Advertisement

ಹಿರೇಮನ್ನಾಪೂರ ಏಳನೇ ಅಂಗನವಾಡಿ ಕೇಂದ್ರ ಸರಕಾರಿ ಶಾಲಾ ಕಟ್ಟಡಕ್ಕೆ ಶಿಫ್ಟ್

06:53 PM Nov 30, 2022 | Team Udayavani |

ದೋಟಿಹಾಳ: ಹಿರೇಮನ್ನಾಪೂರ ಗ್ರಾಮದಲ್ಲಿ ಏಳು ಅಂಗನವಾಡಿ ಕೇಂದ್ರಗಳು ದಶಕಗಳಿಂದ ಮೂಲಸೌಲರ್ಯದಿಂದ ವಂಚಿತವಾಗಿ, ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ನಡೆಯುತ್ತಿದವು.

Advertisement

ಇಲ್ಲಿಯ 7ನೇ ಅಂಗನವಾಡಿ ಕೇಂದ್ರ ಒಂದು ಚಿಕ್ಕ ಕೊಠಡಿಯಲ್ಲಿ ಇದು. ಇಲ್ಲಿಯ ಮಕ್ಕಳಿಗೆ ಅಡಿಗೆ ಮಾಡಲು ಕಟ್ಟಿಗೆಯ ಸಣ್ಣ ಕಪಾಟಿನಲ್ಲಿ ದಿನನಿತ್ಯ ಮಕ್ಕಳಿಗೆ ಅಡಿಗೆ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದರು. ಇದರ ಬಗ್ಗೆ ಕೇಂದ್ರ ಕಾರ್ಯಕರ್ತೆಯನ್ನು ವಿಚಾರಿಸಿದಾಗ. ಇನ್ನೂ ಮಾಡುವುದು ಸರ್.. ಬಾಡಿಗೆ ಮನೆಗು ಸಿಗುತ್ತಿಲ್ಲ. ಸ್ವಂತ ಕಟ್ಟಡವು ಇಲ್ಲ.. ಅನಿವಾರ್ಯವಾಗಿ ಇಂಥ ಪರಿಸ್ಥಿತಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ಈ ಗ್ರಾಮದ ನಾಲ್ಕು ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡವಿಲ್ಲದೇ ಕಳೆದ 10 ವರ್ಷಗಳಿಂದ ಬಾಡಿಗೆ ಮನೆಗಲ್ಲಿ ನಡೆಯುತ್ತಿವೆ. ಇದರ ಬಗ್ಗೆ ನ:14ರಂದು ಉದಯವಾಣಿ ವೆಬ್‌ನಲ್ಲಿ ಮತ್ತು ಉದಯವಾಣಿ ಪತ್ರಿಕೆಯಲ್ಲಿ “ಸೌಲಭ್ಯ ನಿರೀಕ್ಷೆಯಲ್ಲಿ ಅಂಗನವಾಡಿ ಕೇಂದ್ರಗಳು, ಕಟ್ಟಿಗೆ ಕಪಾಟಿನಲ್ಲಿ ಮಕ್ಕಳಿಗೆ ಅಡುಗೆ ತಯಾರಿ” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡ ಮೇಲೆ ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಹಳೆ ಕಟ್ಟಡಗಳನ್ನು ಪರಿಶೀಲಿಸಿ ಅದರಲ್ಲಿ ಒಂದು ಕೊಠಡಿಯನ್ನು ಸ್ವಚ್ಛ ಮಾಡಿ ಈ ಕೊಠಡಿಯಲ್ಲಿ ಸದ್ಯ ತಾತ್ಕಾಲಿಕವಾಗಿ ಕಟ್ಟಿಗೆ ಕಪಾಟಿನಲ್ಲಿ ಮಕ್ಕಳಿಗೆ ಅಡುಗೆ ಮಾಡುತ್ತಿದ. 7ನೇ ಅಂಗನವಾಡಿ ಕೇಂದ್ರವನ್ನು ಇಲ್ಲಿಗೆ ಶಿಫ್ಟ್ ಮಾಡಿದಾರೆ.

ಮಂಗಳವಾರ ಸರಕಾರಿ ಶಾಲಾ ಕೊಠಡಿಯನ್ನು ಸ್ವಚ್ಛತೆ ಮಾಡಿ ಸರಸ್ವತಿ ಪೂಜೆ ಮಾಡಿ ಇಲ್ಲಿಗೆ 7ನೇ ಅಂಗನವಾಡಿ ಕೇಂದ್ರದವರು ಆಗಮಿಸಿದರು. ಈ ವೇಳೆ ಮಾತನಾಡಿದ ಸಿಡಿಪಿಒ ವಿರೂಪಾಕ್ಷಯ್ಯ ಅವರು ಈ ಗ್ರಾಮದಲ್ಲಿ ಸರಕಾರಿ ನಿವೇಶನದ ಕೊರತೆಯಿಂದ ನಾಲ್ಕು ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಸದ್ಯ ಹಳೆಯ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಈ ಕೇಂದ್ರ ನಡೆಸಲು ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷರು ದೇವಪ್ಪ ಸುಬೇದಾರ, ಗ್ರಾಪಂ ಸದಸ್ಯ ಪರಸಪ್ಪ ಚಳ್ಳೂರ, ಮಾಜಿ ಗ್ರಾಪಂ ಹನಮಂತ ಅಳ್ಳಳ್ಳಿ, ಪಿಡಿಒ ಶಿವಪುತ್ರಪ್ಪ ಬರದೇಲಿ, ಪ್ರಾಥಮಿಕ ಶಾಲೆಯ ಮುಖ್ಯಗುರುಗಳು, ಹಿರೇಮನ್ನಾಪೂರ ವಲಯದ ಅಂಗನವಾಡಿ ಮೇಲ್ವಿಚಾರಕಿ ನಾಗಮ್ಮ, ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಮಕ್ಕಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next