ಆಂಧ್ರಪ್ರದೇಶ: ಆಂಧ್ರದ ಶ್ರೀಶೈಲ ದೇವಸ್ಥಾನದಲ್ಲಿ ಭಕ್ತರೊಬ್ಬರಿಗೆ ನೀಡಲಾದ ಪ್ರಸಾದದಲ್ಲಿ ಅಸ್ಥಿಯ ಚೂರುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೇವಳದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
ಈ ಘಟನೆಯ ಬಳಿಕ ದೇವಳದ ಅಡುಗೆಮನೆಯ ನೈರ್ಮಲ್ಯ ಮತ್ತು ನಿರ್ವಹಣೆಯ ಬಗ್ಗೆ ಕಳವಳವನ್ನು ಉಂಟು ಮಾಡಿದೆ.
ಹರೀಶ್ ರೆಡ್ಡಿ ಎಂದು ಗುರುತಿಸಲಾದ ಭಕ್ತ, ದರ್ಶನದ ನಂತರ ದೇವಳದಲ್ಲಿ ನೀಡಲಾದ ಪ್ರಸಾದವನ್ನು ಸೇವಿಸಿದ ನಂತರ ಅದರಲ್ಲಿ ಮೂಳೆಗಳನ್ನು ಪತ್ತೆ ಮಾಡಿದ್ದಾನೆ. ಕೂಡಲೇ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಸಾಕ್ಷ್ಯ ಸಮೇತ ಲಿಖಿತ ದೂರು ನೀಡಿದ್ದರು.
ಭಕ್ತರ ದೂರನ್ನು ಸ್ವೀಕರಿಸಿದ ಆಡಳಿತ ಮಂಡಳಿ ಘಟನೆ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ: Gol Gumbaz: ಪ್ರೀತಿ ಮಧುರ, ತ್ಯಾಗ ಅಮರ! ಗೋಲಗುಂಬಜ್‌ನಲ್ಲೊಂದು ಪ್ರೇಮದ ಕಥೆ