Advertisement

21 ದಿನದಲ್ಲಿ ಶಿಕ್ಷೆ: ಆಂಧ್ರಪ್ರದೇಶದಲ್ಲಿ ಪ್ರಥಮ ಸುಸಜ್ಜಿತ “ದಿಶಾ ಪೊಲೀಸ್ ಠಾಣೆ” ನಿರ್ಮಾಣ

09:24 AM Feb 06, 2020 | Nagendra Trasi |

ಹೈದರಾಬಾದ್: ಆಂಧ್ರಪ್ರದೇಶ ಸರ್ಕಾರ “ದಿಶಾ ಕಾಯ್ದೆ” ಜಾರಿಗೆ ತಂದ ಬೆನ್ನಲ್ಲೇ ರಾಜ್ಯದ ರಾಜಮಹೇಂದ್ರವರಂ(ರಾಜಮಂಡ್ರಿ)ನಲ್ಲಿ ಮೊದಲ ದಿಶಾ ಪೊಲೀಸ್ ಠಾಣೆ ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದು ವರದಿ ತಿಳಿಸಿದೆ.

Advertisement

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ(ರಾಮಮಹೇಂದ್ರವರಂ)ಯಲ್ಲಿ ಮೊದಲ ದಿಶಾ ಪೊಲೀಸ್ ಠಾಣೆಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಫೆ.7ರಂದು ಉದ್ಘಾಟಿಸಲಿದ್ದಾರೆ.

ಮಹಿಳೆಯರ ಮೇಲಿನ ಅತ್ಯಾಚಾರ, ಆ್ಯಸಿಡ್ ದಾಳಿ ಸೇರಿದಂತೆ ಫೋಸ್ಕೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ನಡೆಸಿ 21 ದಿನಗಳಲ್ಲಿಯೇ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಜಗನ್ ನೇತೃತ್ವದ ಆಂಧ್ರಪ್ರದೇಶ ಸರ್ಕಾರ ದಿಶಾ ಕಾಯ್ದೆಯನ್ನು ಜಾರಿಗೆ ತಂದಿತ್ತು.

ಮೊದಲ ಹಂತದಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ ಸುಮಾರು 18 ದಿಶಾ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುವುದು ಎಂದು ಆಂಧ್ರ ಸರ್ಕಾರ ತಿಳಿಸಿದೆ. ರಾಜಮಹೇಂದ್ರವರಂನಲ್ಲಿ ಸುಮಾರು 4000 ಚದರ ಅಡಿಯ ದಿಶಾ ಪೊಲೀಸ್ ಠಾಣೆ ನಿರ್ಮಾಣಗೊಂಡಿದೆ. ಇದು ಎರಡು ಮಹಡಿ ಹೊಂದಿದೆ. ಪೊಲೀಸ್ ಠಾಣೆಯಲ್ಲಿ ದೊಡ್ಡದಾದ ಹಾಲ್, ಕೌನ್ಸೆಲಿಂಗ್ ಹಾಲ್, ಫೀಡಿಂಗ್ ಹಾಲ್ ಅನ್ನು ಒಳಗೊಂಡಿದೆ. ದಿಶಾ ಪೊಲೀಸ್ ಠಾಣೆಗೆ ಇಬ್ಬರು ಡಿಎಸ್ಪಿಗಳನ್ನು ಮೇಲ್ವಿಚಾರಣೆ ನಡೆಸಲು ನೇಮಕ ಮಾಡುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next