Advertisement

ಅಂಗನವಾಡಿ ಕೇಂದ್ರವೀಗ ಹಂದಿಗಳ ತಾಣ!

05:15 PM Nov 03, 2018 | |

ಗದಗ: ಕಳಸಾಪುರ ರಸ್ತೆಯ ಬಾಪೂಜಿ ನಗರದಲ್ಲಿರುವ 190ನೇ ಅಂಗನವಾಡಿ ಕೇಂದ್ರ ಅಕ್ಷರಶಃ ಹಂದಿಗಳ ಆವಾಸ ತಾಣವಾಗಿದ್ದು, ಅಂಗನವಾಡಿ ಮುಂಭಾಗ ಚರಂಡಿಯಲ್ಲಿ ಕೊಳಚೆ ನೀರು ತುಂಬಿ ಗಬ್ಬೆದ್ದು ನಾರುತ್ತಿದೆ.

Advertisement

ಗದಗ- ಬೆಟಗೇರಿ ಅವಳಿ ನಗರದ ನಗರಸಭೆ ವಾರ್ಡ್‌ ನಂ.35ರ ವ್ಯಾಪ್ತಿಯ ಬಾಪೂಜಿ ನಗರದಲ್ಲಿ ಬಹುತೇಕ ಪರಿಶಿಷ್ಟ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸವಿದ್ದಾರೆ. ಈ ಬಡಾವಣೆಯಲ್ಲಿರುವ ಏಕೈಕ ಅಂಗನವಾಡಿ ಕೇಂದ್ರ ಇದಾಗಿದ್ದು, 30 ವಿದ್ಯಾರ್ಥಿಗಳ ಹಾಜರಾತಿ ಇದೆ. ನಿತ್ಯ 18 ರಿಂದ 20 ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಮಾತೃಪೂರ್ಣ ಯೋಜನೆಯಡಿ ನಾಲ್ವರು ಗರ್ಭಿಣಿಯರು, ನಾಲ್ವರು ಬಾಣಂತಿಯರು ನೋಂದಾಯಿಸಿಕೊಂಡಿದ್ದಾರೆ. ಅಂಗನವಾಡಿ ಸುತ್ತಲಿನ ಕಲುಷಿತ ವಾತಾವರಣವಿದ್ದು, ಸದಾ ದುರ್ವಾಸನೆ ಬೀರುತ್ತಿರುತ್ತದೆ. 190ನೇ ಅಂಗನವಾಡಿ ಕೇಂದ್ರ ಆರಂಭಗೊಂಡು ದಶಕ ಕಳೆದರೂ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಕಾಂಪೌಂಡ್‌, ಶೌಚಾಲಯ, ಕುಡಿಯುವ ನೀರಿನ ನಲ್ಲಿಯ ಸೌಲಭ್ಯವಿಲ್ಲದೆ ಮಕ್ಕಳು ಪರಿತಪಿಸುವಂತಾಗಿದೆ.

