Advertisement
ಶರವು ಮಹಾಗಣಪತಿ ದೇವಸ್ಥಾನಕ್ಕೆ ಬೆಳಗ್ಗಿನಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ದೇವರಿಗೆ ಗರಿಕೆ, ಹಿಂಗಾರ, ಹೂ ಅರ್ಪಿಸಿ, ಪಂಚಕಜ್ಜಾಯ, ಗಣಪತಿ ಹವನ, ಅಪ್ಪದ ಪೂಜೆ ಸೇವೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಇಡೀ ದಿನ 10 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಧ್ಯಾಹ್ನ ವೇಳೆ 12.30ಕ್ಕೆ ಪ್ರಸಾದ ವಿತರಣೆ ಆರಂಭವಾಗಿದ್ದು, 2.30ರ ತನಕ ಸರತಿ ಸಾಲು ಮುಂದುವರಿದಿತ್ತು.
Related Articles
ಕುಂದಾಪುರ ಸಮೀಪದ ಆನೆಗುಡ್ಡೆ ದೇವಸ್ಥಾನಕ್ಕೆ ಸುಮಾರು 20,000 ಭಕ್ತರು ಭೇಟಿ ನೀಡಿದರು. ಸುಮಾರು 4,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು. ಅರ್ಚಕ ಚಂದ್ರಕಾಂತ ಉಪಾಧ್ಯಾಯ ಮತ್ತು ಸಹೋದರರು, ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಹಸ್ರನಾಳಿಕೇರ ಗಣಪತಿ ಯಾಗ ನಡೆಯಿತು. ಸುಮಾರು 8,000 ಪಂಚಗಜ್ಜಾಯ ಪ್ಯಾಕೇಟ್‌ಗಳನ್ನು ಭಕ್ತರು ಕೊಂಡುಕೊಂಡರು.
Advertisement
ಮಂಗಳೂರಿನ ಮಣ್ಣಗುಡ್ಡೆ ಹರಿದಾಸ ಲೇನ್‌ನಲ್ಲಿರುವ ನವದುರ್ಗಾ ಮಹಾಗಣಪತಿ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನ ಬಿಕರ್ನಕಟ್ಟೆ, ಕದ್ರಿ ಮಂಜುನಾಥ ದೇವಸ್ಥಾನ, ಉರ್ವ ಮಹಾಗಣಪತಿ, ಕುದ್ರೋಳಿ ಗೋಕರ್ಣನಾಥ, ಗಣೇಶಪುರ ಮಹಾಗಣಪತಿ, ಮರೋಳಿ ಸೂರ್ಯನಾರಾಯಣ, ಬೋಳೂರು ಮಾರಿಯಮ್ಮ ದೇವಸ್ಥಾನ, ಕಾಸರಗೋಡು ಜಿಲ್ಲೆಯ ಮಧೂರು, ಉಡುಪಿ ಜಿಲ್ಲೆಯ ಹಟ್ಟಿಯಂಗಡಿ, ಉದ್ಯಾವರ, ಪಡುಬಿದ್ರಿ, ಉಪ್ಪೂರು, ಬಾರಕೂರು ಬಟ್ಟೆ ವಿನಾಯಕ ಸಹಿತ ವಿವಿಧ ಗಣಪತಿ ದೇವಸ್ಥಾನಗಳಲ್ಲಿ ಅಂಗಾರಕ ಸಂಕಷ್ಟಿ ವ್ರತಾಚರಣೆ ಅಂಗವಾಗಿ ವಿಶೇಷ ಪೂಜೆ ನಡೆಯಿತು.