ಬೆಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ರಕ್ತ ಚಂದನ ಮಾರಾಟ ಮಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 2.68 ಕೋಟಿ ರೂ. ಮೌಲ್ಯದ ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದರು.
ದ್ವಿಚಕ್ರ ವಾಹನದಲ್ಲಿ ರಕ್ತಚಂದನ ಮರದ ತುಂಡುಗಳನ್ನು ಸಾಗಾಟಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ನ್ಯೂಟಿಂಬರ್ ಲೇಔಟ್‌ನಿವಾಸಿ ವಿನೋದ್(32) ಬಂಧಿತ. ಆರೋಪಿಯಿಂದ 1,580 ಕೆ.ಜಿ. ರಕ್ತ ಚಂದನ ಮರದ ತುಂಡುಗಳನ್ನು ವಶಕ್ಕೆಪಡೆಯಲಾಗಿದೆ. ಆರೋಪಿ ವಿನೋದ್ ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ದಾಗ ಹೆಸರಘಟ್ಟ ಬಳಿಯ ತೋಟದಮನೆಯೊಂದರ ನೀರಿನ ಸಂಪಿನಲ್ಲಿ ರಕ್ತಚಂದನ ತುಂಡುಗಳನ್ನು ವಿನೋದ್ ಬಚ್ಚಿಡುತ್ತಿದ್ದ. ಅಲ್ಲಿಂದಲೇ ಗ್ರಾಹಕರಿಗೆ ರಕ್ತಚಂದನ ತುಂಡುಗಳನ್ನು ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ಮತ್ತೂಂದು ಪ್ರಕರಣದಲ್ಲಿ ವಿನೋದ್‌ನ ಹೇಳಿಕೆ ಆಧರಿಸಿ ಇತರೆನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಲಕ್ಷ್ಮಯ್ಯ, ಸಂಜಯ್,ರಾಜು ಮತ್ತು ಕೃಷ್ಣ ಎಂಬವರನ್ನು ಬಂಧಿಸಾಗಿದೆ. ಆರೋಪಿಗಳು ಮೈಸೂರು ರಸ್ತೆಯ
ಸ್ಯಾಟಲೈಟ್ ಬಳಿಯ ನ್ಯೂಟಿಂಬರ್ ಲೇಔಟ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ.
ಬಳಿಕ ವಿಚಾರಣೆ ವೇಳೆ ರಕ್ತಚಂದನವನ್ನುಆಂಧ್ರಪ್ರ ದೇಶದಿಂದ ತಂದು ವಿನೋದ್‌ಗೆ ಮಾರಾಟ ಮಾಡಿದ್ದರು. ಬ್ಯಾಟರಾಯನಪುರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.