Advertisement

ಅಂಗನವಾಡಿಗಳಿಗೆ ಕರೆಂಟ್‌, ಟಾಯ್ಲೆಟ್‌ ಭಾಗ್ಯ

02:55 PM Dec 29, 2021 | Team Udayavani |

ಚಿಕ್ಕಬಳ್ಳಾಪುರ: ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್‌, ಶೌಚಾಲಯ ಒದಗಿಸಲು ಜಿಲ್ಲಾ ಪಂಚಾಯಿತಿ ಸಿಇಒ ಮುಂದಾಗಿದ್ದಾರೆ.

Advertisement

ಈಗಾಗಲೇ ಜಿಲ್ಲೆಯಲ್ಲಿ ಅಂಗನವಾಡಿಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲುಕ್ರಮ ಕೈಗೊಂಡಿರುವ ಸಿಇಒ, ಪುಟಾಣಿಗಳಿಗೆ ಅನುಕೂಲ ಕಲ್ಪಿಸಲು ವಿದ್ಯುತ್‌ ಸಂಪರ್ಕ, ಕಡ್ಡಾಯವಾಗಿ ಶೌಚಾಲಯ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ. ಜ.15ರೊಳಗೆ ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್‌, ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

1,115 ಕೇಂದ್ರಗಳಿಗೆ ಕರೆಂಟ್‌: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,961 ಅಂಗನವಾಡಿ ಕೇಂದ್ರಗಳಿದ್ದು, ಆಪೈಕಿ 1,115 ಸ್ವಂತ ಕಟ್ಟಡಗಳಿಲ್ಲಿ, 31 ಪಂಚಾಯತ್‌, 116 ಸಮುದಾಯ, 275 ಶಾಲೆಗಳಲ್ಲಿ, 391 ಬಾಡಿಗೆ ಹಾಗೂ ಇತರೆ 33ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಅತಿಹೆಚ್ಚು 460, ಬಾಗೇಪಲ್ಲಿ 381, ಗೌರಿಬಿದನೂರು351, ಶಿಡ್ಲಘಟ್ಟ 339, ಚಿಕ್ಕಬಳ್ಳಾಪುರ 305, ಗುಡಿಬಂಡೆ ತಾಲೂಕಲ್ಲಿ 125 ಅಂಗನವಾಡಿ ಕೇಂದ್ರಗಳಿವೆ. ನಿರ್ಮಿಸಲು ಪ್ರಥಮ ಆದ್ಯತೆ ನೀಡಲಾಗಿದೆ.

ಜಿಪಂ ಸಿಇಒ ಪಿ.ಶಿವಶಂಕರ್‌ ಅವರು, ಜಿಲ್ಲಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯಹೊಂದಿರಬೇಕೆಂಬ ಉದ್ದೇಶದಿಂದ ವಿದ್ಯುತ್‌ಸಂಪರ್ಕ, ಶೌಚಾಲಯ ನಿರ್ಮಿಸಲು ಆದ್ಯತೆನೀಡಿದ್ದಾರೆ. ಆದರೆ, ಅವರ ನಿರೀಕ್ಷೆಗೆ ತಕ್ಕಂತೆ ವೇಗವಾಗಿ ಕೆಲಸಗಳು ನಡೆಯುತ್ತಿಲ್ಲವೆಂಬ ದೂರು ಕೇಳಿ ಬಂದಿದೆ. ಕಾಮಗಾರಿಯ ಮತ್ತಷ್ಟು ವೇಗ ಪಡೆದುಕೊಂಡರೇ ಮುಂಬರುವ ಗಣರಾಜ್ಯೋತ್ಸವದೊಳಗೆಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಿಗೆವಿದ್ಯುತ್‌ ಸಂಪರ್ಕ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ.

100 ಶಾಲೆ, 200 ಅಂಗನವಾಡಿ ಕೇಂದ್ರ ಮಾದರಿ ಮಾಡಲು ನಿರ್ಧಾರ :

Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಈ ಹಿಂದಿನ ಸಿಇಒ ಬಿ.ಫೌಝೀಯಾ ತರುನ್ನುಮ್‌ ಪ್ರಯತ್ನ ಮಾಡಿದರು. ಜೊತೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಿ ಗಮನ ಸೆಳೆದಿದ್ದರು. ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಕಲಿಕೆಗೆ ಪೂರಕವಾಗಿರುವ ವಾತಾವರಣ ಸೃಷ್ಟಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಮ ಕೈಗೊಂಡಿದ್ದರು. ಅವರ ಬಳಿಕ ಬಂದ ಸಿಇಒಪಿ.ಶಿವಶಂಕರ್‌ ಕೂಡ ಪ್ರಸಕ್ತ ಸಾಲಿನಲ್ಲಿ 100 ಸರ್ಕಾರಿ ಶಾಲೆ, 200 ಅಂಗನವಾಡಿ ಕೇಂದ್ರ ಮಾದರಿ ಆಗಿ ಅಭಿವೃದ್ಧಿಗೊಳಿಸಲು ಪಣತೊಟ್ಟಿದ್ದಾರೆ.

ಜಿಲ್ಲೆಯ ಅಂಗನವಾಡಿ ಕೇಂದ್ರಗಳನ್ನುಮಾದರಿ ಮಾಡಲು ಈಗಾಗಲೇಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್‌ ಸಂಪರ್ಕ,ಶೌಚಾಲಯ ನಿರ್ಮಿಸಲು ಯೋಜನೆರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. -ಪಿ.ಶಿವಶಂಕರ್‌, ಸಿಇಒ,ಚಿಕ್ಕಬಳ್ಳಾಪುರ ಜಿಪಂ

ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆವಿದ್ಯುತ್‌ ಸಂಪರ್ಕ, ಶೌಚಾಲಯನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ.ಜ.15ರೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. -ಅಶ್ವತ್ಥಮ್ಮ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ

-ಎಂ.ಎ.ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next