ಅಮರಾವತಿ : ಆಂಧ್ರ ಪ್ರದೇಶ ಮುಖ್ಯ ಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಗುರುವಾರ ರಾತ್ರಿ ನಿರೀಕ್ಷೆಯಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಆರ್ ಪಿ ಠಾಕೂರ್ ಅವರನ್ನು ವರ್ಗಾಯಿಸಿದ್ದಾರೆ.
ಇದೇ ರೀತಿ ಭ್ರಷ್ಟಾಚಾರ ನಿಗ್ರಹ ವಿಭಾಗದ DG ಎಬಿ ವೆಂಕಟೇಶ್ವರ್ ರಾವ್ (1989ರ ಬ್ಯಾಚ್) ಅವರನ್ನು ಹುದ್ದೆಯಿಂದ ಕಿತ್ತು ಹಾಕಿದ್ದು ಸಾಮಾನ್ಯ ಆಡಳಿತೆ ಇಲಾಖೆಗೆ ವರದಿ ಮಾಡುವಂತೆ ಆದೇಶಿಸಿದ್ದಾರೆ.
ಠಾಕೂರ್ ಮತ್ತು ರಾವ್ ಅವರು ವೈಎಸ್‌ಆರ್ ಕಾಂಗ್ರೆಸ್ ಹಿಟ್ ಲಿಸ್ಟ್ ನಲ್ಲಿ ಕೆಲ ಕಾಲದಿಂದ ಇದ್ದರು. ಇವರಿಬ್ಬರೂ ಟಿಡಿಪಿ ಸರಕಾರಕ್ಕೆ ಅತ್ಯಂತ ನಿಕಟರಿದ್ದುದು ಕೂಡ ಇದಕ್ಕೆ ಕಾರಣವಾಗಿತ್ತು.
ವೈಎಸ್‌ಆರ್‌ಸಿ ವಿರೋಧ ಪಕ್ಷದಲ್ಲಿದ್ದಾಗ ಈ ಇಬ್ಬರು ವಿವಾದಿತ ಐಪಿಎಸ್ ಅಧಿಕಾರಿಗಳ ವಿರುದ್ಧ ಇಸಿಐ ಮತ್ತು ಇತರ ಇಲಾಖೆಗಳಲ್ಲಿ ಅನೇಕ ದೂರುಗಳನ್ನು ದಾಖಲಿಸಿತ್ತು.