Advertisement

ರಾಜವಂಶಸ್ಥರು-ಸ್ಥಳೀಯರ ಸಹಕಾರದಲ್ಲಿ ಆನೆಗೊಂದಿ ಉತ್ಸವ

01:36 PM Nov 24, 2019 | Team Udayavani |

ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಪರಂಪರೆಯಾಗಿರುವ ಆನೆಗೊಂದಿಯಲ್ಲಿ ಎರಡು ವೇದಿಕೆಯಲ್ಲಿ ಜನವರಿ 9 ಮತ್ತು 10ರಂದು ಆನೆಗೊಂದಿ ಉತ್ಸವ ಆಯೋಜನೆ ಮಾಡಲಾಗುತ್ತದೆ. ರಾಜವಂಶಸ್ಥರು ಹಾಗೂ ಸ್ಥಳೀಯ ಜನರ ಸಹಕಾರದಲ್ಲಿ ಸಿದ್ಧತಾ ಕಾರ್ಯ ಮಾಡಲಾಗುತ್ತದೆ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ಆನೆಗೊಂದಿಯಲ್ಲಿ ಉತ್ಸವ ಸಂಬಂಧಜಿಲ್ಲಾ ಧಿಕಾರಿ ಪಿ. ಸುನೀಲಕುಮಾರ ಅವರ ಜತೆ ವೇದಿಕೆ ಸ್ಥಳ ಪರಿಶೀಲಿಸಿ ಮಾತನಾಡಿದರು. ಉತ್ಸವಕ್ಕಾಗಿಆನೆಗೊಂದಿಯಲ್ಲಿ ಎರಡು ವೇದಿಕೆ ನಿರ್ಮಿಸಲಾಗುತ್ತದೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಸೇರಿ ಪ್ರಮುಖ ಸಚಿವರು ಆಗಮಿಸಲಿದ್ದಾರೆ. ಸ್ಥಳೀಯ ಹಾಗೂ ರಾಜ್ಯ, ರಾಷ್ಟ್ರಮಟ್ಟದ ಕಲಾವಿದರನ್ನು ಆಹ್ವಾನಿಸಲಾಗುತ್ತದೆ.

ಎರಡು ದಿನಗಳ ಕಾಲ ಉತ್ಸವ ವೀಕ್ಷಣೆಗೆ ಆಗಮಿಸುವವರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು. ಎಸ್‌ಪಿ ಜಿ. ಸಂಗೀತಾ, ಅಪರ ಜಿಲ್ಲಾಧಿ ಕಾರಿ ಆರ್‌.ಪಿ. ಮಾರುತಿ, ಸಹಾಯಕ ಆಯುಕ್ತೆ ಸಿ.ಡಿ. ಗೀತಾ, ಗ್ರಾಪಂ ಅಧ್ಯಕ್ಷೆ ಅಂಜನಾದೇವಿ, ತಹಶೀಲ್ದಾರ್‌ ಎಲ್‌.ಡಿ. ಚಂದ್ರಕಾಂತ, ಡಿವೈಎಸ್‌ಪಿ ಡಾ| ಚಂದ್ರಶೇಖರ, ಸಿಪಿಐ ಸುರೇಶ ತಳವಾರ, ಪಿಎಸ್‌ಐ ಜೆ. ದೊಡ್ಡಪ್ಪ, ಪಿಡಿಒ ಕೃಷ್ಣಪ್ಪ, ಬಸವರಾಜ ಗೌಡರ್‌ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next