Advertisement

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ‌ ಸಂಘ: ಮಹಾಸಭೆ

10:59 PM Jun 26, 2019 | Sriram |

ಮಡಿಕೇರಿ : ಸಂಘಟನೆಗಳು ಪ್ರಬಲವಾಗಿ ಬೇರೂರಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ‌ ಸಂಘದ ಹಿರಿಯ ಮುಖಂಡ‌ ಟಿ.ಪಿ.ರಮೇಶ್‌, ಒಂದು ಕುಟುಂಬದಂತ್ತಿರುವ ಸಂಘಟನೆಯನ್ನು ಕಲುಷಿತಗೊಳಿಸದೆ ಹಕ್ಕಿಗಾಗಿ ಹೋರಾಟ ನಡೆಸಲು ಇರುವ ವೇದಿಕೆಯನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕೆಂದು ಕರೆ ನೀಡಿದ್ದಾರೆ.

Advertisement

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಮಡಿಕೇರಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ 19ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾರಾಜ್ಯದ 62,580 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಶಿಕ್ಷಣ ಪರಿಣಿತರ ಸಬಲೀಕರಣ ಸಮಿತಿ ಅಧ್ಯಯನ ನಡೆಸಿ 2017ರಲ್ಲಿ ಸರಕಾರಕ್ಕೆ ನೀಡಿರುವ ವರದಿಯಂತೆ ಕಾರ್ಯಕ್ರಮ ರೂಪಿಸಬೇಕೆಂದು ರಮೇಶ್‌ ಒತ್ತಾಯಿಸಿದರು. ಟಿ.ಯು.ಸಿ.ಸಿ.ಯ ನಾಯಕಿ ಕೆ.ಕೆ.ಶಾರದ ಹಾಗೂ ಜಿಲ್ಲಾ ಸಂಘದ ಅಧ್ಯಕ್ಷೆ ಎ.ಜಿ.ತಾರಮಣಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಘದ ತಾಲ್ಲೂಕು ಅಧ್ಯಕ್ಷೆ ವಿ.ಹೆಚ್.ನಾಗರತ್ನ ವಹಿಸಿದ್ದರು. ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಮೃತಪಟ್ಟ ಇಬ್ಬರು ಸಹಾಯಕಿಯರ ಕುಟುಂಬದವರಿಗೆ ಆರ್ಥಿಕ ನೆರವು ವಿತರಿಸಲಾಯಿತು.

ತಾಲೂಕು ಪ್ರಧಾನ ಕಾರ್ಯದರ್ಶಿ ಪವಿಜಛkಚ ಸ್ವಾಗತಿlsದರು.ಲೆಕ್ಕಪತ್ರವನ್ನು ಆಶಾ, ಕ್ಷೇಮನಿಧಿ ವರದಿಯನ್ನು ಕ್ಷೇಮನಿಧಿ ಅಧ್ಯಕ್ಷೆ ಸುಜಾಜಚ ಹಾಗೂ ಕ್ಷೇಮನಿಧಿಯ ಲೆಕ್ಕಪತ್ರವನ್ನು ದೇವಮ್ಮ ಮಂಡಿಸಿದರು.ಉಷಾ ಪ್ರಾರ್ಥಿಸಿ, ಮಾಲತಿ ಕಾರ್ಯಕ್ರಮನಿರೂಪಿಸಿದರು ಕುಸುuಚ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next