Advertisement
ಇಂದು ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದರೂ. ಇನ್ನು ಅನೇಕ ಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ನಡೆಯುತ್ತಿರುವುದು ಒಂದು ದುರಂತವಾಗಿದೆ.
Related Articles
ಇಲ್ಲಿಯ 7ನೇ ಅಂಗನವಾಡಿ ಕೇಂದ್ರ ಒಂದು ಚಿಕ್ಕ ಕೊಠಡಿಯಲ್ಲಿ ಇದು. ಇಲ್ಲಿಯ ಮಕ್ಕಳಿಗೆ ಅಡಿಗೆ ಮಾಡಲು ಕಟ್ಟಿಗೆಯಿಂದ ತಯಾರಿಸಿದ ಕಪಾಟಿನಲ್ಲಿ ಮಕ್ಕಳಿಗೆ ಅಡಿಗೆ ತಯಾರಿಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಇದರ ಬಗ್ಗೆ ಕೇಂದ್ರ ಕಾರ್ಯಕರ್ತೆಯನ್ನು ವಿಚಾರಿಸಿದಾಗ. ಇನ್ನೂ ಮಾಡುವದು ಸರ್.. ಬಾಡಿಗೆ ಮನೆಗು ಸಿಗುತ್ತಿಲ್ಲ.. ಸ್ವಂತ ಕಟ್ಟಡವು ಇಲ್ಲ.. ಅನಿವಾರ್ಯವಾಗಿ ಇಂಥ ಪರಿಸ್ಥಿತಿಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದೇವೆ ಎಂದು ತಮ್ಮ ನೋವನ್ನು ತೋಡಿಕೊಂಡರು.
Advertisement
ಇದನ್ನೂ ಓದಿ:ಗೋವಾ ರಾಜ್ಯದ ಅಭಿವೃದ್ಧಿಯಲ್ಲಿ ಕನ್ನಡಿಗರ ಕೊಡುಗೆ ಹೆಚ್ಚಿದೆ : ಶಾಸಕ ದಾಜಿ ಸಾಲ್ಕರ್
ಇಲ್ಲಿಯ ನಾಲ್ಕು ಕೇಂದ್ರಗಳು ಹಳೆಯ ಮನೆಗಳಲ್ಲಿ ನಡೆಯುತ್ತಿದೆ. ಈ ಮನೆಗೆ ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ಸರಿಯಾದ ಬೆಳಕಿನ ವ್ಯವಸ್ಥೆವಿಲ್ಲ, ಇಕ್ಕಟ್ಟಾದ ಸ್ಥಳದಲ್ಲಿ ಕೇಂದ್ರ ನಡೆಯುತ್ತಿದೆ. ಕೊಠಡಿಯ ಒಂದು ಮೂಲೆಯಲ್ಲಿ ಅಡುಗೆ ಮಾಡಿದರೆ, ಇನ್ನೊಂದು ಮೂಲೆಯಲ್ಲಿ ಸಾಮಗ್ರಿಗಳು ಹಾಗೂ ಮಕ್ಕಳ ಕಲಿಕೆಗೆ ಅಗತ್ಯವಾದ ಪರಿಕರಗಳನ್ನು ಸಂಗ್ರಹಿಸಲಾಗಿದೆ. ಛಾವಣಿಗೆ ದುರಸ್ಥಿಯಲ್ಲಿ ಇದೆ. ಮಳೆ ಬಂದರೆ ನೀರು ಕೇಂದ್ರದೊಳಗೆ ಸುರಿಯುತ್ತವೆ. ಇಂತಹ ಸ್ಥಿತಿಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಊಟ ಮಾಡಲು ಸ್ಥಳಾವಕಾಶವಿಲ್ಲದೆ ಗರ್ಭೀಣಿಯರಿಗೆ ನೀಡುವ ಊಟವನ್ನು ಅವರ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ.
ನಾಗಮ್ಮ, ಅಂಗನವಾಡಿ ಮೇಲ್ವಿಚಾರಕಿ ತಾಲೂಕಿನಲ್ಲಿ ಸುಮಾರು 13 ಕೇಂದ್ರಗಳಿಗೆ ನಿವೇಶನ ಇಲ್ಲದೇ ಬಾಡಿಗೆ ಮನೆಗಳಲ್ಲಿ ನಡೆಯುತ್ತಿದೆ. ಹಿರೇಮನ್ನಾಪೂರ ಗ್ರಾಮದ 4 ಕೇಂದ್ರಗಳು 10-15 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ನಡೆಯುತ್ತಿವೆ. ಸದ್ಯ ರಾಜ್ಯ ಪಂಚಾಯತಿ ರಾಜ್ ಆಯುಕ್ತಾಲಯ ಬೆಂಗಳೂರು ಅವರು ಸ್ವಂತ ಕಟ್ಟಡಗಳಿದ ಅಂಗನವಾಡಿ ಕೇಂದ್ರಗಳಿಗೆ ಸಮೀಪದ ಶಾಲೆಗಳಲ್ಲಿ ಕೊಠಡಿಗಳನ್ನು ಒದಗಿಸು ತಿಳಿಸಿದ್ದಾರೆ.
– ವಿರೂಪಾಕ್ಷಯ್ಯ. ಸಿಡಿಪಿಒ ಕುಷ್ಟಗಿ. – ಮಲ್ಲಿಕಾರ್ಜುನ ಮೆದಿಕೇರಿ ದೋಟಿಹಾಳ