Advertisement
ಪ್ರಥಮ ಸ್ಥಾನ ಪಡೆದ ಮಾಮೋಡಿ ಮಾಣಿ ಸಿದ್ದಲಿಂಗೇಶ್ವರ ಭಜನ ತಂಡಕ್ಕೆ ಮಣೂರು ಗೀತಾನಂದ ಫೌಂಡೇಶನ್ ಇದರ ಪ್ರವರ್ತಕ ಉದ್ಯಮಿ ಆನಂದ ಸಿ.ಕುಂದರ್ ಪ್ರಶಸ್ತಿ ಪ್ರದಾನ ಮಾಡಿದರು.
ಮೂಡ್ಲಕಟ್ಟೆ ತೃತೀಯ , ಶ್ರೀರಾಮ ಭಜನ ಮಂಡಳಿ ಮುದ್ದೂರು ನಾಲ್ಕೂರು ನಾಲ್ಕನೇ, ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಭಟ್ಕಳ ಐದನೇ ಸ್ಥಾನ ಹಾಗೂ ಶ್ರೀ ನಾಗಬ್ರಹ್ಮಲಿಂಗೇಶ್ವರ ಮಕ್ಕಳ ಕುಣಿತ ಭಜನ ಮಂಡಳಿ ಚಿತ್ತೇರಿ ಬೆನಗಲ್ ಆರನೇ ಸ್ಥಾನ ಗಳಿಸಿತು. ತೀರ್ಪುಗಾರರಾದ ಜಯಕರ ಪೂಜಾರಿ, ರವಿಶಂಕರ್ ಹೆಬ್ಬಾರ್, ನರೇಶ್ ಸಸಿಹಿತ್ಲು, ಕೃಷ್ಣ ಪೂಜಾರಿ, ಚಂದ್ರಶೇಖರ್ ಎರ್ಮಾಳ್,
ಶ್ರೇಯಾ ಖಾರ್ವಿ, ವೇಣುಗೋಪಾಲ್ ಭಟ್ ಕೋಟೇಶ್ವರ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸಮ್ಮಾನಿಸಲಾಯಿತು.
ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅಧ್ಯಕ್ಷತೆ ವಹಿಸಿದ್ದರು.
Related Articles
ವ್ಯವಸ್ಥಾಪಕ ನಟೇಶ್ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯಮಟ್ಟದ ಈ ಸ್ಫರ್ಧೆಯಲ್ಲಿ ಸುಮಾರು 48 ಭಜನ
ತಂಡಗಳು ಭಾಗವಹಿಸಿದೆ. ಸುಜಾತಾ ನಾಗೇಶ್ ಕುಂದರ್ ವಂದಿಸಿದರು.
Advertisement