Advertisement

ಮಣ್ಣು ಕುಸಿದು ಅಂಗನವಾಡಿ ಅಪಾಯದಲ್ಲಿ

03:45 AM Aug 09, 2018 | Karthik A |

ಪುಂಜಾಲಕಟ್ಟೆ: ಪಿಲಾತಬೆಟ್ಟು ಗ್ರಾಮದ ಮೂರ್ಜೆ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಬುಧವಾರ ತಡೆಗೋಡೆ ಸಹಿತ ಮಣ್ಣು ಕುಸಿದಿದ್ದು, ಅಂಗನವಾಡಿ ಕಟ್ಟಡ ಅಪಾಯದಲ್ಲಿದೆ. ಈ ಕಟ್ಟಡಕ್ಕೆ ತಾಗಿಕೊಂಡು ಸರಕಾರಿ ಹಿ.ಪ್ರಾ. ಶಾಲೆಯೂ ಇದ್ದು, ಅದರ ಒಂದು ಪಾರ್ಶ್ವಕ್ಕೂ ಅಪಾಯದ ಭೀತಿ ಇದೆ. ಸರಕಾರಿ ಹಿ.ಪ್ರಾ. ಶಾಲಾ ಕಟ್ಟಡ ಮತ್ತು ಅಂಗನವಾಡಿ ಕಟ್ಟಡ ಎತ್ತರ ಪ್ರದೇಶದಲ್ಲಿದ್ದು, ಹಿಂಭಾಗದಲ್ಲಿ ತಗ್ಗು ಪ್ರದೇಶದಲ್ಲಿ ಬೀಡಿ ಉದ್ಯಮಿಯೊಬ್ಬರ ಕಟ್ಟಡವಿದೆ. ಅವರ ಜಾಗಕ್ಕೆ ಆವರಣ ಗೋಡೆ ಕಟ್ಟಿದ್ದು ಅದು ಕುಸಿದು ಬಿದ್ದಿದೆ. ಆವರಣಗೋಡೆಗೂ ಅಂಗನವಾಡಿಗೂ 7 ಅಡಿ ದೂರವಿದ್ದು, ಕಟ್ಟಡದ ಸಮೀಪದವರೆಗೆ ಮಣ್ಣು ಕುಸಿದಿದೆ. ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕವಾಗಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಶಾಲೆಯ ಒಂದು ತರಗತಿಯ ಮಕ್ಕಳನ್ನೂ ಸ್ಥಳಾಂತರಿಸಲಾಗಿದೆ.

Advertisement

ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಸ್ಥಳಕ್ಕಾಗಮಿಸಿ ಬಂಟ್ವಾಳ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪವಿಭಾಗ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಪಂ.ಅ. ಕಾರ್ಯದರ್ಶಿ ಪ್ರಶಾಂತ್‌ ಜೋಯೆಲ್‌ ಫೆಲೆರೋ, ಎಂಜಿನಿಯರ್‌ ಕೃಷ್ಣ ಮಾನೆ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲಿಕಾ, ಗ್ರಾಮಕರಣಿಕ ರಾಜು, ಸಹಾಯಕ ಸಂತೋಷ್‌, ಗ್ರಾ.ಪಂ. ಸದಸ್ಯ, ಅಂಗನವಾಡಿ ಸಮಿತಿ ಅಧ್ಯಕ್ಷ ಯೋಗೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನನ್ನ ಜಾಗದ ಎತ್ತರ ಪ್ರದೇಶದ ಮಣ್ಣನ್ನು ಸುಮಾರು 38 ವರ್ಷಗಳ ಹಿಂದೆಯೇ ತೆಗೆಸಿದ್ದು, ಮೇಲ್ಭಾಗಕ್ಕೆ ಆವರಣ ಗೋಡೆ ಕಟ್ಟಿಸಿದ್ದೇನೆ. ಅನಂತರ ಅಂಗನವಾಡಿ  ಕಟ್ಟಲಾಗಿದೆ. ಇತ್ತೀಚಿನ ಮಳೆಯಿಂದಾಗಿ ಮತ್ತು ಮೇಲ್ಭಾಗದ ನೀರು ಹರಿದು ಆವರಣ ಗೋಡೆ ಕುಸಿದಿರಬಹುದು ಎಂದು ಬೀಡಿ ಉದ್ಯಮಿಯೊಬ್ಬರು ತಿಳಿಸಿದ್ದಾರೆ. ಮಣ್ಣು ಕುಸಿದ ಭಾಗಕ್ಕೆ ಟರ್ಪಾಲು ಹಾಸಿ ಮತ್ತಷ್ಟು ಮಣ್ಣು ಕುಸಿಯದಂತೆ ಎಚ್ಚರಿಕೆ ವಹಿಸಲು ಜಾಗದ ಮಾಲಕರಲ್ಲಿ ವಿನಂತಿಸಿರುವುದಾಗಿ ಎಂಜಿನಿಯರ್‌ ಕೃಷ್ಣ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next