Advertisement

ಸೈನೆಡ್ ಲೇಪಿತ ಪ್ರಸಾದ ನೀಡಿ 2 ವರ್ಷದಲ್ಲೇ ಹತ್ತು ಮಂದಿ ಕೊಲೆಗೈದ ವಾಚ್ ಮೆನ್!

09:24 AM Nov 06, 2019 | Nagendra Trasi |

ಹೈದರಾಬಾದ್: ವಾಚ್ ಮೆನ್ ಕಳೆದ ಎರಡು ವರ್ಷಗಳಲ್ಲಿ ಸೈನೆಡ್ ಲೇಪಿತ ಪ್ರಸಾದವನ್ನು ಬಳಸಿ ಸುಮಾರು ಹತ್ತು ಮಂದಿಯನ್ನು ಹತ್ಯೆಗೈದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಕಳೆದ ಅಕ್ಟೋಬರ್ ತಿಂಗಳಲ್ಲಿ ಪಶ್ಚಿಮ ಗೋದಾವರಿ ಜಿಲ್ಲೆಯ ಶಂಕಿತ ಸಂತ್ರಸ್ತನೊಬ್ಬ ಸಾವನ್ನಪ್ಪಿದ್ದ. ಈ ವ್ಯಕ್ತಿ ಬ್ಯಾಂಕ್ ನಲ್ಲಿ ಹಣ ಮತ್ತು ನಗದನ್ನು ಠೇವಣಿ ಇಡಲು ಮನೆಯಿಂದ ಹೋಗಿದ್ದರು. ಆದರೆ ಕೆಲವು ಗಂಟೆಗಳಲ್ಲಿ ಆತನ ಶವ ಪತ್ತೆಯಾಗಿತ್ತು. ಆದರೆ ಹಣ ಮತ್ತು ಚಿನ್ನ ಕೂಡಾ ಸಿಕ್ಕಿರಲಿಲ್ಲವಾಗಿತ್ತು.

ಪೊಲೀಸರು ಪ್ರಾಥಮಿಕವಾಗಿ ಈ ವ್ಯಕ್ತಿ ಒಂದು ಹೃದಯಾಘಾತದಿಂದ ಅಥವಾ ಮೆದುಳು ಆಘಾತದಿಂದ(ಬ್ರೈನ್ ಸ್ಟ್ರೋಕ್) ಸಾವನ್ನಪ್ಪಿರಬೇಕೆಂದು ಶಂಕಿಸಿದ್ದರು. ಯಾಕೆಂದರೆ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಇರಲಿಲ್ಲವಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸೈನೆಡ್ ನಿಂದ ಸಾವನ್ನಪ್ಪಿರುವುದಾಗಿ ತಿಳಿದು ಬಂದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ನವ್ ದೀಪ್ ಸಿಂಗ್ ತಿಳಿಸಿದ್ದಾರೆ.

ಮೊಬೈಲ್ ಕರೆಗಳ ದಾಖಲೆ ಪರಿಶೀಲಿಸಿದಾಗ ಅದರಲ್ಲಿ ಸಾವನ್ನಪ್ಪಿದ್ದ ವ್ಯಕ್ತಿ ವಿ.ಸಿಂಹಾದ್ರಿ ಎಂಬ ವ್ಯಕ್ತಿ ಜತೆ ಕೊನೆಯದಾಗಿ ಸಂಪರ್ಕ ಸಾಧಿಸಿರುವುದು ಪತ್ತೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿ ಹೋದ ಪೊಲೀಸರು ಸಿಂಹಾದ್ರಿಯ 220 ನಂಬರ್ ಗಳ ಫೋನ್ ಕಾಂಟ್ಯಾಕ್ಟ್ ಪರಿಶೀಲಿಸಿದಾಗ, ಸುಮಾರು ಹತ್ತು ಮಂದಿ ಸಾವನ್ನಪ್ಪಿರುವ ಅಂಶ ಬೆಳಕಿಗೆ ಬಂದಿತ್ತು ಎಂದು ವರದಿ ತಿಳಿಸಿದೆ.

ಸಿಂಹಾದ್ರಿ ಏಲುರು ಕಾಂಪ್ಲೆಕ್ಸ್ ಅಪಾರ್ಟ್ ಮೆಂಟ್ ನಲ್ಲಿ ವಾಚ್ ಮೆನ್(ಕಾವಲುಗಾರ) ಆಗಿ ಕೆಲಸ ಮಾಡುತ್ತಿದ್ದ.

Advertisement

ಸಿಂಹಾದ್ರಿ ಹಾಗೂ ಇತರರನ್ನು ವಿಚಾರಣೆಗೊಳಪಡಿಸಿದಾಗ ನೀವು ನಮಗೆ ಹಣ ಅಥವಾ ಚಿನ್ನವನ್ನು ತಂದು ಕೊಟ್ಟರೆ ಅದನ್ನು ಎರಡರಷ್ಟನ್ನಾಗಿ ಮಾಡಿ ಕೊಡುವುದಾಗಿ ಸಂತ್ರಸ್ತರನ್ನು ಮೂರ್ಖರನ್ನಾಗಿಸುತ್ತಿದ್ದರಂತೆ. ಹೀಗೆ ಕಾವಲುಗಾರನ ಬಳಿ ಹಣ ಅಥವಾ ಚಿನ್ನ ತಂದ ನಂತರ ಅವರಿಗೆ ಸೈನೆಡ್ ಲೇಪಿತ ಪ್ರಸಾದ ಕೊಡುತ್ತಿದ್ದನಂತೆ. ಹೀಗೆ ಪ್ರಸಾದ ತಿಂದ ವ್ಯಕ್ತಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪುತ್ತಿದ್ದರು ಎಂದು ವಿವರಿಸಿದ್ದಾನೆ.

ವಿಜಯವಾಡದಲ್ಲಿ ಕಾವಲುಗಾರ ಸಿಂಹಾದ್ರಿಯ ಗೆಳೆಯನ ಬೆಳ್ಳಿ ಲೇಪನ ಮಾಡುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಜ್ಜಿ ಹಾಗೂ ಸೊಸೆ ಸೈನೆಡ್ ಅನ್ನು ಪೂರೈಸುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. 2018ಹಾಗೂ 2019ರ ನಡುವೆ ಹತ್ತು ಮಂದಿಯನ್ನು ಹತ್ಯೆಗೈದಿರುವುದಾಗಿ ಸಿಂಹಾದ್ರಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next