Advertisement

ಆನೆಕೆರೆ: ಸದ್ಯೋಜಾತ ಪಾರ್ಕ್‌ನಲ್ಲಿ ಕೇಳಿಸುತ್ತಿಲ್ಲ ಮಕ್ಕಳ ಕಲರವ

01:13 PM Oct 25, 2020 | Suhan S |

ಕಾರ್ಕಳ, ಅ. 24:  ರಜಾ ದಿನಗಳಲ್ಲಿ  ಪ್ರವಾಸಿಗರಿಂದ  ತುಂಬಿರುತ್ತಿದ್ದ ಆನೆಕೆರೆ ಸದ್ಯೋಜಾತ ಪಾರ್ಕ್‌ ಬಿಕೋ ಎನ್ನುತ್ತಿದೆ. ಕೋವಿಡ್  ಮಹಾಮಾರಿಯಿಂದಾಗಿ ಪ್ರವಾಸೋದ್ಯಮ ನೆಲಕಚ್ಚಿದ್ದು, ಪಾರ್ಕ್‌ ನಲ್ಲಿ ಪ್ರವಾಸಿಗರಿಲ್ಲ.

Advertisement

ಹೊಸತನ ಮೈಗೂಡಿಸಿಕೊಂಡಿದ್ದ ಆನೆಕೆರೆ ಪಾರ್ಕ್‌ ಜನತೆಯ ಆಕರ್ಷಕ ಕೇಂದ್ರವಾಗಿ ಮಾರ್ಪಟ್ಟಿತ್ತು. ಕಾರ್ಕಳ ಗೊಮ್ಮಟೇಶ್ವರ  ಬೆಟ್ಟ,  ಪುರಾತನ ಬಸದಿ  ವೀಕ್ಷಣೆ ಸಹಿತ  ಪ್ರಮುಖ ಪ್ರವಾಸಿ ಸ್ಥಳಗಳನ್ನು ಸಂದರ್ಶಿಸಲು ನಾಡಿನ ವಿವಿಧೆಡೆಯಿಂದ ಪ್ರವಾಸಿಗರು ನಗರಕ್ಕೆ  ಬರುತ್ತಿದ್ದರು. ಹೀಗೆ ಬರುತ್ತಿದ್ದ ಪ್ರವಾಸಿಗರೆಲ್ಲ ಆನೆಕೆರೆ ಪಾರ್ಕ್‌ ಸಂದರ್ಶಿಸದೆ ಇರುತ್ತಿರಲಿಲ್ಲ.

25 ಎಕರೆ ವಿಶಾಲವಾದ ಆನೆಕೆರೆಯೂ ಭೈರವರಸರ  ಆಳ್ವಿಕೆಯ ಕಾಲಕ್ಕೆ ಸೇರಿ ದ್ದಾಗಿದೆ. ಇದರ ಮಧ್ಯದಲ್ಲಿ  ಬಸದಿ ಇದ್ದು, ತಟದಲ್ಲಿರುವ ಪಾರ್ಕ್‌ ಆಧುನಿಕ  ಸೌಲಭ್ಯಗಳನ್ನು ಹೊಂದಿದೆ. ಪರಿಣಾಮ ದಿನದಿಂದ ದಿನಕ್ಕೆ ಆಗಮಿಸುತ್ತಿರುವವರ ಸಂಖ್ಯೆ ಕೂಡ  ಹೆಚ್ಚಿತ್ತು. ಎಲ್ಲ  ಪ್ರತ್ಯೇಕ ವ್ಯವಸ್ಥೆ  ಕಲ್ಪಿಸಿದ್ದ ಪಾರ್ಕ್‌ ಪ್ರವಾಸಿಗರಿಲ್ಲದೆ  ಈಗ ಖಾಲಿ ಬಿದ್ದಿದೆ.

ಪಾರ್ಕ್‌ ಅಭಿವೃದ್ಧಿ :

ಆರಂಭದಲ್ಲಿ ಪುರಸಭೆ ನಿಧಿಯಿಂದ 15 ಲಕ್ಷ ರೂ. ವ್ಯಯಿಸಿ ಗಾರ್ಡನ್‌, ಆಸನ, ವಾಕಿಂಗ್‌ ಟ್ರ್ಯಾಕ್‌ ಮತ್ತು ಕಾಂಪೌಂಡ್‌ ನಿರ್ಮಾಣದೊಂದಿಗೆ ಪಾರ್ಕ್‌ಗೆ ಪುನರುಜ್ಜೀವನ ಕಲ್ಪಿಸಲಾಗಿತ್ತು. ಬಳಿಕ ಪಾರ್ಕ್‌ನ ಮಧ್ಯೆ ದಾನಿಗಳ ನೆರವಿನಿಂದ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸಲಾಗಿತ್ತು. ಬಳಿಕ 13 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ಆಟವಾಡುವ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವ್ಯಾಯಾಮ ಸಲಕರಣೆಗಳನ್ನು ಮಾಡಲಾಗಿದೆ. ಧ್ವನಿವರ್ಧಕ ವ್ಯವಸ್ಥೆಯೂ ಇದೆ.

Advertisement

ಖಾಸಗಿಗೆ ಹೊಣೆ; ಚಿಂತನೆ : ಸೋಂಕು ಹರಡುವ ಮುನ್ನೆಚ್ಚರಿಕೆಯಾಗಿ ಪಾರ್ಕ್‌ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಜತೆಗೆ ಪ್ರವಾಸಿಗರೂ ಬರುತ್ತಿಲ್ಲ. ಪುರಸಭೆ ಕಡೆಯಿಂದ ಪಾರ್ಕ್‌ ಅನ್ನು ನಿರ್ವಹಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ  ನಿರ್ವಹಣೆಯುನ್ನು ಖಾಸಗಿಯವರಿಗೆ ವಹಿಸಿಕೊಡುವ ಬಗ್ಗೆಯೂ ಚಿಂತನೆಗಳಿವೆ. ರೇಖಾ ಜೆ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ, ಕಾರ್ಕಳ

ನಿರ್ಲಕ್ಷ್ಯ ಸಲ್ಲದು : ಪುರಸಭೆ ಅನುದಾನ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ದಾನಿಗಳ ನೆರವಿನಿಂದ ಪಾರ್ಕ್‌ ಅತ್ಯಾಕರ್ಷಕವಾಗಿ ನಿರ್ಮಾಣಗೊಂಡಿದ್ದು ಇದೀಗ ಪ್ರವಾಸಿಗರಿಲ್ಲದೆ  ಕಳೆಗುಂದುತ್ತಿದೆ. ಪಾರ್ಕ್‌ನಲ್ಲಿ  ನಿರ್ವಹಣೆ ಕೊರತೆ ಕಂಡು ಬರುತ್ತಿದೆ.  ನಿರ್ವಹಣೆ ಬಗ್ಗೆ ಗಮನಹರಿಸುವ ಅಗತ್ಯವಿದೆ.ಶುಭದ ರಾವ್‌, ಪುರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next