Advertisement

ಬೇಡಿಕೆ ಈಡೇರಿಸಲು ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

05:12 PM Aug 25, 2022 | Team Udayavani |

ಮಾನ್ವಿ: ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಅವರನ್ನು ಶಿಕ್ಷಕರೆಂದು ನೇಮಕ ಮಾಡಿಕೊಳ್ಳಬೇಕು ಹಾಗೂ ಸರಕಾರದಿಂದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ತಾಲೂಕು ಅಧ್ಯಕ್ಷೆ ಕಾಂ.ಚನ್ನಮ್ಮ ಗುತ್ತೆದಾರ ಒತ್ತಾಯಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಉಪತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರಕಾರದಿಂದ ಗ್ರಾಚ್ಯುಯುಟಿ ಸೌಲಭ್ಯ ನೀಡಬೇಕು. ಪ್ರಭಾರಿ ಭತ್ಯ ಹೆಚ್ಚಳ ಮಾಡಬೇಕು. ವೈದ್ಯಕೀಯ ವೆಚ್ಚ ನೀಡಬೇಕು. ಮಿನಿ ಅಂಗನವಾಡಿಗಳಿಗೆ ಸಹಾಕಿಯರನ್ನು ಕೂಡಲೇ ನೇಮಕ ಮಾಡಬೇಕು. ತಾಲೂಕಿನ ಎಲ್ಲ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಎಲ್‌. ಕೆ.ಜಿ, ಯು.ಕೆ.ಜಿ ಶಿಕ್ಷಣ ನೀಡಲು ಅಗತ್ಯ ವ್ಯವಸ್ಥೆ ಮಾಡಬೇಕು. ಮಕ್ಕಳಿಗೆ ಸಮವಸ್ತ್ರ, ಪಠ್ಯ-ಪುಸ್ತಕ ವಿತರಿಸಬೇಕು ಎಂದು ಒತ್ತಾಯಿಸಿದರು.

ನೂರ್‌ ಜಾಹನ್‌, ಪ್ರಭಾವತಿ, ಯಲ್ಲಮ್ಮ, ಸುಶೀಲಾ, ಮಂಜುಳಾ, ಭಾಗ್ಯ, ಜರೀನಾಬೇಗಂ, ಶಾರದ ಕಾಂ. ವಿಶಾಲಕ್ಷ್ಮೀ, ಶಾಂತ, ರೇಣುಕಾ, ನಾಗಮ್ಮ, ಲಿಂಗಮ್ಮ, ಯಲ್ಲಮ್ಮ, ಪುಟ್ಟಮ್ಮ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next