನುಭವವೂ ಹೌದು.
ಆಂಜೆಲಾ ಅವರೊಂದಿಗಿನ ಮಾತುಕತೆಯ ಬಳಿಕ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಅಂಜೆಲಾ ಹೇಗೆ ಇಟಲಿಯವರಿಗೆ ಮಾಡಿಸುತ್ತಿದ್ದಾರೆಯೋ ಅಂತೆಯೇ ಇಲ್ಲಿಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯ, ಸಂಗೀತ ಭಾರತದ ಮಕ್ಕಳಿಗೂ ತಲುಪಬೇಕು ಎನ್ನುವ ಚಿಂತನೆ ಮನದಾಳದಲ್ಲಿ ಹುಟ್ಟಿಕೊಂಡಿತ್ತು.