Advertisement

Andhra Pradesh; 2 ಮಕ್ಕಳಿದ್ದವರಿಗೆ ಮಾತ್ರ ಚುನಾವಣ ಟಿಕೆಟ್‌!

11:29 PM Oct 20, 2024 | Team Udayavani |

ಅಮರಾವತಿ: ದಕ್ಷಿಣ ಭಾರತದ ರಾಜ್ಯ ಗಳಲ್ಲಿ ಯುವಜನರ ಪ್ರಮಾಣ ಕುಸಿಯು ತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೇಶದ ಹಿತಕ್ಕಾಗಿ ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ 2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸ್ಥಳೀಯ ಸಂಸ್ಥೆ ಚುನಾ ವಣೆಗಳಲ್ಲಿ ಸ್ಪರ್ಧೆ ಅವಕಾಶ ಒದಗಿಸುವ ಕಾನೂನು ಜಾರಿ ಮಾಡಲಾಗುತ್ತದೆ ಎಂದಿದ್ದಾರೆ.

Advertisement

2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಈಗ ಇದೆ. ಈ ಕಾನೂನನ್ನು ರದ್ದು ಮಾಡಲಾಗುತ್ತದೆ. ಚುನಾ ವಣೆಗಳಲ್ಲಿ ಸ್ಪರ್ಧಿಸಲು 2ಕ್ಕಿಂತ ಹೆಚ್ಚು ಮಕ್ಕಳು ಕಡ್ಡಾಯ ಎಂಬ ನಿಯಮ ತರಲಾಗುತ್ತದೆ. ಅಲ್ಲದೆ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಹೆಚ್ಚಿನ ಅನುದಾನ ಮತ್ತು ಪ್ರೋತ್ಸಾಹವನ್ನು ನೀಡ ಲಾಗುತ್ತದೆ ಎಂದು ಅಮರಾವತಿಯಲ್ಲಿ ಅಭಿ ವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ತಿಳಿಸಿದರು.

ಹಲವು ಗ್ರಾಮಗಳಲ್ಲಿ ಯುವಜನರೇ ಇಲ್ಲ
ಆಂಧ್ರಪ್ರದೇಶ ಸಹಿತ ದಕ್ಷಿಣ ಭಾರತದ ಹಲವು ರಾಜ್ಯಗಳ ಗ್ರಾಮಗಳಲ್ಲಿ ಯುವ ಜನರೇ ಇಲ್ಲ. ಕೇವಲ ವಯಸ್ಸಾದವರು ಮಾತ್ರ ಉಳಿದುಕೊಂಡಿದ್ದಾರೆ. ಯುವಕರು ವಿದೇಶಗಳಿಗೆ ವಲಸೆ ಹೋಗುತ್ತಿರು ವುದ ರಿಂದ ಈ ಸಮಸ್ಯೆ ಉಂಟಾಗುತ್ತಿದೆ ಎಂದರು.

ಫ‌ಲವತ್ತತೆ ಪ್ರಮಾಣ 1.6ಕ್ಕೆ ಕುಸಿತ
ಆಂಧ್ರಪ್ರದೇಶದಲ್ಲಿ ಫ‌ಲವತ್ತತೆಯ ಪ್ರಮಾಣ 1.6ಕ್ಕೆ ಕುಸಿದಿದೆ. ದೇಶದಲ್ಲಿ ಇದರ ಸರಾಸರಿ 2.1 ಇದೆ. ಚೀನ, ಜಪಾನ್‌ ರಾಷ್ಟ್ರಗಳನ್ನು ಕಾಡುತ್ತಿದ್ದ ಸಮಸ್ಯೆ ಈಗ ದಕ್ಷಿಣ ಭಾರತವನ್ನು ಕಾಡುತ್ತಿದೆ. ಹೀಗಾಗಿ ಜನಸಂಖ್ಯೆಯನ್ನು ಹೆಚ್ಚು ಮಾಡಲು ನಾವು ಪಯತ್ನ ಮಾಡಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next