Advertisement

ಅಂಗನವಾಡಿಗೆ ಬೇಕು ಸ್ವಂತ ಕಟ್ಟಡ

07:10 AM Jun 03, 2019 | Lakshmi GovindaRaj |

ಕೆ.ಆರ್‌.ಪುರ: ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಿಗಾಗಿ ರಾಜ್ಯದ ಇತರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ನಗರಕ್ಕೆ ಕಾರ್ಮಿಕರ ಪುಟ್ಟ ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣ ನೀಡುತ್ತಿರುವುದೇ ಅಂಗನವಾಡಿ ಕೇಂದ್ರಗಳು. ಆದರೆ ನಗರದಲ್ಲಿನ ಬಹು ಸಂಖ್ಯೆಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಹೀಗಾಗಿ ಕೆಲವೆಡೆ ಅತ್ಯಂತ ಅಪಾಯಕಾರಿ ಹಾಗೂ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಹ ಸ್ಥಳಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.

Advertisement

ಅಂತಹ ಅಪಾಯದ ಸ್ಥಿತಿಯಲ್ಲಿರುವುದು ಕೆ.ಆರ್‌.ಪುರ ಕ್ಷೇತ್ರದ ಎ.ನಾರಾಯಣಪುರ ವಾರ್ಡ್‌ನ ಪೈ ಲೇಔಟ್‌ನ ಅನ್ನಪೂರ್ಣ ಬಡಾವಣೆಯಲ್ಲಿನ ಅಂಗನವಾಡಿ ಕೇಂದ್ರ. ಪೈ ಲೇಔಟ್‌ ಸುತ್ತಮುತ್ತಲಿನ ಪ್ರದೇಶದ ಪೂರ್ವ ಪ್ರಾಥಮಿಕ ಹಂತದ ಶಿಕ್ಷಣ ಪಡೆಯುವ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರವಿದೆ. ಆದರೆ ಈ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಕೇವಲ 10/12 ಅಡಿ ವಿಸ್ತೀರ್ಣದ ಸಣ್ಣ ಕೊಠಡಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಕಲಿಯಬೇಕಾದ ಸ್ಥಿತಿಯಿದೆ.

ಇಲ್ಲಿ ಕಲಿಯುತ್ತಿರುವವರೆಲ್ಲಾ ಕೂಲಿ ಮಾಡಿ ಬದುಕುವ ಬಡ ಕುಟುಂಬಗಳ ಮಕ್ಕಳಾಗಿದ್ದು, ಪ್ರತಿ ದಿನ ಕೆಲಸಕ್ಕೆ ಹೋಗುವಾಗ ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಬಿಟ್ಟು ಹೋಗುತ್ತಾರೆ. ಆದರೆ, ಈ ಮೊದಲಿದ್ದ ಕಟ್ಟಡವನ್ನು ಕೆಡವಿದ್ದರಿಂದ ಪ್ರಸ್ತುತ ರಾಜಾಕಾಲುವೆಯ ಮೇಲಿರುವ ಸಣ್ಣ ಶೆಡ್‌ನ‌ಲ್ಲಿ ಕೇಂದ್ರ ನಡೆಯುತ್ತಿದೆ.

ಮೊದಲನೆಯದಾಗಿ ಶೆಡ್‌ ರಾಜಕಾಲುವೆ ಮೇಲಿರುವುದರಿಂದ ಕೊಳಕು ನೀರಿನ ದುರ್ವಾಸನೆ ಸದಾ ಇರುತ್ತದೆ. ಇನ್ನೊಂದೆಡೆ ಜೋರು ಗಾಳಿಯೊಂದಿಗೆ ಮಳೆ ಬಂದರೆ ಶೆಡ್‌ನ‌ ತಗಡುಗಳು ಹಾರಿ ಹೋಗುವ ಭಯ. ಹೀಗಾಗಿ ಮಳೆ ದಿನಗಳಲ್ಲಿ ಮಕ್ಕಳನ್ನು ಬೇಗನೆ ಮನೆಗೆ ಕಳಿಸಲಾಗುತ್ತದೆ.

ಹಿಂದಿದ್ದ ಅಂಗನವಾಡಿ ಕಟ್ಟಡವನ್ನು ಕೆಡವಿದ ನಂತರ ಸುತ್ತಮುತ್ತಲ ಪ್ರದೇಶಗಳ ಮಕ್ಕಳು ರೈಲ್ವೆ ಹಳಿ, ರಸ್ತೆಬದಿ, ಫ‌ುಟ್‌ಪಾತ್‌ ರೀತಿಯ ಅಪಾಯಕಾರಿ ಸ್ಥಳಗಳಲ್ಲಿ ಆಟವಾಡುತ್ತಿದ್ದರು. ಸ್ಥಳೀಯರ ಸಹಕಾರದಿಂದ ಮಕ್ಕಳನ್ನು ಕರೆತಂದ ಖಾಸಗಿ ಸಂಸ್ಥೆಯೊಂದು, ಶೆಡ್‌ನ‌ಲ್ಲಿ ಅಂಗನವಾಡಿ ನಡೆಸುತ್ತಿದೆ. ಹೀಗಾಗಿ ಂಗನವಾಡಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next