Advertisement

ಹಾಲು, ನೀರಿನಲ್ಲಿ ನಿಕ್ಕೆಲ್‌, ಸೀಸದ ಅಂಶವೇ ಎಲೂರು ಸಮಸ್ಯೆಗೆ ಕಾರಣ

07:19 AM Dec 09, 2020 | mahesh |

ಎಲೂರು: ಆಂಧ್ರಪ್ರದೇಶದ ಎಲೂರು ಪಟ್ಟಣದಲ್ಲಿ 500ಕ್ಕೂ ಅಧಿಕ ಮಂದಿ ಅನಾರೋಗ್ಯಕ್ಕೆ ಒಳಗಾಗಲು ಮತ್ತು ಒಬ್ಬನ ಸಾವಿಗೆ ಹಾಲು ಮತ್ತು ನೀರಿನಲ್ಲಿ ಸೀಸ, ನಿಕ್ಕೆಲ್‌ನ ಅಂಶಗಳು ಸೇರಿಕೊಂಡದ್ದೇ ಕಾರಣ. ನವದೆದಹಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಇತರ ಪ್ರಮುಖ ಸಂಸ್ಥೆಗಳು ನಡೆಸಿದ ಪ್ರಾಥಮಿಕ ಅಧ್ಯಯನದಿಂದ ಈ ಅಂಶ ದೃಢಪಟ್ಟಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ ರೆಡ್ಡಿ ಅವರಿಗೆ ಈ ವರದಿಯನ್ನು ಸಲ್ಲಿಸಲಾಗಿದೆ.

Advertisement

ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಪ್ರಕಟನೆ ಬಿಡುಗಡೆ ಮಾಡಿದ್ದು, ಎಲೂರಿನಲ್ಲಿನ ಬೆಳವಣಿಗೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಎಂ ಆದೇಶ ನೀಡಿದ್ದಾರೆ ಎಂದು ಅದರಲ್ಲಿ ಹೇಳಲಾಗಿದೆ. ಜತೆಗೆ ಪ್ರತಿ ಯೊಬ್ಬರ ಆರೋಗ್ಯ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆಯೂ ಸಿಎಂ ಸೂಚಿಸಿದ್ದಾರೆ.

ಡಿಸಿಎಂ, ಆರೋಗ್ಯ ಸಚಿವ ಎ.ಕೆ.ಕೆ.ಶ್ರೀನಿವಾಸ ಮಾತ  ನಾಡಿ ಅನಾರೋಗ್ಯಕ್ಕೆ ಒಳಗಾದವರು ಚೇತರಿಸಿ  ಕೊಳ್ಳುತ್ತಿದ್ದಾರೆ. ಹೀಗಾಗಿ ಭೀತಿಗೆ ಒಳಗಾಗುವ ಅಗತ್ಯ ವಿಲ್ಲ ಎಂದು ಹೇಳಿದ್ದಾರೆ. ಆರೋಗ್ಯ ಇಲಾಖೆ ನೀಡಿದ ಮಾಹಿತಿಯಂತೆ ಒಟ್ಟು 505 ಮಂದಿಗೆ ಅನಾರೋಗ್ಯ ಉಂಟಾಗಿದೆ. ಈ ಪೈಕಿ 370 ಮಂದಿ ಚೇತರಿಸಿ ಕೊಂಡಿದ್ದಾರೆ ಮತ್ತು 120 ಮಂದಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. 19 ಮಂದಿ ಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡ ಮತ್ತು ಗುಂಟೂರಿನ ಸರಕಾರಿ ಆಸ್ಪತ್ರೆಗಳಿಗೆ ಕಳು ಹಿಸಲಾಗಿದೆ ಎಂದು ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next