Advertisement

ರಕ್ಷಣಾ ಕಾರ್ಯದ ವೇಳೆ ಇಬ್ಬರ ಜೀವ ಉಳಿಸಿ ನೀರು ಪಾಲಾದ ಕಾನ್ಸ್ಟೇಬಲ್

04:56 PM Nov 21, 2021 | Team Udayavani |

ನೆಲ್ಲೂರು: ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್)  ಕಾನ್ಸ್ಟೇಬಲ್ ಒಬ್ಬರು ರಕ್ಷಣಾ ಕಾರ್ಯಾಚರಣೆ ವೇಳೆ ಲೈಫ್ ಜಾಕೆಟ್ ಬೇರ್ಪಟ್ಟ ನಂತರ ಜಲಸಮಾಧಿಯಾದ ದಾರುಣ ಘಟನೆ ನಡೆದಿದ್ದು, ತಾನು ಜಲ ಸಮಾಧಿಯಾಗುವ ಮುನ್ನ ಇಬ್ಬರ ಪ್ರಾಣ ಕಾಪಾಡಿ ಸಾರ್ಥಕತೆ ಮೆರೆದಿದ್ದಾರೆ.

Advertisement

ಬುಚ್ಚಿರೆಡ್ಡಿಪಾಲೆಂ ಮಂಡಲದ ದಾಮರಮಡುಗು ಗ್ರಾಮದಲ್ಲಿ ದುರಂತ ಶನಿವಾರ ನಡೆದಿದೆ.

ನೀರು ಪಾಲಾದ ದುರ್ದೈವಿ ಎಸ್‌ಡಿಆರ್‌ಎಫ್ ಪೇದೆ ಕೆಲ್ಲ ಶ್ರೀನಿವಾಸ ರಾವ್ (30) ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ಶನಿವಾರ ಬೆಳಿಗ್ಗೆ 7.30 ರ ಸುಮಾರಿಗೆ, ದಾಮರಮಡುಗುನಲ್ಲಿ ಪ್ರವಾಹದಲ್ಲಿ ಸಿಲುಕಿರುವ ಇಬ್ಬರನ್ನು ರಕ್ಷಿಸಲು ನಿಯೋಜಿಸಲಾದ ಎಸ್‌ಡಿಆರ್‌ಎಫ್ ರಕ್ಷಣಾ ತಂಡಕ್ಕೆ ಕರೆ ಬಂದಿದ್ದು, ಕೆಲ್ಲ ಶ್ರೀನಿವಾಸ ರಾವ್ ಅವರನ್ನೊಳಗೊಂಡ ತಂಡವು ದೋಣಿಯಲ್ಲಿ ಗ್ರಾಮಕ್ಕೆ ಧಾವಿಸಿ ವಿದ್ಯುತ್ ಕಂಬದ ಮೇಲೆ ಕುಳಿತಿದ್ದ ತಂದೆ ಮತ್ತು ಮಗನನ್ನು ರಕ್ಷಣಾ ಬೋಟ್‌ಗೆ ಕರೆತಂದಿದ್ದಾರೆ ಈ ವೇಳೆ , ರಾವ್ ಅವರು ದೋಣಿಗೆ ಇಳಿಯುತ್ತಿದ್ದಂತೆ ಅವರ ಲೈಫ್ ಜಾಕೆಟ್ ಕಳಚಿ ಬಿದ್ದಿದ್ದು, ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರ ತಂಡದ ಇತರರಿಗೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ.

ಶ್ರೀಕಾಕುಳಂ ಜಿಲ್ಲೆಯ ರೇಗಿಡಿ ಅಮದಾಲವಲಸ ಮಂಡಲದ ಕಂಡಿಸಾ ಗ್ರಾಮದಲ್ಲಿ ಜನಿಸಿದ ಕೆಲ್ಲ ಶ್ರೀನಿವಾಸ ರಾವ್ ಅವರು ಪತ್ನಿ ಸುನೀತಾ ಮತ್ತು ಅವರ 18 ತಿಂಗಳ ಮಗ ಮೋಕ್ಷಜ್ಞ ಅವರನ್ನು ಅಗಲಿದ್ದಾರೆ.

Advertisement

ಆಂಧ್ರಪ್ರದೇಶ ಪೊಲೀಸರು ಸಹೋದ್ಯೋಗಿಯನ್ನು ಪ್ರವಾಹಕ್ಕೆ ಕಳೆದುಕೊಂಡಿರುವ ದುಃಖವನ್ನು ವ್ಯಕ್ತಪಡಿಸಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಆಂಧ್ರ ಪೊಲೀಸ್ ಇಲಾಖೆ ಯಾವಾಗಲೂ ಕುಟುಂಬವನ್ನು ಬೆಂಬಲಕ್ಕಿದೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಕರ್ತವ್ಯಗಳನ್ನು ನಿರ್ವಹಿಸುವಾಗ ಅವರ ಅತ್ಯುನ್ನತ ತ್ಯಾಗವನ್ನು ಸ್ಮರಿಸುತ್ತದೆ ಎಂದು ಟ್ವೀಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next