ವಿಶಾಖಪಟ್ಟಣ: ಅಧಿಕಾರಿಗಳಿಂದ ನಿಧಾನಗತಿಯ ಕೆಲಸವನ್ನು ಖಂಡಿಸಿ, ಆಡಳಿತ ಪಕ್ಷದ ಶಾಸಕರೇ ಚರಂಡಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರದ ನೆಲ್ಲೂರು ಗ್ರಾಮಾಂತರ ಕ್ಷೇತ್ರದ ಶಾಸಕ ಕೋಟಂರೆಡ್ಡಿ ಶ್ರೀಧರ್‌ರೆಡ್ಡಿ ಈ ರೀತಿ ಪ್ರತಿಭಟನೆ ಮಾಡಿದವರು. ಅವರ ಕ್ಷೇತ್ರದಲ್ಲಿ 2018ರಿಂದಲೂ ರೈಲ್ವೆ ಇಲಾಖೆ ಮತ್ತು ಸ್ಥಳೀಯ ಆಡಳಿತ ಬ್ರಿಡ್ಜ್ ಒಂದರ ನಿರ್ಮಾಣದಲ್ಲಿ ತೊಡಗಿದೆ.
ಆದರೆ ಕಾಮಗಾರಿ ನಿಧಾನವಾಗಿರುವುದರಿಂದಾಗಿ 2018ರಲ್ಲಿ ವಿರೋಧ ಪಕ್ಷದಲ್ಲಿದ್ದಾಗಲೂ ಕೋಟಂರೆಡ್ಡಿ ಪ್ರತಿಭಟಿಸಿದ್ದರು.
ಇದೀಗ ತಮ್ಮದೇ ಸರ್ಕಾರವಿದ್ದರೂ ಕೆಲಸ ನಿಧಾನವಾಗುತ್ತಿದ್ದು, ಇದಕ್ಕೆ ಕಾರಣವಾದ ಸ್ಥಳೀಯ ಆಡಳಿತ ಮತ್ತು ರೈಲ್ವೆ ಇಲಾಖೆ ವಿರುದ್ಧ ಅವರು ಪ್ರತಿಭಟಿಸಿದ್ದಾರೆ.
ನಗರ ಪರಿಶೀಲನೆಗೆ ಬಂದಾಗ ಚರಂಡಿ ನೀರಿಗಿಳಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.