ಭುವನ್ ಸಿನಿಮಾಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ಹಾಗೂ ಎನ್. ಲೋಕೇಶ್ ನಿರ್ಮಿಸುತ್ತಿರುವ ಅಂದೊಂದಿತ್ತು ಕಾಲ ಚಿತ್ರಕ್ಕಾಗಿ ಇತ್ತೀಚೆಗೆ 17 ದಿವಸಗಳ ಕಾಲ ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯಿತು.
ರಘು ನೃತ್ಯ ನಿರ್ದೇಶನದಲ್ಲಿ 3 ಗೀತೆಗಳನ್ನು ಹಾಗೂ ಹಲವಾರು ಸನ್ನಿವೇಶಗಳನ್ನು ವಿನಯ್ ರಾಜ್‌ಕುಮಾರ್, ಅದಿತಿ ಪ್ರಭು, ಅಮೂಲ್ಯರ ಮೇಲೆ ತೀರ್ಥಹಳ್ಳಿಯ ಸುತ್ತಮುತ್ತ ಅಭಿಷೇಕ್ ಛಾಯಾಗ್ರಹಣದಲ್ಲಿ ನಿರ್ದೇಶಕ ಕೀರ್ತಿ ಚಿತ್ರಿಸಿಕೊಂಡರು. ಚಿತ್ರ ಫೆಬ್ರವರಿಯಲ್ಲಿ ತೆರೆಕಾಣಲಿದೆ.
ಚಿತ್ರಕ್ಕೆ ಅರಸು ಅಂತಾರೆ, ಸಂತೋಷ್ ಮುಂದಿನ ಮನೆ ಸಂಭಾಷಣೆ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಭಿಷೇಕ್ ಛಾಯಾಗ್ರಹಣ, ವಿ. ರಾಘವೇಂದ್ರ ಸಂಗೀತ, ಎ.ಆರ್. ಕೃಷ್ಣ ಸಂಕಲನ, ಆರ್.ಜೆ. ರಘು ನೃತ್ಯ ನಿರ್ದೇಶನವಿದೆ.
ಇದನ್ನೂ ಓದಿ:ನಟಿ Ashu Reddy ಗ್ಲಾಮರಸ್ ಲುಕ್ಸ್
ಚಿತ್ರವನ್ನು ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ನಿರ್ದೇಶಿಸಿದ್ದಾರೆ. ತಾರಾಗಣದಲ್ಲಿ ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾ ಮಿಲನ, ಅರುಣಾ ಬಾಲರಾಜ್ ಮೋಹನ್ ಜುನೇಜಾ, ಕಡ್ಡಿಪುಡಿ ಚಂದ್ರು, ಮಜಾ ಭಾರತ್ ಜಗ್ಗಪ್ಪ, ಧರ್ಮೆಂದ್ರ ಅರಸ್, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರು ನಟಿಸಿದ್ದಾರೆ.