Advertisement

72 ವರ್ಷಗಳ ನಂತರ ಪಾಕ್‌ ದೇಗುಲ ಮತ್ತೆ ಓಪನ್‌

01:01 AM Jul 30, 2019 | mahesh |

ಲಾಹೋರ್‌: ಭಾರತ ಇಬ್ಭಾಗವಾಗಿ ಪಾಕಿಸ್ತಾನ ಉದಯವಾದಾಗಿನಿಂದ ಮುಚ್ಚಲ್ಪಟ್ಟಿದ್ದ ಪಾಕಿಸ್ತಾನದ ಸಿಯಾಲ್ಕೋಟ್‌ನಲ್ಲಿರುವ, 1000 ವರ್ಷಗಳಷ್ಟು ಪುರಾತನವಾದ ‘ಶಾವಾಲಾ ತೇಜ ಸಿಂಗ್‌’ ಎಂಬ ಹಿಂದೂ ದೇಗುಲವೊಂದನ್ನು 72 ವರ್ಷಗಳ ನಂತರ ಸೋಮವಾರ ಸಾರ್ವಜನಿಕರ ದರ್ಶನಕ್ಕಾಗಿ ತೆರೆಯಲಾಗಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಆದೇಶದ ಮೇರೆಗೆ ದೇಗುಲ ತೆರೆಯಲಾಗಿದೆ ಎಂದು ಪಾಕ್‌ನ ‘ಸಮಾ ನ್ಯೂಸ್‌’ ವರದಿ ಮಾಡಿದೆ. ಸ್ಥಳೀಯ ಹಿಂದೂ ಸಂಸ್ಥೆಯೊಂದರ ಆಗ್ರಹದ ಮೇರೆಗೆ ಈ ದೇಗುಲ ತೆರೆಯಲಾಗಿದ್ದು, ಅಲ್ಪಸಂಖ್ಯಾತರ ಧಾರ್ಮಿಕ ಕೇಂದ್ರಗಳ ನಿರ್ವಹಣೆಯ ಹೊಣೆ ಹೊತ್ತಿರುವ ‘ದ ಇವಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌’ (ಇಟಿಪಿಬಿ), ಈ ದೇಗುಲವನ್ನು ಭಕ್ತಾದಿಗಳಿಗೆ ಮುಕ್ತವಾಗಿಸಿದೆ. ಸಿಯಾಲ್ಕೋಟ್‌ನ ಧಾರೋವಾಲ್ ಪ್ರಾಂತ್ಯದ ಶಾವಾಲಾ ತೇಜ ಸಿಂಗ್‌ ದೇಗುಲವೆಂದೇ ಹೆಸರಾದ ಈ ದೇವಸ್ಥಾನವು ಲಾಹೋರ್‌ನಿಂದ 100 ಕಿ.ಮೀ. ದೂರದಲ್ಲಿದೆ.

Advertisement

1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ನಡೆದಾಗ, ಸಿಯಾಲ್ಕೋಟ್‌ನಲ್ಲಿದ್ದ ಉದ್ರಿಕ್ತರು ಈ ದೇಗುಲಕ್ಕೆ ಕೊಂಚ ಹಾನಿ ಮಾಡಿದ್ದರು. ಇತ್ತೀಚೆಗೆ, ಇಟಿಪಿಬಿ ಇದರ ದುರಸ್ತಿ ಮಾಡಿತ್ತು ಎಂದು ಇಟಿಬಿಪಿ ವಕ್ತಾರ ಅಮೀರ್‌ ಹಶ್ಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next