ಅಮರಾವತಿ(ಆಂಧ್ರಪ್ರದೇಶ):ಮಾರಣಾಂತಿಕ ಕೋವಿಡ್ 19 ವೈರಸ್ ಪರೀಕ್ಷೆಯಲ್ಲಿ ಆಂಧ್ರಪ್ರದೇಶ ವೈದ್ಯರು ದಾಖಲೆ ಬರೆದಿದ್ದು, ದಿನಂಪ್ರತಿ 5,508 ಮಂದಿ ಪರೀಕ್ಷೆಯ ನಡೆಸುವ ಮೂಲಕ ಅತೀ ಹೆಚ್ಚಿನ ಸಂಖ್ಯೆ ಪರೀಕ್ಷೆ ನಡೆಸಿದ ಹೆಗ್ಗಳಿಕಗೆ ಆಂಧ್ರಪ್ರದೇಶ ಪಾತ್ರವಾಗಿದೆ ಎಂದು ವರದಿ ತಿಳಿಸಿದೆ.
ಮುಖ್ಯಮಂತ್ರಿ ವೈಎಸ್ ಜಗಮೋಹನ್ ರೆಡ್ಡಿ ನೇತೃತ್ವದಲ್ಲಿ ಅಮರಾವತಿಯಲ್ಲಿ ನಡೆದ ಪುನರ್ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಕೋವಿಡ್ ವೈರಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡ ಪರೀಕ್ಷೆಯ ಸಾಧನೆಯ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿದ್ದರು.
ಕ್ಷಿಪ್ರ ಪರೀಕ್ಷಾ ಕಿಟ್ಸ್ (rapid test kits) ಅನ್ನು ಉಪಯೋಗಿಸದೇ ಸಾಮಾನ್ಯ ಪರೀಕ್ಷೆ ಮೂಲಕವೇ ವೈದ್ಯರುಗಳು ದಾಖಲೆಯ ಸಾಧನೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಈಗಾಗಲೇ 17,500 ಮಂದಿಯ ಪರೀಕ್ಷೆ ನಡೆಸಲಾಗಿದೆ. ಇದಕ್ಕೆ ಬೇಕಾದ ಅಗತ್ಯ ಅನುಕೂಲಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕರ್ನೂಲ್, ಗುಂಟೂರು, ಕೃಷ್ಣಾ ಮತ್ತು ನೆಲ್ಲೂರು ಜಿಲ್ಲೆಗಳು ಕೋವಿಡ್ 19 ವೈರಸ್ ಹೆಚ್ಚು ಹರಡಿರುವುದಾಗಿ ತಿಳಿಸಿದ್ದಾರೆ.
ಕೋವಿಡ್ 19 ವೈರಸ್ ಅನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಗಳು, ಪೊಲೀಸರು, ವೈದ್ಯರು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಿಎಂ ರೆಡ್ಡಿ ಅಧಿಕಾರಿಗಳು ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.