Advertisement

ಅಂಗೈಲಿ ಅಕ್ಷರ ತೆರೆಗೆ ಸಿದ್ದ: ಕ್ಯಾಬ್‌ ಡ್ರೈವರ್‌ ಈಗ ಡೈರೆಕ್ಟರ್‌

03:23 PM Jun 30, 2022 | Team Udayavani |

“ಅಂಗೈಲಿ ಅಕ್ಷರ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್‌ ಟ್ರೇಲರ್‌ ರಿಲೀಸ್‌ ಮಾಡಿ ಶುಭ ಕೋರಿದರು.

Advertisement

ಅಕ್ಷರ ಕಲಿತರೆ ಜೀವನ ನಮ್ಮ ಕೈಲಿರುತ್ತೆ. ಅದನ್ನ ನಂಬಿದರೆ ನಾವು ಇಡೀ ಜಗತ್ತನ್ನೆ ಆಳಬಹುದು ಎಂಬ ಅರ್ಥಪೂರ್ಣ ಸಂದೇಶವನ್ನು “ಅಂಗೈಲಿ ಅಕ್ಷರ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಅಮ್ಮನೇ ಮೊದಲ ಗುರು ಎಂದು ಅಡಿಬರಹದಲ್ಲಿ ಹೇಳಲಾಗಿದೆ.

ಟೆಕ್ಕಿಯಾಗಿರುವ ಜ್ಞಾನೇಶ್‌. ಎಂ.ಬಿ.ಗೊರೂರು ಅವರು ಕೆ.ಹೆಚ್‌.ಎಸ್‌. ಫಿಲಿಂಸ್‌ ಮುಖಾಂತರ ನಿರ್ಮಾಣ ಹಾಗೂ ನಾಲ್ಕು ಹಾಡುಗಳ ಪೈಕಿ ಎರಡು ಗೀತೆಗಳನ್ನು ಬರೆದಿದ್ದಾರೆ. ಮೂಲ ವೃತ್ತಿ ಕ್ಯಾಬ್‌ ಡ್ರೈವರ್‌. ಆದರೂ ಹಲವು ನಿರ್ದೇಶಕರ ಬಳಿ ಕೆಲಸ ಕಲಿತುಕೊಂಡಿರುವ ಸಿದ್ದರಾಜು.ಹೆಚ್‌.ಕಾಳೇನಹಳ್ಳಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್‌ ಕಟ್‌ ಹೇಳಿದ್ದಾರೆ ಹಾಗೂ ನಿರ್ಮಾಣದಲ್ಲೂ ಸಾಥ್‌ ನೀಡಿದ್ದಾರೆ.

ಕೂಲಿ ಕಾರ್ಮಿಕನ ಮಗನೊಬ್ಬ ತನ್ನ ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಹೇಗೆ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುತ್ತಾನೆಂಬುದು ಒಂದು ಎಳೆಯ ಸಾರಾಂಶವಾಗಿದೆ. ಮಕ್ಕಳನ್ನು ಮರಳಿ ಶಿಕ್ಷಣ ಕಡೆಗೆ ಆಸಕ್ತಿ ಬರುವಂತೆ ಮಾಡುವುದು. ಇಂತಹ ಅಂಶಗಳು ಸನ್ನಿವೇಶಗಳ ಮೂಲಕ ತೋರಿಸಲಾಗಿದೆ.  ಹುಲಿಯೂರು ದುರ್ಗ, ಮಾಗಡಿ, ತಾವರಕೆರೆ, ದೊಡ್ಡಬಳ್ಳಾಪುರ, ಚಪ್ಪರದಕಲ್ಲು ಸ್ಥಳಗಳಲ್ಲಿ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ರಿಯಾಲಿಟಿ ಷೋ ಮತ್ತು ಕಿರುತೆರೆಯಲ್ಲಿ ನಟಿಸಿರುವ ಬಹುತೇಕ ಮಕ್ಕಳು ಬಣ್ಣ ಹಚ್ಚಿದ್ದಾರೆ. ಚಿಣ್ಣರುಗಳಾದ ತನುಷ್‌ರಾಜ್‌, ಅಂಕಿತಾ ಜಯರಾಂ, ಅಮೋಘ… ಕೃಷ್ಣ, ರವಿ ದೇಸಾಯಿ, ಬೇಬಿಶ್ರೀ, ಮಧುಸೂದನ್‌, ಜೀವನ್‌, ಚೇತನ್‌, ನವನೀತ್‌ ಇವರೊಂದಿಗೆ ಹಿರಿಯ ಕಲಾವಿದರುಗಳಾದ ಮಹೇಂದ್ರ ಮುನ್ನೋತ್‌, ಮೋನಿಕಾ ಉಳಿದಂತೆ ಗೋವಿಂದೇಗೌಡ, ಚಂದ್ರಪ್ರಭಾ, ಪ್ರಶಾಂತ್‌ ಚಕ್ರವರ್ತಿ ನಟಿಸಿದ್ದಾರೆ.

Advertisement

ಚಿತ್ರದ ಹಾಡುಗಳಿಗೆ ಎ.ಟಿ.ರವೀಶ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ರಮೇಶ್‌-ನರಸಿಂಹಮೂರ್ತಿ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next