Advertisement
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಜತೆಗೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ರಾಜ್ಯ ಸಮಿತಿ ಸಭೆ ನಡೆಸಿ ಕಾನೂನು ಹೋರಾಟಕ್ಕೆ ತಯಾರಿ ಆರಂಭಿಸಿದೆ.
Related Articles
Advertisement
ಶಿಫಾರಸು ಜಾರಿಯಾಗಿಲ್ಲ:
39 ವರ್ಷಗಳಿಂದ ಮಾಡಿದ ಕೆಲಸಗಳ ಬಗ್ಗೆ ಹಾಗೂ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಕೆಲಸದ ಒತ್ತಡದ ಬಗ್ಗೆ 2010-11ನೇ ಸಾಲಿನಲ್ಲಿ 30 ಮಹಿಳಾ ಸಂಸದರು ಮಹಿಳಾ ಸಬಲೀಕರಣ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಧ್ಯಯನ ನಡೆಸಿ ಲೋಕಸಭೆ, ರಾಜ್ಯ ಸಭೆಯಲ್ಲಿ ವರದಿ ಮಂಡಿಸಿದ್ದಾರೆ.
ವರದಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಜಾಗತೀಕರಣಗೊಳಿಸಬೇಕು ಹಾಗೂ ಅಂಗನವಾಡಿ ಸಿಬಂದಿಯ ಕೆಲಸದ ಒತ್ತಡದ ಬಗ್ಗೆ ಹಾಗೂ ಸಂಭಾವನೆಗಳ
ಕುರಿತು ಕ್ರಮಬದ್ಧವಾದ ನೀತಿಯನ್ನು ಜಾರಿ ಮಾಡಿ ಕಾಲಕಾಲಕ್ಕೆ ಇತರ ಸವಲತ್ತುಗಳು ಹಾಗೂ ಸಂಭಾವನೆಯಲ್ಲಿ ವಾರ್ಷಿಕ ಹೆಚ್ಚಳ ಹಾಗೂ ಇತರ ಭತ್ತೆಗಳನ್ನು ನೀಡುವಂತೆ ಶಿಫಾರಸು ಇದೆಯಾದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ನಿವೃತ್ತಿ ವೇಳೆ ಸಿಗುವುದು 30, 50 ಸಾವಿರ ರೂ.! :
ನೌಕರರಿಗೆ 2010ರ ವರೆಗೆ ನಿವೃತ್ತಿ ವಯಸ್ಸಿನ ಮಿತಿ ಇರದಿದ್ದ ಕಾರಣ ವೃದ್ಧಾಪ್ಯದ ವರೆಗೂ ಸೇವೆ ಸಲ್ಲಿಸುತ್ತಿದ್ದರು. 2010-11ರಲ್ಲಿ ಸರಕಾರವು ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ನಿಗದಿ ಮಾಡಿತು. ಆಗ ಕಾರ್ಯಕರ್ತೆಯರಿಗೆ 50 ಸಾವಿರ ರೂ., ಸಹಾಯಕಿಯರಿಗೆ 30 ಸಾವಿರ ರೂ. ಇಡುಗಂಟನ್ನು ನೀಡಲಾಗುತ್ತಿದೆ. ಆದರೆ ಪಿಂಚಣಿಯ ವ್ಯವಸ್ಥೆಯಿಲ್ಲದೆ ಅತ್ಯಲ್ಪ ಇಡುಗಂಟಿನೊಂದಿಗೆ ನಿವೃತ್ತರಾಗುವ ಅವರು ಮುಪ್ಪಿನಲ್ಲಿ ಆರ್ಥಿಕ ವ್ಯವಸ್ಥೆ ಇಲ್ಲದೆ ನರಳುತ್ತಿದ್ದಾರೆ. ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು ಎಂಬುದು ಅವರ ಕೂಗು.
ಅಂಗನವಾಡಿ ಸಿಬಂದಿಗೆ ನಿವೃತ್ತಿ ಸಮಯದಲ್ಲಿ ಪಿಂಚಣಿ ದೊರೆಯಬೇಕು ಹಾಗೂ ಇಲಾಖೇತರ ಕೆಲಸಗಳನ್ನು ನಮಗೆ ವಹಿಸಬಾರದು ಎಂದು ಸರಕಾರವನ್ನು ಕೇಳುತ್ತಲೇ ಬಂದಿದ್ದೇವೆ. ಈ ಬಗ್ಗೆ ಈಗಾಗಲೇ ಮಾಡಿದ ಹೋರಾಟಗಳು ಫಲಕಾರಿಯಾಗದೇ ಇರುವುದರಿಂದ ಇದೀಗ ಕಾನೂನು ಹೋರಾಟಕ್ಕೆ ಇಳಿಯಬೇಕಾಯಿತು.– ಜಯಲಕ್ಷ್ಮೀ ಬಿ.ಆರ್.,ಅಂಗನವಾಡಿ ಕಾರ್ಯಕರ್ತೆಯರ / ಸಹಾಯಕಿಯರ ಸಂಘದ ರಾಜ್ಯಾಧ್ಯಕ್ಷೆ
-ದಿನೇಶ್ ಇರಾ