ಆನೇಕಲ್: ಎರಡು ದಿನಗಳ ಹಿಂದೆ ಎರಡು ವರ್ಷ ಮಗುವೊಂದು ಮೃತಪಟ್ಟಿದ್ದ ಪ್ರಕರಣದಲ್ಲಿ ಸಂಬಂಧಿಕನೇ ಮಗುವಿನ ಮೇಲೆ ಅತ್ಯಾಚಾರ ಎಸಗಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿತ್ತು. ಸದ್ಯ ಅತ್ಯಾಚಾರಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೂರು ದಿನ ಹಿಂದೆ ಎರಡು ವರ್ಷದ ಮಗು ಒಂದು ಕಾರಿನಲ್ಲಿ ಚಲಿಸುವಾಗ ಬ್ರೇಕ್ ಹಾಕಿದ ಕೂಡಲೇ ತಲೆಗೆ ಗಾಯವಾಗಿ ಮಗು ಮೃತಪಟ್ಟಿತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದ ಪ್ರಕರಣ ಸದ್ಯ ಅತ್ಯಾಚಾರಿ ಬಂಧನದಿಂದ ಪ್ರಕರಣ ಬಯಲಿಗೆ ಬಂದಿದೆ.
ಮಗುವನ್ನು ತನ್ನ ದೊಡ್ಡಪ್ಪ ದೀಪು ಕಳೆದ ಹತ್ತು ದಿನದ ಹಿಂದೆ ಬೇರೊಂದು ಊರಿನಿಂದ ಕರೆದುಕೊಂಡು ಬಂದು ತಾನು ವಾಸಿಸುತ್ತಿದ್ದ ಊರಿಗೆ ಕರೆ ತಂದಿದ್ದ. ಕಳೆದ ಮಾ. 20ರಂದು ಆರೋಪಿ ತನ್ನ ಕಾರಿನಲ್ಲಿ ಸ್ನೇಹಿತನೊಂದಿಗೆ ಮನೆಯಿಂದ ಹೊರ ಬಂದು ಮಾರ್ಗಮಧ್ಯೆ ಜೊತೆಯಲ್ಲಿದ್ದ ಸ್ನೇಹಿತನನ್ನು ಮದ್ಯೆ ತರಲು ಕಳುಹಿಸಿ ಕಾರಿನಲ್ಲೇ ಅತ್ಯಾಚಾರ ಎಸಗಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಅತ್ಯಾಚಾರ ಎಸಗಿ ನಂತರ ತಾನೇ ಮಗುವನ್ನು ಅತ್ತಿಬೆಲೆ ಖಾಸಗಿ ಆಸ್ಪತ್ರೆ ಹಾಗೂ ಶ್ರೀ ಸಾಯಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಮುಂದಾಗಿ ನಂತರ ಮಗು ಮೃತಪಟ್ಟ ಬಳಿಕ ತಾನೇ ಅತ್ತಿಬೆಲೆ ಪೊಲೀಸ್ ಠಾಣೆಗೆ ಬಂದು ಮಗು ಕಾರಿನಲ್ಲಿ ತಲೆಗೆ ಗಾಯವಾಗಿ ಮೃತ ಪಟ್ಟಿದೆ ಎಂದು ಸುಳ್ಳು ಹೇಳಿದ್ದ.
ಪೊಲೀಸರಿಗೆ ಆರೋಪಿ ಮೇಲೆ ಆನುಮಾನ ಬಂದಿತ್ತಾದರೂ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಅಗಿರುವುದು ಖಚಿತವಾದ ಬಳಿಕ ಆರೋಪಿಯನ್ನು ಫೋಸ್ಕೊ ಕಾಯ್ದೆಯಡಿ ಬಂಧಿಸಿದ್ದಾರೆ.