Advertisement
ಬೆಳಾಲು ಗ್ರಾಮದ ಲಿಂಗಪ್ಪ ಪೂಜಾರಿ ಹಾಗೂ ಮೇಲಂತಬೆಟ್ಟು ಗ್ರಾಮದ ರಘುರಾಮ್ ಶೆಟ್ಟರ ಗದ್ದೆಯಲ್ಲಿ ಈ ರೋಗದ ಲಕ್ಷಣ ಕಾಣಿಸಿಕೊಂಡಿರುವ ಕುರಿತು “ಉದಯವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ತಾಲೂಕಿನ ಇತರೆಡೆ ಹಾಗೂ ಸುಳ್ಯಮತ್ತು ಕಡಬ ತಾಲೂಕಿನಲ್ಲೂ ಈ ಸಮಸ್ಯೆ ಕಾಣಿಸಿಕೊಂಡಿರುವ ಕುರಿತು ಅಧಿಕಾರಿಗಳಿಗೆ ರೈತರು ತಿಳಿಸಿದ್ದಾರೆ.
ರೋಗ ಲಕ್ಷಣ ಕುರಿತು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನ ವಿಭಾಗದ ಡಾ| ಮಲ್ಲಿಕಾರ್ಜುನ್ ಪರಿಶೀಲಿಸಿ, ಗದ್ದೆಯಲ್ಲಿ ಪೊಟ್ಯಾಷ್ ಕೊರತೆಯಾಗಿರುವ ಸಾಧ್ಯತೆ ಬಗ್ಗೆ ಸೂಚಿಸಿದ್ದಾರೆ. ಸಸ್ಯರೋಗ ವಿಭಾಗ ತಜ್ಞ ಡಾ| ಕೇಧಾರ್‌ನಾಥ್ ಪರಿಶೀಲಿಸಿ, ಒಂದು ಎಕ್ರೆ ಗದ್ದೆಗೆ 12 ಕೆ.ಜಿ. ಯೂರಿಯಾ, 12 ಕೆ.ಜಿ. ಪೊಟ್ಯಾಶ್, 2 ಕೆ.ಜಿ. ಮೆಗ್ನಿಶಿಯಂ ಸಲ್ಫೆಟ್, 2 ಕೆ.ಜಿ. ಝಿಂಕ್ (ಸತು) ಸಲ್ಫೆಟ್ ಬೆರೆಸಿ ಕೇವಲ ತೇವಾಂಶ ಮಾತ್ರ ಇರುವಂತೆ ನೋಡಿಕೊಂಡು ರಸ ಗೊಬ್ಬರ ನೀಡುವಂತೆ ಸೂಚಿಸಿದ್ದಾರೆ. ಭತ್ತಕ್ಕೆ ಸಿಂಪಡಣೆ
ಬಿಸಿಲು ಹೆಚ್ಚಾದಾಗ ರೋಗ ನಿಧಾನವಾಗಿ ಹತೋಟಿಗೆ ಬರುವ ಸಾಧ್ಯತೆಯಿದ್ದು, ತತ್‌ಕ್ಷಣಕ್ಕೆ ಪ್ರತಿ ಎಕ್ರೆಗೆ (Streptomycin) 6 ಗ್ರಾಂ 200 ಲೀಟರಿಗೆ ಬೆರೆಸಿ ಸಿಂಪಡಣೆ ಅಥವಾ 500 ಗ್ರಾಂ ಕಾಪರ್ ಆಕ್ಸಿ ಕ್ಲೋರೈಡ್ 200 ಲೀಟರ್ ನೀರಿಗೆ ಬೆರೆಸಿ ಒಂದೆರಡು ಬಾರಿ ಸಿಂಪಡಿಸಲು ಕೃಷಿ ಅಧಿಕಾರಿಗಳು ಸೂಚಿಸಿದಂತೆ ರೈತರು ಕ್ರಮ ಕೈಗೊಂಡಿದ್ದಾರೆ. ಮುಂದೆ ತೆನೆ ಬರುವ ಹಂತದಲ್ಲಿ ಎಲೆ ಕವಚ ಅಥವಾ ತೆನೆ ಕವಚ (Sheat Blight) ಕೊಳೆರೋಗ ಎದುರಾದಲ್ಲೂ ಈ ರೀತಿ ರಾಸಾಯನಿಕ ಸಿಂಪಡಿಸುವುದು ಸೂಕ್ತವಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.