Advertisement

Andhra Train Mishap: ಮೃತರ ಸಂಖ್ಯೆ 13ಕ್ಕೆ ಏರಿಕೆ, ಮುಂದುವರೆದ ರಕ್ಷಣಾ ಕಾರ್ಯಾಚರಣೆ

08:59 AM Oct 30, 2023 | sudhir |

ವಿಶಾಖಪಟ್ಟಣಂ: ಭಾನುವಾರ ಸಂಜೆ ಆಂಧ್ರಪ್ರದೇಶದ ವಿಜಯನಗರಂ ದಲ್ಲಿ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 13 ಕ್ಕೆ ಏರಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಸೋಮವಾರ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

Advertisement

ಇದಲ್ಲದೆ ಅಪಘಾತ ಸಂಭವಿಸಿದ ವೇಳೆ ಬೋಗಿಗಳು ಹಳಿತಪ್ಪಿದ ಪರಿಣಾಮ 50 ಜನರು ಗಾಯಗೊಂಡಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಇಂದು ಕೂಡಾ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಟ್ವಿಟರ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲು ಸಂಖ್ಯೆ 08532 ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲಿನ ಮುಂಭಾಗದಿಂದ 11 ಕೋಚ್‌ಗಳು ವಿಜಯನಗರದ ಮುಂದಿನ ನಿಲ್ದಾಣವಾದ ಅಲಮಂಡಲಕ್ಕೆ ಕೊಂಡೊಯ್ಯಲಾಗಿದೆ, ಸದ್ಯ ಘಟನೆ ನಡೆದ ಸ್ಥಳದಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಬೋಗಿಗಳನ್ನು ತೆರವುಗೊಲಿಸುವ ಕಾರ್ಯ ಬರದಿಂದ ಸಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಸ್ಥಳಾಂತರಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಆಂಧ್ರಪ್ರದೇಶದ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಪ್ರಧಾನಿ ಘಟನೆಯ ಕುರಿತು ಮಾತನಾಡಿದ್ದಾರೆ, ರಾಜ್ಯ ಸರ್ಕಾರ ಮತ್ತು ರೈಲ್ವೆ ತಂಡಗಳು ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ,” ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ.

Advertisement

ಭಾನುವಾರ ಸಂಜೆ ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲು ಮತ್ತು ವಿಶಾಖಪಟ್ಟಣಂ-ರಗಡ ಪ್ಯಾಸೆಂಜರ್ ರೈಲಿಗೆ ಹಿಂಬದಿಯಲ್ಲಿ ಢಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಅವಘಡಕ್ಕೆ ಸಿಗ್ನಲ್ ಸಮಸ್ಯೆಯೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು ಹೆಚ್ಚಿನ ವಿವರ ತನಿಖೆ ಬಳಿಕ ಗೊತ್ತಾಗಲಿದೆ.
ಸದ್ಯ ಗಾಯಗೊಂಡ ಪ್ರಯಾಣಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Onion Price Hike: ಗ್ರಾಹಕರಿಗೆ ಬರೆ; ಗುಣಮಟ್ಟದ ಕೆ.ಜಿ. ಈರುಳ್ಳಿಗೆ 80 ರೂಪಾಯಿ

Advertisement

Udayavani is now on Telegram. Click here to join our channel and stay updated with the latest news.

Next