Advertisement
2015 ರಿಂದಲೂ ಹವಾಮಾ ಮಾಸ್ಟರ್ ಪ್ಲಾನ್ ಪರಿಷ್ಕೃತ ಘೋಷಣೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ. ಇದುವರೆಗೂ ಸುಮಾರು 10ಕ್ಕೂ ಹೆಚ್ಚು ಭಾರಿ ಅಧಿಕಾರಿಗಳು ಸಭೆ ಸೇರಿದರೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಸ್ಥಳೀಯರಿಂದ(ಭಾಗೀದಾರರು) ಆಕ್ಷೇಪಣೆ ಆಹ್ವಾನಿಸಿದ ಸಂದರ್ಭದಲ್ಲಿ ಹವಾಮಾ ವ್ಯಾಪ್ತಿಯಿಂದ ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಕೈ ಬಿಡುವಂತೆ ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮಧ್ಯೆ ಡಿ.27 ರಂದು ಆನೆಗೊಂದಿ ಭಾಗದ ಹೊಟೇಲ್‌ಗಳಿಗೆ ಅನಧಿಕೃತ ಎಂದು ಸೀಲ್ ಹಾಕಿ ವ್ಯವಹಾರ ಬಂದ್ ಮಾಡಿಸಲಾಗಿದೆ.
Related Articles
Advertisement
ಕಮಲಾಪೂರದಲ್ಲಿ ಶೇ.50 ಕಮರ್ಷಿಯಲ್ ಜೋನ್: ಇತ್ತೀಚೆಗೆ ಹೊಸಪೇಟೆ ತಾಲೂಕಿನ ಕಮಲಾಪೂರವನ್ನು ಶೇ.100 ರಷ್ಟಿದ್ದ ಕಮರ್ಷಿಯಲ್ ಜೋನ್ ತೆಗೆದು ಶೇ.50 ಕ್ಕೆ ನಿಗದಿ ಮಾಡಲಾಗಿದೆ. ಗಣಿಗಾರಿಕೆ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು ಕಾರಿಗನೂರನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈ ಬಿಡಲಾಗಿದೆ. ಈಗಾಗಲೇ ವಿಶೇಷ ಪ್ರಕರಣ ಎಂದು ಹಂಪಿ ಭಾಗದಲ್ಲಿ 5ಕ್ಕೂ ಹೆಚ್ಚು ಕಾರ್ಪೋರೇಟ್ ಕಂಪನಿಯ ಐಶಾರಾಮಿ ರೆಸಾರ್ಟ್ ಹೊಟೇಲ್‌ಗಳಿಗೆ ಏಕಗವಾಕ್ಷ ಪದ್ಧತಿಯಂತೆ ಪ್ರವಾಸೋದ್ಯಮ ಇಲಾಖೆ ಪರವಾನಿಗೆ ನೀಡಿದೆ. ಆನೆಗೊಂದಿ ಭಾಗದ ಪೆರಿಪರಲ್ ಜೋನ್ ನಲ್ಲಿ ಹೊಟೇಲ್ ಆರಂಭಿಸಲು ಪ್ರಾಧಿಕಾರಕ್ಕೆ ಎನ್‌ಓಸಿ ಪಡೆಯಲು ಅರ್ಜಿ ಸಲ್ಲಿಸಿದರೂ ಅಲೆದಾಡಿಸಲಾಗುತ್ತಿದೆ. ಇದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊಸಪೇಟೆ ಭಾಗದ ಜನಪ್ರತಿನಿಧಿಗಳ ಕೈ ಮೇಲಾಗಿದ್ದು ಆನೆಗೊಂದಿ ಭಾಗದ ಜನರ ಗೋಳು ಕೇಳುವವರಿಲ್ಲ ಎನ್ನಲಾಗುತ್ತಿದೆ.
