Advertisement

ಆನೆಗುಡ್ಡೆ ಶ್ರೀ ವಿನಾಯಕ ದೇಗುಲ : ಒಂದು ಸಾವಿರ ಬಿಪಿಎಲ್‌ ಕಾರ್ಡ್‌ದಾರರಿಗೆ ಕಿಟ್‌ ವಿತರಣೆ

04:42 PM May 07, 2020 | sudhir |

ತೆಕ್ಕಟ್ಟೆ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ ಕುಂಭಾಸಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಒಂದು ಸಾವಿರಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ದಾರರಿಗೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ ಅವರು ಮೇ.5 ರಂದು ವಿತರಿಸಿದರು.

Advertisement

ಈ ಸಂದರ್ಭದಲ್ಲಿ ಕುಂಭಾಸಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶ್ರೀವಾಣಿ ಅಡಿಗ ಮಾತನಾಡಿದರು.ಕಾರ್ಯಕ್ರಮದಲ್ಲಿ ಪರ್ಯಾಯ ಅರ್ಚಕ ಚಂದ್ರಕಾಂತ್‌ ಉಪಾಧ್ಯಾಯ, ಕುಂಭಾಸಿ ಗ್ರಾ.ಪಂ. ಉಪಾಧ್ಯಕ್ಷ ಮಹಾಬಲೇಶ್ವರ ಆಚಾರ್‌, ಗ್ರಾ.ಪಂ. ಸದಸ್ಯರಾದ ಕುಂಭಾಸಿ ಕಮಲಾಕ್ಷ ಪೈ, ಲಕ್ಷ್ಮಣ ಕಾಂಚನ್‌, ಗುರುರಾಜ್‌, ಪಿಡಿಒ ಜಯರಾಮ್‌ ಶೆಟ್ಟಿ , ದೇವಳದ ಮೆನೇಜರ್‌ ನಟೇಶ್‌ ಕಾರಂತ್‌ ತೆಕ್ಕಟ್ಟೆ , ಹಾಗೂ ದೇವಳದ ಸಿಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ವಿಶ್ವನಾಥ ಐತಾಳ್‌ ಗುಂಡ್ಮಿ ಸ್ವಾಗತಿಸಿ, ಮಂಜುನಾಥ ಕುಂಭಾಸಿ, ಗಣೇಶ್‌, ಶೋಭಾ ಸಹಕರಿಸಿ, ವಂದಿಸಿದರು.

ಚಿತ್ರ/ ವರದಿ : ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next