Advertisement

ಹೊಸ ವರ್ಷದ ಮೊದಲ ದಿನ ಅಸ್ತಿತ್ವಕ್ಕೆ ಬಂದ ಆಂಧ್ರ ಪ್ರದೇಶ ಹೈಕೋರ್ಟ್‌

10:40 AM Jan 01, 2019 | udayavani editorial |

ಅಮರಾವತಿ, ಆಂಧ್ರ ಪ್ರದೇಶ : ರಾಜ್ಯ ವಿಭಜನೆಗೊಂಡು ತೆಲಂಗಾಣ ಸೃಷ್ಟಿಯಾದ ನಾಲ್ಕು ವರ್ಷಗಳ ಬಳಿಕ, 2019ರ ಹೊಸ ವರ್ಷದ ದಿನವಾದ ಇಂದು ಮಂಗಳವಾರ, ಆಂಧ್ರ ಪ್ರದೇಶ ಹೈಕೋರ್ಟ್‌ ಅಸ್ತಿತ್ವಕ್ಕೆ ಬಂದಿತು.

Advertisement

ಪ್ರಭಾರ ಮುಖ್ಯ ನ್ಯಾಯಾಧೀಶ ಸಿ ಪ್ರವೀಣ್‌ ಕುಮಾರ್‌ ಮತ್ತು ಇತರ 13 ನ್ಯಾಯಾಧೀಶರಿಗೆ ರಾಜ್ಯಪಾಲ ಇ ಎಸ್‌ ಎಲ್‌ ನರಸಿಂಹನ್‌ ಅವರು  ವಿಜಯವಾಡಕ್ಕೆ ಸಮೀಪ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಬೋಧಿಸಿದರು. 

ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರು ಕಳೆದ ವಾರವಷ್ಟೇ ಆಂಧ್ರ ಪ್ರದೇಶಕ್ಕೆ ಪ್ರತ್ಯೇಕ ಉಚ್ಚ ನ್ಯಾಯಾಲಯವನ್ನು ಆದೇಶಿಸಿದ್ದರು. 

ಈ ವರೆಗೂ ಹೈದರಾಬಾದ್‌ ನಲ್ಲಿನ ಹೈಕೋರ್ಟ್‌, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಒಂದೇ ಉಚ್ಚ ನ್ಯಾಯಾಲಯವಾಗಿ ಕಾರ್ಯನಿರ್ವಹಿಸುತ್ತಿತ್ತು. 

ಇಂದು ಪ್ರಮಾಣ ವಚನ ಸ್ವೀಕರಿಸಿದ 13 ನ್ಯಾಯಾಧೀಶರೆಂದರೆ : ಎಸ್‌ ವಿ ಭಟ್‌, ಎ ವಿ ಶೇಷ ಸಾಯಿ, ಎಂ ಸೀತಾರಾಮ ಮೂರ್ತಿ,  ಯು ದುರ್ಗಾ ಪ್ರಸಾದ್‌ ರಾವ್‌, ಟಿ ಸುನೀಲ್‌ ಚೌಧರಿ,  ಎಂ ಸತ್ಯನಾರಾಯಣ ಮೂರ್ತಿ, ಜಿ ಶ್ಯಾಮ ಪ್ರಸಾದ್‌, ಜೆ ಉಮಾ ದೇವಿ, ಎನ್‌ ಬಾಲಯೋಗಿ, ಟಿ ರಜನಿ, ಡಿ ವಿ ಎಸ್‌ ಎಸ್‌ ಸೋಮಯಾಜುಲು, ಕೆ ವಿಜಯ ಲಕ್ಷ್ಮೀ  ಮತ್ತು ಎಂ ಗಂಗಾ ರಾವ್‌.

Advertisement

ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ಇದೊಂದು ಐತಿಹಾಸಿಕ  ದಿನ ಎಂದು ಹೇಳಿದರು.

ಆಂಧ್ರ ಪ್ರದೇಶ ಹೈಕೋರ್ಟಿಗೆಂದು ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಕಟ್ಟಡವು ಈಗಿನ್ನೂ ಸಿದ್ಧವಾಗಿಲ್ಲದಿರುವುದರಿಂದ ರಾಜ್ಯ ಸರಕಾರ, ವಿಜಯವಾಡದಲ್ಲಿನ ಮುಖ್ಯಮಂತ್ರಿಗಳ ಕ್ಯಾಂಪ್‌ ಕಾರ್ಯಾಲಯವನ್ನು ತಾತ್ಕಾಲಿಕ ಹೈಕೋರ್ಟ್‌ ಆಗಿ ಪರಿವರ್ತಿಸಿದೆ. 

ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಜಸ್ಟಿಸ್‌ ಎನ್‌ ವಿ ರಮಣ ಅವರು ಮುಖ್ಯಮಂತ್ರಿ ನಾಯ್ಡು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ತಾತ್ಕಾಲಿಕ ಹೈಕೋರ್ಟ್‌ ಆವರಣವನ್ನು ಉದ್ಘಾಟಿಸಿದರು. 

ತಾತ್ಕಾಲಿಕ ಹೈಕೋರ್ಟ್‌ ಕಟ್ಟಡ ಜನವರಿ ಅಂತ್ಯದೊಳಗೆ ಸಿದ್ಧವಾಗುವ ನಿರೀಕ್ಷೆ ಇದೆ. ಆದರೆ ನಿಜವಾದ ಹೈಕೋರ್ಟ್‌ ಸಂಕೀರ್ಣ ಮೂರು ವರ್ಷಗಳ ಒಳಗೆ ನಿರ್ಮಾಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next