Advertisement
ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಯೋಜನೆಗಳ ಅನುಷ್ಠಾನ, ಗೃಹಲಕ್ಷ್ಮಿ ಯೋಜನೆಯಲ್ಲಿನ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹರಿಸುವುದು ಹಾಗೂ ಅಂಗನವಾಡಿಯ ನಿರ್ವಹಣೆ, ಮಕ್ಕಳಿಗೆ ಅಕ್ಷರಾಭ್ಯಾಸ ಹೀಗೆ ಸಾಕಷ್ಟು ಕರ್ತವ್ಯಗಳಿ ರುವುದರಿಂದ ಅಂಗ® ವಾಡಿಯಲ್ಲಿ ಇಬ್ಬರು ಸಿಬಂದಿ ಇದ್ದರೂ ಮುಗಿಯದಷ್ಟು ಕೆಲಸವಿದೆ. ಸಿಬಂದಿ ಕೊರತೆ ಇರು ವಲ್ಲಿ ಮತ್ತಷ್ಟು ಸಮಸ್ಯೆಯಾಗುತ್ತಿದೆ.
ಸಿಬಂದಿ ಕೊರತೆ ಯಿಂದ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ತೊಡಕಾಗುತ್ತದೆ ಎನ್ನುವ ಕಾರಣಕ್ಕೆ ಸರಕಾರಿ ವ್ಯವಸ್ಥೆಯ ಬಗ್ಗೆ ಒಲವಿರುವ ಹೆತ್ತವರೂ ಮಕ್ಕಳನ್ನು ಖಾಸಗಿ ಸಂಸ್ಥೆಗೆ ದಾಖಲಿಸುವ ಸಾಧ್ಯತೆ ಇರುತ್ತದೆ. ಇದರಿಂದ ಅಂಗನವಾಡಿಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎನ್ನುವ ಆತಂಕವನ್ನು ಗ್ರಾಮಸಭೆ, ಕೆಡಿಪಿ ಸಭೆಗಳಲ್ಲಿ ಜನಪ್ರತಿನಿಧಿಗಳು, ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಅಂಗನವಾಡಿ ಸಿಬಂದಿ ಹುದ್ದೆ ಖಾಲಿ ಇರುವುದು ಗಮನದಲ್ಲಿದೆ. ಆನ್‌ಲೈನ್ ಮೂಲಕ ನೇಮಕಾತಿ ನಡೆಯುವುದರಿಂದ ಸ್ವಲ್ಪ ವಿಳಂಬವಾಗಿದೆ. ಸರಕಾರ ಶೀಘ್ರದಲ್ಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ.
– ಶ್ಯಾಮಲಾ ಸಿ.ಕೆ. / ಕುಮಾರ್,
ಉಪನಿರ್ದೇಶಕರು, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಉಡುಪಿ/ದ.ಕ.
Related Articles
Advertisement