Advertisement

ಕ್ವಾರಂಟೈನ್‌ ಬೇಗ ಕೊನೆಯಾಗಲಿ: ರಸೆಲ್‌

10:24 PM Jun 03, 2021 | Team Udayavani |

ಜಾರ್ಜ್‌ಟೌನ್‌: ಕೋವಿಡ್‌-19 ಪಿಡುಗಿನ ಕಾರಣ ಕ್ರಿಕೆಟ್‌ ಪ್ರವಾಸದ ವೇಳೆ ವ್ಯವಸ್ಥೆ ಮಾಡಲಾಗುವ ಬಯೋ ಬಬಲ್‌ ಹಾಗೂ ಕ್ವಾರಂಟೈನ್‌ ಎನ್ನುವುದು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ಹೇಳಿದ್ದಾರೆ.

Advertisement

“ಕೋವಿಡ್ ಸುರಕ್ಷಾ ವಲಯದಡಿ ಉಳಿದುಕೊಂಡು ಮಾನಸಿಕವಾಗಿ ಬಳಲಿದ್ದೇನೆ. ಕೊಠಡಿಯೊಳಗೆ ಏಕಾಂಗಿಯಾಗಿ ಉಳಿದ ವೇಳೆ ತಲೆಯೇ ಓಡುತ್ತಿರಲಿಲ್ಲ. ಕ್ವಾರಂ ಟೈನ್‌ ಎನ್ನುವುದು ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಲೇ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಶೀಘ್ರದಲ್ಲಿ ಕೋವಿಡ್ ಕೊನೆಗೊಂಡು ಕ್ವಾರಂಟೈನ್‌ ಎನ್ನುವ ನರಕ ದೂರವಾಗಲಿ’ ಎಂದು ರಸೆಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next