Advertisement

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

02:29 AM Oct 20, 2021 | Team Udayavani |

ಹೊಸದಿಲ್ಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಸದ್ಯದಲ್ಲೇ ಅಂಗನವಾಡಿ ಕಾರ್ಯಕರ್ತೆಯರು, ಓಲಾ-ಊಬರ್‌ ಚಾಲಕರು, ಡೆಲಿವರಿ ಬಾಯ್‌ಗಳು,ಸಂಘಟಿತ ವಲಯದ ಇತರ ಕಾರ್ಮಿಕರಂತೆ ಹಲವು ಸೌಲಭ್ಯಗಳನ್ನು ಪಡೆಯಲಿದ್ದಾರೆ.

Advertisement

ದೇಶದಲ್ಲಿ ಹೊಸ ರೀತಿಯ ಉದ್ಯೋಗಗಳು ಸೃಷ್ಟಿ ಯಾಗುತ್ತಿರುವ ಹಿನ್ನೆಲೆಯಲ್ಲಿ “ಉದ್ಯೋಗ’ದ ವ್ಯಾಖ್ಯಾನ ವನ್ನು ಪರಿಷ್ಕರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಸದ್ಯದಲ್ಲೇ ಅದು ರಾಷ್ಟ್ರೀಯ ಉದ್ಯೋಗ ನೀತಿಯನ್ನು ಜಾರಿ ಮಾಡಲಿದ್ದು, “ಉದ್ಯೋಗ’ದ ವ್ಯಾಪ್ತಿಗೆ ಅಂಗನವಾಡಿ ಕಾರ್ಯಕರ್ತೆಯರು, ಗಿಗ್‌ ಕಾರ್ಮಿಕರು, ಪ್ಲಾಟ್‌ಫಾರಂ ಕಾರ್ಮಿಕರನ್ನು ಕೂಡ ಸೇರಿಸಲಾಗುವುದು ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಯಾರಿವರು “ಗಿಗ್‌ ಕಾರ್ಮಿಕರು’?
“ಗಿಗ್‌’ ಎಂದರೆ “ನಿರ್ದಿಷ್ಟ ಅವಧಿಗಷ್ಟೇ ಇರುವ ಕೆಲಸ’. ಗಿಗ್‌ ಆರ್ಥಿಕತೆ ಎಂದರೆ ತಾತ್ಕಾಲಿಕ, ಹವ್ಯಾಸಿ ಅಥವಾ ಸ್ವತಂತ್ರ ಗುತ್ತಿಗೆ ನೌಕರರನ್ನು ಹೊಂದಿರುವ ಕಾರ್ಮಿಕ ಮಾರುಕಟ್ಟೆ. ಉದಾಹರಣೆಗೆ, ಓಲಾ-ಊಬರ್‌ನಂಥ ಕಾರು ಸೇವೆಗಳ ಚಾಲಕರು, ಝೊಮ್ಯಾಟೋ-ಸ್ವಿಗ್ಗಿ ಆಹಾರ ಡೆಲಿವರಿ ಮಾಡುವವರು, ಹವ್ಯಾಸಿ ಲೇಖಕರು, ವೆಬ್‌ ಡೆವಲಪರ್‌ಗಳು, ಸ್ವತಂತ್ರ ಗುತ್ತಿಗೆದಾರರು ಇತ್ಯಾದಿ.

ಪರಿಣಾಮಗಳೇನು?
ಹೊಸ ನೀತಿ ಜಾರಿಯಾದರೆ ಅಸಂಘಟಿತ ಕಾರ್ಮಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಕೆಲಸದ ಸ್ಥಳಗಳಲ್ಲಿ ಸಿಗಬೇಕಾದ ಹಕ್ಕುಗಳು ಲಭ್ಯವಾಗಲಿವೆ. ಹೊಸ ನೀತಿಯಿಂದ ಉದ್ಯೋಗದಾತರ ಹೊಣೆಗಾರಿಕೆ ಹೆಚ್ಚಳವಾಗಬಹುದು. ಅವರು ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ, ವಾರದ ರಜೆ, ವಾರ್ಷಿಕ ಭತ್ತೆ ಸಹಿತ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ.

Advertisement

ಇದನ್ನೂ ಓದಿ:ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಅನುಕೂಲವೇನು?
-ಉದ್ಯೋಗದ ವ್ಯಾಪ್ತಿ ವಿಸ್ತರಣೆ
-ಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಳ
-ಕಾರ್ಮಿಕರಿಗೆ ಉದ್ಯೋಗ ಸಂಬಂಧಿ ಸೌಲಭ್ಯ
-ದೌರ್ಜನ್ಯದಿಂದ ರಕ್ಷಣೆ
-ಉದ್ಯೋಗದಾತರ ಹೊಣೆಗಾರಿಕೆ ಅಧಿಕ

Advertisement

Udayavani is now on Telegram. Click here to join our channel and stay updated with the latest news.

Next