Advertisement

ಬೇಡಿಕೆ ಈಡೇರಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

12:41 PM Mar 16, 2021 | Team Udayavani |

ಕೋಲಾರ: ಅಂಗನವಾಡಿ ನೌಕರರ ಬೇಡಿಕೆಗಳ ಈಡೇ ರಿಕೆಗೆ ಒತ್ತಾಯಿಸಿ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮುಂದೆ ಸೋಮವಾರ ನೌಕರರು ಉಪವಾಸ ಸತ್ಯಾಗ್ರಹ ನಡೆಸಿದರು.

Advertisement

ಸರ್ಕಾರದ ಜವಾಬ್ದಾರಿ: ತಮ್ಮ ಬೇಡಿಕೆಗಳನ್ನು ಇಟ್ಟು ಕೊಂಡು ರಾಜ್ಯಾದ್ಯಂತ ಕರೆ ನೀಡಿರುವ ಉಪವಾಸ ಸತ್ಯಾಗ್ರಹ ನಡೆಸುತ್ತಾ ಇದ್ದು, ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರೂ ಕೂಡ ಕೊರೊನಾ ವೇಳೆ ಸರ್ಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಷರತ್ತುಗಳಿಲ್ಲದೇ ಕೆಲಸ ನಿರ್ವಹಿಸಿದ್ದಾರೆ. ಈ ಕೆಲಸ ಮಾಡುವಾಗ ಕೆಲಸ ಒತ್ತಡದಿಂದ 35 ಜನ, ಕೊರೊನಾ ಕೆಲಸ ಮಾಡುವ 28 ಜನರು ಬಲಿಯಾಗಿದ್ದಾರೆ. 173 ಜನರಿಗೆ ಕೋವಿಡ್ ಬಂದು ಆ ದಿನಗಳಲ್ಲಿ ತಮ್ಮ ಕುಟುಂಬದ ಆದಾಯವನ್ನು ಕಳೆದು ಕೊಂಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೌಕರರಿಗೆ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಜವಾಬ್ದಾರಿ ಯಾಗಬೇಕು ಎಂದರು.

ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ರಾಜ್ಯದ ಹೈಕೋರ್ಟ್‌ ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ಮಹಿಳೆ ಯರ ಅಪೌಷ್ಟಿಕತೆ ತಡೆಯಲು ಎಚ್ಚರಿಕೆ ಕೊಟ್ಟಿತ್ತು. ಅಂತಹ ಎಲ್ಲಾ ದೂರುಗಳಿಂದ ಎಚ್ಚರಿಕೆ ಗಳಿಂದ ಸರ್ಕಾರದ ಘನೆತೆ ಕಾಪಾಡಿದ್ದು, ಇದೇ ಅಂಗನವಾಡಿ ನೌಕರರು.

ಪರಿಗಣನೆ ಮಾಡಿಲ್ಲ: ಹಲವು ಹಂತಗಳ ಹೋರಾಟ ಗಳ ಒತ್ತಾಯಗಳ ಭಾಗವಾಗಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೇವಾ ಜೇಷ್ಠತೆಯ ಆಧಾರದಲ್ಲಿ 153.25 ಕೋಟಿ, ಮಿನಿ ಅಂಗನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿ 6.99 ಕೋಟಿ, ಅಂಗನವಾಡಿ ಸಹಾಯಕಿಯರಿಗೆ ಸಂಬಳದ ವ್ಯತ್ಯಾಸ ಮೊತ್ತ 131.42 ಕೋಟಿ, ನಿವೃತ್ತಿ ಸೌಲಭ್ಯ 47.82 ಕೋಟಿ ಸೇರಿದಂತೆ ಒಟ್ಟು 339.38 ಕೋಟಿ ರೂ.ಗಳನ್ನು ಶಿಫಾರಸು ಮಾಡಲಾಗಿತ್ತು. ಈ ಮೊತ್ತ ನೀಡಿದ್ದರೆ, 1 ಲಕ್ಷ 30 ಸಾವಿರ ಕುಟುಂಬ ಗಳಿಗೆ ಸಹಾಯವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಈ ಮೂರು ಶಿಫಾರಸುಗಳಲ್ಲಿ ಯಾವುದೇ ಒಂದು ಅಂಶವನ್ನು ಪರಿಗಣನೆ ಮಾಡದೇ ನೌಕರರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು ಅಂಗನವಾಡಿ ನೌಕರರು 2016 ರಿಂದ 7,304 ಜನ ನಿವೃತ್ತಿಯಾಗಿದ್ದಾರೆ. ಅವರಿಗೆ ಇಡಗಂಟನ್ನು ಕೂಡ ಸರ್ಕಾರ ಪರಿಗಣನೆ ಮಾಡಿಲ್ಲ.

ಮಾರ್ಚ್‌ 4 ರಂದು ಅಂಗನವಾಡಿ ನೌಕರರು ಬಜೆಟ್‌ ಅಧಿವೇಶನ ಚಲೋ ನಡೆಸಿದಾಗ ಸಚಿವೆ ಶಶಿಕಲಾ ಜೊಲ್ಲೆಯವರು ಸ್ಥಳಕ್ಕೆ ಆಗಮಿಸಿ ಈ ಬಜೆಟ್‌ನಲ್ಲಿ ಬೇಡಿಕೆಗಳನ್ನು ಪರಿಗಣಿಸುವು ದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಆ ಭರವಸೆ ಯನ್ನು ಹುಸಿ ಮಾಡಲಾಗಿದೆ ಎಂದರು. ಈ ಉಪವಾಸ ಸತ್ಯಾಗ್ರಹದಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಲ್ಪನಾ, ಕಾರ್ಯದರ್ಶಿ ವಿ ಮಂಜುಳಾ, ಖಜಾಂಚಿ ಲಕ್ಷ್ಮೀ ದೇವಮ್ಮ, ಮುಖಂಡರಾದ ಲೋಕೇಶ್ವರಿ,ಅಮರಾವತಿ, ಸರೋಜ, ಪ್ರಮೀಳಾ, ಸೌಭಾಗ್ಯ, ಧನಲಕ್ಷ್ಮೀ, ಗಾಯತ್ರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next