Advertisement

ಅಂಧೇರಿ ಶ್ರೀ ಗಾಯತ್ರಿ ಮಾತಾ ಮಂದಿರ ವಾರ್ಷಿಕೋತ್ಸವ, ಹನುಮ ಜಯಂತಿ 

11:51 AM Apr 04, 2018 | |

ಮುಂಬಯಿ: ಅಂಧೇರಿ ಪೂರ್ವದ ಚಕಾಲ, ತರುಣ್‌ ಭಾರತ್‌ ಸೊಸೈಟಿ, ಶ್ರೀ ಪಂಚಮ ಸ್ವಾಮೀಜಿ ಆಶ್ರಮದ ಶ್ರೀ ಪಂಚಮುಖೀ ಶ್ರೀ ಗಾಯತ್ರಿ ಮಾತಾ ಮಂದಿರದ ದ್ವಿತೀಯ ವಾರ್ಷಿಕೋತ್ಸವ ಮತ್ತು ಹನುಮಾನ್‌ ಜಯಂತಿ ಆಚರಣೆ ಮಾ. 31ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಶ್ರೀ ಸದ್ಗುರು ಪಂಚಮ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 5.30ರಿಂದ ಗಣಹೋಮ, ಆಂಜನೇಯ ಜನ್ಮಾರತಿ, ಬೆಳಗ್ಗೆ 7ರಿಂದ ಶ್ರೀ ಶನೀಶ್ವರ ಮಹಾಪೂಜೆ, ಪೂರ್ವಾಹ್ನ 10ರಿಂದ ಮಧ್ಯಾಹ್ನ 12ರ ವರೆಗೆ ಭಜನೆ, ಮಧ್ಯಾಹ್ನ 12.30ರಿಂದ ಮಹಾಮಂಗಳಾರತಿ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡ‌ರು.

ಸಂಜೆ ನಿತ್ಯಪೂಜೆ, ಮಹಾ ಮಂಗಳಾರತಿ, ರಾತ್ರಿ ಅನ್ನ ಸಂತರ್ಪಣೆ ನಡೆಯಿತು. ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾ ಕ್ರೂಜ್‌ ಇವರಿಂದ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು.  

ಸದ್ಗುರ ಶ್ರೀ ಪಂಚಮ ಸ್ವಾಮೀಜಿ, ಮಾತೆ ಶ್ರೀ ಶರಣಮ್ಮಾ, ಅಧ್ಯಕ್ಷ ಯಶವಂತ ಬಂಗೇರ ಕಾಪು, ಉಪಾಧ್ಯಕ್ಷ ರಾಮ ಸಿ. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ್‌ ಕರ್ಕೇರ ಬಂಟ್ವಾಳ, ಗೌರವ ಪ್ರಧಾನ ಕೋಶಾಧಿಕಾರಿ ವಿಜಯ ಕೆ. ಶೆಟ್ಟಿ, ಪೂಜಾ ಸಮಿತಿಯ ಕಾರ್ಯಾ ಧ್ಯಕ್ಷ ಪ್ರಕಾಶ್‌ ಡಿ. ರೈ ಕಯ್ನಾರ್‌ಗುತ್ತು, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಡಿ. ರೈ, ಉಪ ಕಾರ್ಯಾಧ್ಯಕ್ಷ ರವಿ ಪೂಜಾರಿ ಬೆಳುವಾಯಿ, ಗೌರವ ಕಾರ್ಯದರ್ಶಿ ಸತೀಶ್‌ ಪೂಜಾರಿ, ಗೌರವ ಕೋಶಾಧಿಕಾರಿ ಕೃಷ್ಣಾನಂದ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next