Advertisement

ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರ ಆಗ್ರಹ

06:03 PM Nov 10, 2020 | Suhan S |

ವಿಜಯಪುರ: ಅಂಗನವಾಡಿ ಕೇಂದ್ರಗಳ ಸ್ಥಳೀಯ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಸೋಮವಾರ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ಸಿಐಟಿಯು ಜಿಲ್ಲಾಸಮಿತಿ ಹೋರಾಟದ ಫಲವಾಗಿ ಸೆಪ್ಟೆಂಬರ್‌ 2018ರಲ್ಲಿ ಕೇಂದ್ರ, ರಾಜ್ಯ ಸರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ರೂ. ಗೌರವ ಧನ ಹೆಚ್ಚಿಗೆ ಮಾಡಿತ್ತು. ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುವರಿಹಣ ಬಿಡುಗಡೆ ಮಾಡಲಾಗಿದೆ. ಆದರೆ ನಮ್ಮವಿಜಯಪುರ ಜಿಲ್ಲೆಯಲ್ಲಿ ಹೆಚ್ಚುವರಿ ಹಣಗೌರವಧನ ಹಾಕಿಲ್ಲ. ಮಾತೃಪೂರ್ಣ ಯೋಜನೆಪ್ರೋತ್ಸಾಹ ಧನ 500 ರೂ., ಸಹಾಯಕಿಯರಿಗೆ250 ರೂ. ಎಲ್ಲ ಜಿಲ್ಲೆಯಲ್ಲಿ ಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಹಣ ಜಮೆ ಮಾಡಿಲ್ಲ ಎಂದು ಹರಿಹಾಯ್ದರು.

ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಶೌಚಾಲಯಗಳು ಸರಿಯಾಗಿಲ್ಲ. ವಿದ್ಯುತ್‌ ಸೌಕರ್ಯ ಇದ್ದರೂ ಕೂಡ ಕರೆಂಟ್‌ ಇರುವುದಿಲ್ಲ. ಗ್ರಾಮೀಣ ವಲಯಗಳಲ್ಲಿ ಅಂಗನವಾಡಿ ಕೇಂದ್ರಕ್ಕೆಬಾಡಿಗೆ ಹಣ ಕಚೇರಿಯವರು ಕೊಡುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಹಣತುಂಬುತ್ತಾರೆ. 5ನೇ ತಾರೀಖೀನ ಒಳಗಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ ಗೌರವಧನ ತೆಗೆಯಬೇಕು. ಕೆಲತಾಲೂಕುಗಳಲ್ಲಿ 3-4 ತಿಂಗಳಿಂದ ಗೌರವಧನನೀಡಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ವಿತರಿಸಲು ಮೊಟ್ಟೆ ಖರೀದಿಸಲು ಅಂಗನವಾಡಿ ಕಾರ್ಯಕರ್ತೆಯರೆ ಮುಂಗಡ ಹಣ ನೀಡಿ ಖರೀದಿಸಬೇಕಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಆರ್ಥಿಕ ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.

ಸರಕಾರದ ಆದೇಶದ ಪ್ರಕಾರ ಒಬ್ಬ ಮೇಲ್ವಿಚಾರಕಿ ಒಂದು ವಲಯದಲ್ಲಿ ಕೇವಲ 6 ತಿಂಗಳು ಮಾತ್ರ ಕೆಲಸ ಮಾಡಬೇಕಿದ್ದರೂ ಹಲವುವರ್ಷಗಳಿಂದ ಹಲವರು ಒಂದೇ ಕಡೆಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಮೇಲ್ವಿಚಾರಕಿಯರು ಒಂದು ತಾಲೂಕಿನಲ್ಲಿ 3 ವರ್ಷಗಳ ಮಾತ್ರ ಸಲ್ಲಿಸಬೇಕಿದ್ದರೂಹಲವು ಕಡೆಗಳಲ್ಲಿ ದಶಕಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದ ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಮಾಜದಲ್ಲಿ ಗೌರವ ಕಾರ್ಯ ಮಾಡುತ್ತಿರುವವರನ್ನು ಏಕ ವಚನದಲ್ಲಿ ನಿಂದಿಸುವ ಮೂಲಕ ಮಾನಸಿಕ ಹಿಂಸೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಹಲವು ಸಂದರ್ಭದಲ್ಲಿ ದೌರ್ಜನ್ಯ, ಲಂಚದ ವ್ಯವಹಾರಗಳು ಕೂಡಾ ನಡೆಯುತ್ತಿವೆ. ಹಾಗಾಗಿ ಒಂದೇ ಗ್ರಾಮಕ್ಕೆ 3 ವರ್ಷ ಕೆಲಸ ಮಾಡುತ್ತಿರುವವರನ್ನು ತಕ್ಷಣ ವರ್ಗಾವಣೆ ಮಾಡುವಂತೆ ಆಗ್ರಹಿಸಿದರು. ಭಾರತಿ ವಾಲಿ,ಸರಸ್ವತಿ ಮಠ, ಅಶ್ವಿ‌ನಿ ತಳವಾರ, ಜಯಶ್ರೀ ಪೂಜಾರಿ, ಗೀತಾ ನಾಯಕ, ಆರತಿ ಸರೋಜಿನಿ ಸಿಂಪಿಗೇರ, ಶೋಭಾ ಕಬಾಡೆ, ದಾನಮ್ಮ ಗುಗ್ಗರೆ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next