Advertisement
ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾ ಯಕಿಯರ ಸಂಘ ಪುತ್ತೂರು ಇದರ ವತಿಯಿಂದ ಪುರಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ, ನಿವೃತ್ತರಿಗೆ ಸಮ್ಮಾನ, ವಲಯದ ಉತ್ತಮ ಕಾರ್ಯಕರ್ತೆ, ಸಹಾಯಕಿಯರ ಗುರುತಿಸುವ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಅಂಗನವಾಡಿ ವ್ಯವಸ್ಥೆ ಆರಂಭವಾದ ಸಂದರ್ಭ ಕಾರ್ಯಕರ್ತರಿಗೆ 100 ರೂ., ಸಹಾಯಕಿಯರಿಗೆ 50 ರೂ. ಮಾತ್ರ ಗೌರವ ಧನ ಸಿಗುತ್ತಿತ್ತು. ಆಗ ಕೇಂದ್ರ ಮತ್ತು ರಾಜ್ಯದ 90:10 ನಿಷ್ಪತ್ತಿಯ ವೇತನ ನೀಡಲಾಗುತ್ತಿತ್ತು. ಆ ಬಳಿಕ ಅದನ್ನು 60;40 ನಿಷ್ಪತ್ತಿಗೆ ಬದಲಾಯಿಸಲಾಯಿತು. ಆದರೆ ಇದನ್ನು ಪಾಲಿಸಲಾಗುತ್ತಿಲ್ಲ ಎಂದು ಹೇಳಿದ ಶಕುಂತಳಾ ಟಿ. ಶೆಟ್ಟಿ, ರಾಜ್ಯ ಸರಕಾರ 5,200 ರೂ. ನೀಡುವಾಗ ಕೇಂದ್ರ ಕನಿಷ್ಠ 6,000 ರೂ. ಆದರೂ ವೇತನ ಕೊಡಬೇಕಿತ್ತು ಎಂದು ಅಭಿಪ್ರಾಯಿಸಿದರು.
Related Articles
Advertisement
ನಿವೃತ್ತಿಗೊಳ್ಳುತ್ತಿರುವ ಕೋಡಿಂಬಾಡಿ ವಲಯದ ರಾಧಾ ಹಾಗೂ ಮುಕ್ರಂಪಾಡಿ ವಲಯದ ಶಿವಮ್ಮ ಅವರನ್ನು ಶಾಸಕರು ಸಮ್ಮಾನಿಸಿದರು. ತಾಲೂಕು ಸಂಘದ ಉಪಾಧ್ಯಕ್ಷೆ ಶೋಭಾ, ಕಾರ್ಯದರ್ಶಿ ಜಯಲತಾ, ಜತೆ ಕಾರ್ಯದರ್ಶಿ ರಾಜರಾಜೇಶ್ವರಿ, ಕೋಶಾಧಿಕಾರಿ ಪುಷ್ಪಾವತಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷೆ ಮೀನಾಕ್ಷಿ ಸ್ವಾಗತಿಸಿ, ಶ್ರೀಲತಾ ವಂದಿಸಿದರು. ಪ್ರಶಸ್ತಿ ಪುರಸ್ಕೃತ ಕಾರ್ಯಕರ್ತೆ ಅರುಣಾ ಡಿ. ಕಾರ್ಯಕ್ರಮ ನಿರ್ವಹಿಸಿದರು.
ಮಹಾಸಭೆಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಪುತ್ತೂರು ಇದರ ಮಹಾಸಭೆ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಸಿಡಿಪಿಒ ಶಾಂತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ವಲಯದ ಉತ್ತಮ ಕಾರ್ಯಕರ್ತೆ, ಸಹಾಯಕಿಯರ ಗುರುತಿಸುವ ಕಾರ್ಯಕ್ರಮ ನಡೆಧಿಯಿತು. ನಿವೃತ್ತಿ ಹೊಂದಿದ ಒಟ್ಟು 9 ಮಂದಿ ಕಾರ್ಯಕರ್ತೆಯವರು ಹಾಗೂ ಸಹಾಯಕಿಯನ್ನು ಗೌರವಿಸಲಾಯಿತು. ಸಿಎಂಗೆ ಬೇಸರ
ರಾಜ್ಯ ಸರಕಾರ 3 ವರ್ಷಗಳಲ್ಲಿ 500 ರೂ. ನಂತೆ ಹಾಗೂ ಈ ವರ್ಷ 1,000 ರೂ. ನಂತೆ ಗೌರವ ಧನ ಏರಿಕೆ ಮಾಡಿದೆ. ಹೋರಾಟ ಪ್ರತಿಯೊಬ್ಬರ ಹಕ್ಕು. ಆದರೆ ರಾಜಕೀಯ ಮಿಶ್ರಿತ ಹೋರಾಟ ಸರಿಯಲ್ಲ. ಯಾರ ವಿರುದ್ಧ ಹೋರಾಟ ನಡೆಸ ಬೇಕಿತ್ತೋ ಅಲ್ಲಿ ನಡೆಸಬೇಕಿತ್ತು. ಅದರಲ್ಲೂ ಪ್ರತಿಭಟನೆಯಲ್ಲಿ ಎಷ್ಟು ಅಂಗನವಾಡಿ ಕಾರ್ಯಕರ್ತೆಯರಿದ್ದರು ಎಂಬುದೂ ಪ್ರಶ್ನಾರ್ಹ ? ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸ್ಪಂದಿಸು ತ್ತಿದ್ದರೂ ಪ್ರತಿಭಟನೆ ನಡೆಸಿರುವುದು ಮುಖ್ಯಮಂತ್ರಿಗಳಿಗೆ ಬೇಸರ ತರಿಸಿದೆ ಎಂದು ಇಲಾಖೆಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯೂ ಆಗಿರುವ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಆದರೆ ದ.ಕ. ಜಿಲ್ಲೆಯಲ್ಲಿ ಇಂತಹ ರಾಜಕೀಯ ಪ್ರೇರಿತ ಸಂಘಟನೆ ಇರದಿರುವುದು ಖುಷಿಯ ವಿಚಾರ ಎಂದರು.