Advertisement

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

11:30 PM Apr 23, 2024 | Team Udayavani |

ಅಮರಾವತಿ: ಈ ಬಾರಿಯ ಲೋಕಸಭಾ ಚುನಾವಣೆಗೆ ಈವರೆಗೆ ನಾಮಪತ್ರ ಸಲ್ಲಿಸಿರುವವರ ಪೈಕಿ ಆಂಧ್ರ ಪ್ರದೇಶದ ಗುಂಟೂರು ಲೋಕ ಸಭಾ ಕ್ಷೇತ್ರದ ಟಿಡಿಪಿ ಅಭ್ಯರ್ಥಿ ಡಾ| ಪೆಮ್ಮಸಾನಿ ಚಂದ್ರಶೇಖರ್‌ ಅತ್ಯಂತ ಶ್ರೀಮಂತರು. ಅನಿವಾಸಿ ಭಾರತೀಯ ರಾಗಿದ್ದ (ಎನ್‌ಆರ್‌ಐ) ಇವರ ಒಟ್ಟು ಆಸ್ತಿ ಮೌಲ್ಯ 5,785 ಕೋಟಿ ರೂ.!

Advertisement

ಹಲವಾರು ಉದ್ಯಮಗಳಲ್ಲಿ ತೊಡಗಿಸಿ ಕೊಂಡಿ ರುವ ಚಂದ್ರಶೇಖರ್‌ 2,316 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದು, ಅವರ ಪತ್ನಿ ಕೊನೇರು ಶ್ರೀರತ್ನ ಅವರ ಹೆಸರಿನಲ್ಲಿ 2,289 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಜತೆಗೆ 72 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಚಂದ್ರಶೇಖರ್‌ ಹೊಂದಿದ್ದು, ಅವರ ಪತ್ನಿ ಬಳಿ 34 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇದಲ್ಲದೆ ವಿಶ್ವಾದ್ಯಂತ 101 ಕಂಪೆನಿಗಳಲ್ಲಿ ಈ ದಂಪತಿ ಜಂಟಿ ಷೇರುಗಳನ್ನು ಹೊಂದಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೊಂಡ
ವಿಶ್ವೇಶ್ವರ ರೆಡ್ಡಿ 2ನೇ ಶ್ರೀಮಂತ
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ 2ನೇ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಕೊಂಡ ವಿಶ್ವೇಶ್ವರ ರೆಡ್ಡಿ ಗುರುತಿಸಿಕೊಂಡಿದ್ದಾರೆ. ತೆಲಂಗಾಣದ ಚೆವೆಲ್ಲಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಇವರು ಮಾಜಿ ಸಂಸದರೂ ಆಗಿದ್ದು, ಅಫಿದವಿತ್‌ನಲ್ಲಿ ತಮ್ಮ ಕುಟುಂಬದ ಒಟ್ಟು ಆಸ್ತಿ ಮೌಲ್ಯವನ್ನು 4,568 ಕೋಟಿ ರೂ.ಗಳೆಂದು ಘೋಷಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next