ಸ್ಥಳೀಯರ ಅಭಿಪ್ರಾಯವನ್ನು ಕೇಳದೇ ಅಂಜನಾದ್ರಿ ಪ್ರದೇಶದ ಅಭಿವೃದ್ಧಿ ಕುರಿತು ಸರಕಾರ ಬೆಂಗಳೂರು ಮಟ್ಟದಲ್ಲಿ ಸಭೆ ನಡೆಸುವುತ್ತಿರುವುದಕ್ಕೆ ಆನೆಗೊಂದಿ ಸ್ಥಳೀಯರು ಮತ್ತು ಚುನಾಯಿತರು ಆಕ್ಷೇಪವೆತ್ತಿದ್ದಾರೆ. ಈ ಹಿಂದೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಂದರ್ಭದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿಯಮಗಳನ್ನು ಹೇರಿದ್ದರಿಂದ ಆನೆಗೊಂದಿ ಭಾಗದ ಪ್ರವಾಸೋದ್ಯಮ ಇನ್ನೂ ಹಿಂದೆ ಬಿದ್ದಿದೆ. ಇದೀಗ ಅಂತರಾಷ್ಟಿçÃಯ ಮಟ್ಟದಲ್ಲಿ ಅಂಜನಾದ್ರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸರಕಾರ ಮುಂದಾಗಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕೆಲ ಅವೈಜ್ಞಾನಿಕ ನಿಯಮಗಳಿಂದ ತೊಂದರೆಗೊಳಗಾಗಿರುವ ಗ್ರಾಮಗಳಿಗೆ ನಿಯಮಗಳಲ್ಲಿ ವಿನಾಯಿತಿ ನೀಡಬೇಕು. ಆನೆಗೊಂದಿ ರಾಜವಂಶಸ್ಥರೂ ಸೇರಿ ಸ್ಥಳೀಯರ ಅಭಿಪ್ರಾಯ ಪಡೆದು ಸರ್ವಾಂಗೀಣ ಅಭಿವೃದ್ಧಿ ಮಾಡಬೇಕಿದೆ.
ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮಲತಾಯಿ ಧೋರಣೆ ನಿರಂತರವಾಗಿದ್ದು ಹಂಪಿ ಭಾಗದಲ್ಲಿ ಹೋಟೇಲ್ ವ್ಯವಹಾರಗಳು ನಡೆಯುತ್ತಿವೆ. ಕಾರ್ಪೋರೇಟ್ ಕಂಪನಿಗಳ ಕೆಲ ಖಾಸಗಿ ರೆಸಾರ್ಟ್ಗಳು ಹೊಟೇಲ್‌ಗಳು ಭರ್ಜರಿಯಾಗಿ ನಡೆಯುತ್ತಿದ್ದು ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ ಅವರಿಗೆ ಮೂಲಸೌಕರ್ಯಗಳಿಲ್ಲ. ಇಲ್ಲಿ ಹೊಟೇಲ್ ಉದ್ಯಮವನ್ನು ವ್ಯವಸ್ಥಿತವಾಗಿ ನೆಪ ಹೇಳಿಕೊಂಡು ಮುಚ್ಚಲಾಗಿದೆ. ಕೆಲ ಜನಪ್ರತಿನಿಧಿಗಳು ಆನೆಗೊಂದಿ ಭಾಗಕ್ಕೆ ಆಗಮಿಸಿ ಶೀಘ್ರವೇ ನೂತನ ಮಾಸ್ಟರ್ ಪ್ಲಾನ್ ಪ್ರಕಟಿಸಲಾಗುತ್ತದೆ ಎಂದು ಹೇಳಿ ಹಂಪಿ ಭಾಗದಲ್ಲಿ ರಾಜಾರೋಷವಾಗಿ ಹೊಟೇಲ್ ನಡೆಸಲು ಅವಕಾಶ ಕಲ್ಪಿಸಿರುವುದು ಮಲತಾಯಿಧೋರಣೆಯಾಗಿದೆ. ಸರಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಸಂಪೂರ್ಣವಾಗಿ ಕೈ ಬಿಡಬೇಕು.-ತಿಮ್ಮಪ್ಪ ಬಾಳೆಕಾಯಿ ಅಧ್ಯಕ್ಷರು ಗ್ರಾ.ಪಂ. ಆನೆಗೊಂದಿ. – ಕೆ.ನಿಂಗಜ್ಜ