Advertisement

ಅಂಗನವಾಡಿ ಜಾಗ ಅತಿಕ್ರಮಣ ಆರೋಪ: ಗ್ರಾಮಸ್ಥರ ಪ್ರತಿಭಟನೆ

04:25 PM Jan 13, 2018 | Team Udayavani |

ಕೆದಿಲ: ಅಂಗನವಾಡಿ ಜಾಗವನ್ನು ಖಾಸಗಿ ವ್ಯಕ್ತಿಯೊರ್ವರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಜ. 12ರಂದು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕರಿಮಜಲ್‌ ಅಂಗನವಾಡಿ ಕೇಂದ್ರದಲ್ಲಿ ಸಂಭವಿಸಿದೆ.

Advertisement

ಈ ವೇಳೆ ಗ್ರಾ.ಪಂ. ಸದಸ್ಯ ಉಮೇಶ್‌ ಪೂಜಾರಿ ಮುರುವ ಮಾತನಾಡಿ, 202/ಐ ಅ1ರಲ್ಲಿ 0.5 ಎಕ್ರೆ ಜಾಗ ಅಂಗನವಾಡಿ ಕೇಂದ್ರದ ಹೆಸರಿನಲ್ಲಿದ್ದು, ಅದನ್ನು ಆನಂದ ಆಚಾರ್ಯ ಅವರ ಮಕ್ಕಳಾದ ಪುರಂದರ, ಹರೀಶ, ಯಶವಂತ ಆಚಾರ್ಯ ಅವರು ಅಕ್ರಮವಾಗಿ ವಶಪಡಿಸಿಕೊಂಡು ಅಲ್ಲಿ ತಡೆಗೋಡೆ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.

ಕರ್ತವ್ಯ ಲೋಪ
ಜತೆಗೆ 1.5 ಕೋಟಿ ರೂ. ವೆಚ್ಚದಲ್ಲಿ ಕೆದಿಲ – ಕರಿಮಜಲು ರಸ್ತೆ ಕಾಮಗಾರಿ ಹಂತದಲ್ಲಿದ್ದು, ಇದಕ್ಕೂ ಅವರು ವಿರೋಧಿಸುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಮನವರಿಕೆ ಮಾಡಿದರೂ ಸ್ಪಂದಿಸದೇ ಕರ್ತವ್ಯ ಲೋಪ ಎಸಗುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ವರೆಗೆ ನಿರಂತರವಾಗಿ ನಮ್ಮ
ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳ ಭೇಟಿ
ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಾದ ಸುದಾಜೋಷಿ ಹಾಗೂ ದೀಪಿಕಾ
ಅವರು ಆಗಮಿಸಿ ಪ್ರತಿಭಟನಕಾರನ್ನು ಮನವೊಲಿಸಲು ಪ್ರಯತ್ನಿಸಿದರಾದರೂ ಪ್ರತಿಭಟನಕಾರರು ಎ.ಸಿ. ಹಾಗೂ
ತಹಶೀಲ್ದಾರ್‌ ಅವರು ಸ್ಥಳಕ್ಕೆ ಭೇಟಿ ಕೊಟ್ಟು ಬೇಡಿಕೆಗೆ ಸ್ಪಂದಿಸುವ ವರೆಗೆ ನಮ್ಮ ಹೋರಾಟವನ್ನು ಕೊನೆಗೊಳಿಸುವುದಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕೆದಿಲ ಗ್ರಾಮ ಪಂಚಾಯತ್‌ ಅಧ್ಯಕ್ಷ ಅಣ್ಣಪ್ಪ ಕುಲಾಲ್, ಕರಿಮಜಲ ಅಂಗನವಾಡಿ ಬಾಲವಿಕಾಸ ಅಧ್ಯಕ್ಷೆ, ಕೆದಿಲ ಗ್ರಾಮ ಪಂಚಾಯತ್‌ ಸದಸ್ಯೆ ಬೇಬಿ ಎಂ. ಮುರುವ, ಸುದರ್ಶನ್‌ ಆಚಾರ್ಯ, ಪದ್ಮನಾಭ ಭಟ್‌ ಪೆರ್ನಾಜೆ, ಬಿ. ಅಬ್ದುಲ್‌ ಖಾದರ್‌, ಪ್ರವೀಣ್‌ ಕಲ್ಲಾಜೆ, ಸ್ಥಳೀಯರಾದಂತಹವಿಜಯ್‌ ಡಿ’ಸೋಜಾ, ಪ್ರಸಾದ್‌ ಕರಿಮಜಲಲ್, ಅರುಣ್‌, ದಿನೇಶ್‌ ಮುರುವ, ಲಿಂಗಪ್ಪ ಗೌಡ, ಮಾರ್ಷಲ್, ಬಾಬು ಮೊದಲಾದವರು ಉಪಸ್ಥಿತರಿದ್ದರು.

Advertisement

ಕ್ರಮ ಕೈಗೊಳ್ಳಲು ನಿರಾಸಕ್ತಿ 
ತಾ.ಪಂ. ಸದಸ್ಯ ಆದಂ ಕುಂಞಿ ಮಾತನಾಡಿ, ಬಡವರ ಆಸ್ತಿಯನ್ನು 24 ಗಂಟೆಗಳೊಳಗೆ ಎತ್ತಂಗಡಿ ಮಾಡೋ ಕಂದಾಯ ಇಲಾಖೆ ಸರಕಾರಿ ಸಂಸ್ಥೆಯ ಜಾಗವನ್ನೇ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಯಾಕೆ ಇಷ್ಟು ನಿರಾಸಕ್ತಿ ತೋರುತ್ತಿದೆ. ಯಾರದೋ ವೈಯಕ್ತಿಕ ಹಿತಾಸಕ್ತಿಗೋಸ್ಕರ ಸರಕಾರಿ ಸಂಘ-ಸಂಸ್ಥೆಗಳ ಜಾಗವನ್ನು ಬಲಿ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಜನಪ್ರತಿನಿಧಿಗಳಾದ ನಮ್ಮ ಬೇಡಿಕೆ, ಮನವಿಗೆ ಸ್ಪಂದಿಸದಿದ್ದರೆ ನಾವು ಜನಪರ ಕೆಲಸದಲ್ಲಿ ತೊಡಗುವುದು ಹೇಗೆ. ನಮಗೆ ನ್ಯಾಯ ಬೇಕು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮಾನ್ಯ ಎಸಿ ಅವರು ಸ್ಥಳಕ್ಕೆ ಭೇಟಿ ಕೊಟ್ಟು ನಮಗೆ ಶಾಶ್ವತ ಪರಿಹಾರ ಒದಗಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next