ತೆಕ್ಕಟ್ಟೆ : ಅಂಗನವಾಡಿ ಕೇಂದ್ರದಲ್ಲಿ ಆಂಗ್ಲ ಮಾಧ್ಯಮ ಶಾಲಾ ಪೂರ್ವ ಶಿಕ್ಷಣ (ಎಲ್ಕೆಜಿ,ಯುಕೆಜಿ)ಕ್ಕೆ ಒತ್ತಾಯಿಸಿ ಜು.10 ರಂದು ರಾಜ್ಯವ್ಯಾಪಿ ಅಂಗನವಾಡಿ ಬಂದ್ ಮಾಡಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಮುಷ್ಕರಕ್ಕೆ ಕರೆ ನೀಡಿದರಾದರೂ ಗ್ರಾಮೀಣ ಭಾಗದ ಕುಂಭಾಸಿ, ಕೊರವಡಿ, ತೆಕ್ಕಟ್ಟೆ , ಮಾಲಾಡಿ, ಮಲ್ಯಾಡಿ , ಅಂಗನವಾಡಿ ಕೇಂದ್ರಗಳಲ್ಲಿ ಮುಷ್ಕರಕ್ಕೆ ಬೆಂಬಲ ನೀಡದೆ ಎಂದಿನಂತೆ ಕೇಂದ್ರಗಳು ತೆರೆದಿದ್ದು, ಪುಟಾಣಿಗಳು ಹಾಜರಿರುವ ದೃಶ್ಯ ಕಂಡು ಬಂದಿದೆ.
ಮುಷ್ಕರಕ್ಕೆ ಬೆಂಬಲ
ಬೇಳೂರು ಹಾಗೂ ಕೊರ್ಗಿ ಗ್ರಾ.ಪಂ. ವ್ಯಾಪ್ತಿಯ ಕೊರ್ಗಿ, ಹೊಸಮಠ, ಬೇಳೂರು, ಬೇಳೂರು ದೇವಸ್ಥಾನಬೆಟ್ಟು, ಬಡಾಬೆಟ್ಟು, ಗುಳ್ಳಾಡಿ, ಮೊಗೆಬೆಟ್ಟು ಭಾಗದಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮುಷ್ಕರದ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬೀಗ ಹಾಕಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಮಿಶ್ರ ಪ್ರತಿಕ್ರಿಯೆಗೆ ಕಾರಣ
ಕುಂದಾಪುರ ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘಟನೆಗಳು ಎರಡೆರಡು ಇರುವ ಕಾರಣದಿಂದಾಗಿ ತಾಲೂಕಿನ ಕೆಲವು ಭಾಗಗಳಲ್ಲಿ ಮುಷ್ಕರದ ಬಗ್ಗೆ ಮಾಹಿತಿಯೇ ಇಲ್ಲ ಎನ್ನುವ ಮಾತು ಕೇಳಿ ಬಂತು.