Advertisement

ನ. 17ರಿಂದ ಬೆಂಗಳೂರು ಟೆಕ್‌ ಸಮಿಟ್‌

11:00 PM Nov 09, 2021 | Team Udayavani |

ಬೆಂಗಳೂರು: ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಮೇಳ ಬೆಂಗಳೂರು ಟೆಕ್‌ ಸಮಿಟ್‌-2021’ಕ್ಕೆ ದಿನಗಣನೆ ಆರಂಭವಾಗಿದ್ದು, ನ. 17ರಿಂದ 19ರ ವರೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

Advertisement

ಕೋವಿಡ್‌-19ರ ಅನಂತರ ಶಿಕ್ಷಣ ಸೇರಿದಂತೆ ಪ್ರತಿ ಕ್ಷೇತ್ರ ದಲ್ಲಿ ತಂತ್ರಜ್ಞಾನದ ಹೊಸ ಆಯಾಮ ತೆರೆದುಕೊಂಡಿದೆ. ಅದಕ್ಕೆ ಪೂರಕವಾದ ತಂತ್ರಜ್ಞಾನ ಪರಿಹಾರೋಪಾಯಗಳು ಈ ಮೂರು ದಿನಗಳ ಮೇಳದಲ್ಲಿ ದೊರೆಯಲಿದೆ. ಆವಿಷ್ಕಾರಗಳು, ಭಿನ್ನ ಆಲೋಚನೆಗಳು, ತಂತ್ರ ಜ್ಞಾನಗಳ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿಗೆ ಇದು ವೇದಿಕೆ ಆಗಲಿದೆ. ಸುಮಾರು 30 ದೇಶಗಳು ಮೇಳಕ್ಕೆ ಸಾಕ್ಷಿಯಾಗಲಿವೆ ಎಂದು ಐಟಿ-ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಈ ಬಾರಿಯ ತಂತ್ರಜ್ಞಾನ ಮೇಳ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಆಚೆಗೆ ವಿಸ್ತರಣೆ ಆಗಿದೆ. ಅಂದರೆ ಟೆಕ್‌ ಸಮಿಟ್‌ನ ಪೂರ್ವಭಾವಿ ಕಾರ್ಯಕ್ರಮ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಅದೇ ರೀತಿ, ಜಾಗತಿಕ ಆವಿಷ್ಕಾರ ಮೈತ್ರಿ ಮಾದರಿಯಲ್ಲಿ ಈ ಸಲ ಇಂಡಿಯಾ ಇನ್ನೋವೇಶನ್‌ ಅಲಾಯನ್ಸ್‌’ ಮಾಡಿಕೊಂಡಿದ್ದು, ಇದರಡಿ ಹಲವು ರಾಜ್ಯಗಳೊಂದಿಗೆ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ವಿನಿಮಯ ನಡೆಯಲಿದೆ.

ಇದನ್ನೂ ಓದಿ:ತವರು ಜಿಲ್ಲಾ ಕೇಂದ್ರದಲ್ಲೇ ರಸ್ತೆಗೆ ‘ಅಪ್ಪು’ ಹೆಸರಿಡಲು ನಗರಸಭೆಯಲ್ಲಿ ಮೂಡದ ಒಮ್ಮತ

ಇದಲ್ಲದೆ, ಭಾರತ-ಅಮೆರಿಕ ಸಮಾವೇಶ ಏರ್ಪಡಿಸಲಾ ಗಿದ್ದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಲಿದೆ ಎಂದರು.

Advertisement

ಸುಮಾರು 75 ಗೋಷ್ಠಿಗಳಲ್ಲಿ 300ಕ್ಕೂ ಅಧಿಕ ಪ್ರತಿನಿಧಿಗಳು ಮಾತನಾಡಲಿದ್ದಾರೆ. ಐದು ಸಾವಿರಕ್ಕೂ ಅಧಿಕ ಸ್ಟಾರ್ಟ್‌ ಅಪ್‌ ಗಳು ಭಾಗವಹಿಸಲಿವೆ.

ಭವಿಷ್ಯದ ಆರ್ಥಿಕತೆಗೆ ದಿಕ್ಸೂಚಿ: ಕ್ರಿಸ್‌
ಕರ್ನಾಟಕ ಐಟಿ ವಿಜನ್‌ ಗ್ರೂಪ್‌ ಅಧ್ಯಕ್ಷ ಎಸ್‌. ಗೋಪಾಲಕೃಷ್ಣನ್‌ (ಕ್ರಿಸ್‌) ಮಾತನಾಡಿ, ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕತೆ 5-10 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಸರಕಾರ ಹೊಂದಿದೆ. ಇದಕ್ಕೆ ಐಟಿ-ಬಿಟಿ ರಾಜಧಾನಿಯಾಗಿರುವ ಕರ್ನಾಟಕದಿಂದ ಹೆಚ್ಚು ನಿರೀಕ್ಷೆ ಮಾಡಲಾಗುತ್ತಿದೆ. ಭವಿಷ್ಯದ ಆರ್ಥಿಕತೆಗೆ ತಂತ್ರಜ್ಞಾನ ಮೇಳ ದಿಕ್ಸೂಚಿ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next