ಹಂದಿಗಳ ಆವಾಸ ತಾಣ: ಬಡಾವಣೆಯ ಕೊನೆಯ ಭಾಗದಲ್ಲಿರುವ ಅಂಗನವಾಡಿ ಮುಂಭಾಗದಲ್ಲೇ ಇಡೀ ಬಡಾವಣೆ ಕೊಳಚೆ ನೀರು ನಿಲ್ಲುತ್ತದೆ. ಪರಿಣಾಮ ಸುತ್ತಲಿನ ಖಾಲಿ ಪ್ರದೇಶ ದಲ್ಲಿ ಮುಳ್ಳು ಕಂಟಿಗಳು ಬೆಳೆದಿದ್ದು, ನೂರಾರು ಹಂದಿಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ. ಅಂಗನವಾಡಿಗೆ ಬರುವ ಮಕ್ಕಳು ಕೈಯಲ್ಲಿ ಬ್ರೆಡ್‌, ಉಂಡಿ ಸೇರಿದಂತೆ ಇನ್ನಿತರೆ ತಿನಿಸುಗಳನ್ನುಡಿದು ರಸ್ತೆಗಿಳಿದರೆ, ಮಕ್ಕಳ ಕೈಯಲ್ಲಿರುವ ತಿಂಡಿ- ತಿನಿಸಿಗಾಗಿ ಹಂದಿಗಳು ದಾಳಿ ನಡೆಸುತ್ತವೆ. ಅದರಂತೆ 2017ರ ಅಕ್ಟೋಬರ್‌ ನಲ್ಲಿ ಇದೇ ಅಂಗನವಾ ಡಿಯ ಬಾಲಕಿಯೊಬ್ಬಳು ಹಂದಿ ದಾಳಿಗೆ ಒಳಗಾಗಿದ್ದಳು. ಇದರಿಂದಾಗಿ ಅಂಗನವಾಡಿಗೆ ಕಳುಹಿಸಲು ಪಾಲಕರೂ ಹಿಂಜರಿಯುತ್ತಾರೆ. ದಿನವಿಡೀ ಮಕ್ಕಳನ್ನು ಕಾಯುವುದು ಸವಾಲಿನ ಕೆಲಸವಾಗಿದೆ ಎಂಬುದು ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ ಹಮ್ಮಗಿ ಅವರ ಅಳಲು.

ಕಳೆದ ಒಂದು ವರ್ಷದಿಂದ ಅಡುಗೆ ಸಹಾಯಕಿ ಇಲ್ಲದೇ ಎಲ್ಲ ಕೆಲಸವನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ. ಈ ಬಗ್ಗೆ ಇಲಾಖೆ ಅ ಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆಗೊಮ್ಮೆ? ಈಗೊಮ್ಮೆ ಅಂಗನವಾಡಿ ಬಯಲು ಸ್ವಚ್ಛಗೊಳಿಸಿದರೂ, ಮತ್ತೆ ಅದೇ ಪರಿಸ್ಥಿತಿ.
ಮೀನಾಕ್ಷಿ ಹಮ್ಮಗಿ,
ಅಂಗನವಾಡಿ ಸಹಾಯಕಿ

ಶೀಘ್ರ ಭೇಟಿ
ಈ ಬಗ್ಗೆ ನನ್ನ ಗಮನಕ್ಕಿರಲಿಲ್ಲಿ. ಇನ್ನೆರಡು ದಿನಗಳಲ್ಲಿ ಬಾಪೂಜಿ ನಗರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅಂಗನವಾಡಿ ಸುತ್ತ ಬೆಳೆದಿರುವ ಮುಳ್ಳು, ಬೇಲಿ ತೆರವುಗೊಳಿಸಿ, ಸ್ವಚ್ಛತೆ ಮಾಡಿಕೊಂಡುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಈಗಾಗಲೇ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದಂತೆ ಕಾಂಪೌಂಡ್‌ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
.ರಾಮಕೃಷ್ಣ ಪಡಗಣ್ಣವರ,
 ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.

Advertisement

ವಾರ್ಡ್‌ ನಂಬರ್‌ 35ನೇ
ವಾರ್ಡ್‌ನಲ್ಲಿರುವ 190 ಅಂಗನವಾಡಿ ಕೇಂದ್ರದ ಪರಿಸ್ಥಿತಿ ಶೋಚನೀಯವಾಗಿದೆ. ಸುತ್ತಲೂ ಬೆಳೆದಿರುವ ಜಾಲಿಗಿಡಗಳುನ್ನು ತೆರವುಗೊಳಿಸಲು ನಗರಸಭೆ ಮುಂದಾಗಬೇಕು. 
ಸುರೇಶ ಚಲವಾದಿ,
ದಲಿತ ವಿದ್ಯಾರ್ಥಿ ಪರಿಷತ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next