Advertisement

ಮುಂಬೈ ಮಹಾನಗರದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆರೆಸ್ಟ್

11:03 AM Mar 09, 2022 | Team Udayavani |

ಆನೇಕಲ್:  ಮುಂಬೈನಲ್ಲಿ ಸಾಕಷ್ಟು ಅಪರಾಧ ಕೃತ್ಯಗಳನ್ನ ಎಸಗಿ ಅಲ್ಲಿಂದ ಪರಾರಿಯಾಗಿದ್ದ ಭೂಗತ ಪಾತಕಿಯನ್ನ ಬಂಧನ ಮಾಡುವಲ್ಲಿ ಕರ್ನಾಟಕ ರಾಜ್ಯದ ಆನೇಕಲ್ ಉಪವಿಭಾಗದ ಪೋಲೀಸರು ಯಶಸ್ವಿಯಾಗಿದ್ದಾರೆ.

Advertisement

ಮುಂಬೈನ ಭೂಗತ ಲೋಕದ ಮೋಸ್ಟ್ ವಾಂಟೆಡ್ ಪಾತಕಿ ಇಲಿಯಾಸ್ ಅಬ್ದುಲ್ ಆಸಿಫ್ ಅಲಿಯಾಸ್ ಇಲಿಯಾಸ್ ಬಚ್ಕನಾ ಬಂಧಿತ ಆರೋಪಿಯಾಗಿದ್ದಾನೆ. ಮುಂಬೈ ನಲ್ಲಿ ಗ್ಯಾಂಗ್ ಕಟ್ಟಿಕೊಂಡಿದ್ದ ಪಾತಕಿ ಇಲಿಯಾಸ್ ಕೊಲೆ, ಸುಲಿಗೆ, ದರೋಡೆ, ಹಣಕ್ಕಾಗಿ ಅಪಸರಣ, ಕೊಲೆಯತ್ನ, ಡ್ರಗ್ಸ್ ಮಾಫಿಯಾ ಹೀಗೆ ಸಾಕಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮುಂಬೈ ಪೋಲೀಸರು ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನ ರಚನೆ ಮಾಡಿ ಹುಡುಕಾಟ ನಡೆಸುತ್ತಿದ್ದಂತೆ ಕ್ರಿಮಿನಲ್ ಇಲಿಯಾಸ್ ಅಬ್ದುಲ್ ರಾಜ್ಯವನ್ನೇ ತೊರೆದು ಎಸ್ಕೇಪ್ ಆಗಿದ್ದ.

ಮುಂಬೈ ಪೋಲೀಸರು ಪಾತಕಿಯನ್ನು ಬಂಧನ ಮಾಡಲು ಕಾರ್ಯಾಚರಣೆ ಕೈಗೊಂಡಾಗ ಕರ್ನಾಟಕ ರಾಜ್ಯದ ಅತ್ತಿಬೆಲೆ ಪೋಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ಇರುವುದು ತಿಳಿಯುತ್ತದೆ‌. ಕೂಡಲೇ ತಡಮಾಡದ ಮುಂಬೈ ಪೋಲೀಸರು ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಹಾಗೂ ಅತ್ತಿಬೆಲೆ ಪೋಲೀಸ್ ಇನ್ಸ್‌ಪೆಕ್ಟರ್ ವಿಶ್ಬನಾಥ್ ರವರ ಮಾಹಿತಿ ರವಾನೆ ಮಾಡುತ್ತಿದ್ದಂತೆ ಪೋಲೀಸರ ತಂಡ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಟಿವಿಎಸ್ ರಸ್ತೆಯ ಸ್ಪಂದನ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿದ್ದಾರೆ‌. ಆಗ ಆರೋಪಿ ಇಲಿಯಾಸ್ ತನ್ನ ಬಳಿ ಇದ್ದ ಗನ್ ಹಾಗೂ ಮಾರಕಾಸ್ತ್ರಗಳಿಂದ ಪೋಲೀಸರಿಗೆ ಬೆದರಿಕೆ ಹಾಕಲು ಮುಂದಾಗುತ್ತಿದ್ದಂತೆ ಹೋಟೆಲ್ ಸುತ್ತಲೂ ಸುತ್ತುವರಿದ ಅತ್ತಿಬೆಲೆ ಪೋಲೀಸ್ ಇನ್ಸ್‌ಪೆಕ್ಟರ್ ವಿಶ್ವನಾಥ್ ನೇತೃತ್ವದ ಪೋಲೀಸರ ತಂಡ ಪಾತಕಿ ಇಲಿಯಾಸ್ ಅಬ್ದುಲ್ ಆಸಿಫ್ ನನ್ನು ಬಂಧಿಸಿ ಬಳಿಕ ಮುಂಬೈ ಪೋಲೀಸರಿಗೆ ಹಸ್ತಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next