Advertisement

ಸೇಂಟ್‌ ಪೀಟರ್ಬರ್ಗ್‌ ಟೆನಿಸ್‌: ಕೊಂಟಾವೀಟ್‌ ಚಾಂಪಿಯನ್‌

10:52 PM Feb 14, 2022 | Team Udayavani |

ಸೇಂಟ್‌ ಪೀಟರ್ಬರ್ಗ್‌: ಸೇಂಟ್‌ ಪೀಟರ್ಬರ್ಗ್‌ ಲೇಡೀಸ್‌ ಟ್ರೋಫಿ ಟೆನಿಸ್‌ ಚಾಂಪಿಯನ್‌ಶಿಪ್‌ ನಲ್ಲಿ ಎಸ್ತೋನಿಯಾದ ಅರ್ನೆಟ್‌ ಕೊಂಟಾವೀಟ್‌ ಚಾಂಪಿಯನ್‌ ಆಗಿ ಮೂಡಿಬಂದರು. ಅವರು ಅಗ್ರ ಶ್ರೇಯಾಂಕಿತ ಮರಿಯಾ ಸಕ್ಕರಿ ಅವರನ್ನು 5-7, 7-6 (4), 7-5ರಿಂದ ಪರಾಭವಗೊಳಿಸಿದರು.

Advertisement

ಡಲ್ಲಾಸ್‌ ಓಪನ್‌: ಮೊದಲ ಬಾರಿಗೆ ಆಯೋಜಿಸಲಾದ ಡಲ್ಲಾಸ್‌ ಓಪನ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ನಲ್ಲಿ ಅಮೆರಿಕದ ರಿಲೀ ಒಪೆಲ್ಕ ಪ್ರಶಸ್ತಿ ಎತ್ತಿದರು. ಫೈನಲ್‌ನಲ್ಲಿ ಅವರು ಜೆನ್ಸನ್‌ ಬ್ರೂಕ್ಸ್‌ಬಿ ವಿರುದ್ಧ 7-6 (5), 7-6 (4) ಅಂತರದ ಮೇಲುಗೈ ಸಾಧಿಸಿದರು.

ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌ 14ನೇ ಜಯಭೇರಿ

ಆರ್ಜೆಂಟೀನಾ ಓಪನ್‌ ಟೂರ್ನಿ ಯಲ್ಲಿ ಆಗ್ರ ಶ್ರೇಯಾಂಕದ ನಾರ್ವೆ ಆಟಗಾರ ಕ್ಯಾಸ್ಪರ್‌ ರೂಡ್‌ಗೆ ಪ್ರಶಸ್ತಿ ಒಲಿಯಿತು. ಅವರು ಆತಿಥೇಯ ನಾಡಿನ ನೆಚ್ಚಿನ ಆಟಗಾರ ಡೀಗೊ ಶಾರ್ಟ್ಸ್ಮನ್‌ ವಿರುದ್ಧ 3 ಸೆಟ್‌ ಹೋರಾಟ ನಡೆಸಿ 5-7, 6-2, 6-3 ಅಂತರದಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next